ಲೋಕದರ್ಶನ ವರದಿ
ಹೊಸಪೇಟೆ 22: "ಸಮನಾಗಿ ಯೋಚಿಸಿ, ಉತ್ಸುಕರಾಗಿ ನಿಮರ್ಿಸಿ " ಇದು ಈ ವರ್ಷದ ಘೋಷ ವಾಖ್ಯಎಂದು ಫಾದರ್ ಲಾರೆನ್ಸ ಹೇಳಿದರು.
ಪ್ರತಿ ವರ್ಷದಂತೆ ಡಾನ್ ಬೋಸ್ಕೊ ಸಂಸ್ಥೆಯಲ್ಲಿ ಆಚರಿಲಾಗುವ ಮಹಿಳಾ ದಿನಾಚರಣೆಯಲ್ಲಿ ಮೇಲಿನಂತೆ ನುಡಿದರು. ಪ್ರತಿಯೊಬ್ಬ ಮಹಿಳೆಯರೂ ಸಹ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಸಹ ಮನ:ಪೂತರ್ಿಯಾಗಿ ಹಾಗು ಸಕಾರಾತ್ಮಕ ಯೋಚನೆಗಳನ್ನು ಮಾಡುವುದರ ಮೂಲಕ ಕೆಲಸ ಕಾರ್ಯಗಳನ್ನು ಮಾಡಿದರೆ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವೀಯಾಗಿ ಮಾಡಲು ಸಾಧ್ಯ. ಹಾಗೇಯೇ ಹೆಣ್ಣು ಮತ್ತು ಗಂಡು ಮಕ್ಕಳೆಂಬ ಬೇಧ ಭಾವವನ್ನು ಮಾಡದೆ ಎಲ್ಲರನ್ನು ಸಮಾನವಾಗಿ ಕಂಡು ಎಲ್ಲ ಕೆಲಸಕಾರ್ಯಗಳನ್ನು ರೂಪಿಸಿದಾಗ ಉತ್ತಮ ಸಮಾಜವನ್ನು ನಿಮರ್ಾಣ ಮಾಡಲು ಸಾಧ್ಯ ಎಂದುಅವರು ತಿಳಿಸಿದರು.
ಸ್ಥಳೀಯ ಜಂಬುಬಾಥ ರಸ್ತೆಯಲ್ಲಿರುವ ಡಾನ್ ಬಾಸ್ಕೊ ಸಂಸ್ಥೆಯ ಟಿ.ಡಿ.ಹೆಚ್ ಯೋಜನೆ ಮತ್ತು ತರುಣಿ ಮಹಿಳಾ ಅಭಿವೃದ್ದಿ ಸಂಸ್ಥೆಯ ವತಿಯಿಂದ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪದರ್ೆಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ತವಾಡ್ಗಿ ಪೊಲೀಸ್ ಠಾಣೆಯ ಮಹಿಳಾ ಎ.ಎಸ್.ಐ ಸರೋಜ,ನೆರವೇರಿಸಿದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕರಾಗಿರುವ ಚೆನ್ನಮ್ಮ, "ಕಾನಿ ಶಾಲೆಯ ಕಾರ್ಯದಶರ್ಿ ಕ್ಯಾರೊಲೀನ್, ಗುರುಕುಲ ಶಾಲೆಯ ಮುಖ್ಯಸ್ಥರಾದ ಮಧು , ತರುಣಿ ಅಧ್ಯಕ್ಷೆ ಹನುಮಂತಮ್ಮ ಸಲಹೆಗಾರರಾದ ಸಿಸ್ಟರ್ ಸೀಮಾ, ವಿಮಲ್ ನಿವಾಸ ಸಂಸ್ಥೆಯ ಸಿಸ್ಟರ್ ಸೆಲಿನ್ ಹಾಗು ಡಾನ್ ಬಾಸ್ಕೊ ಶಾಲೆಯ ಮುಖ್ಯ ಗುರುಗಳಾದ ಫಾ/ಜೂಡ್ ಆನಂದ್ ಅವರು ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ "ಚೆನ್ನಮ್ಮ ಮಾತನಾಡಿ ಮಹಿಳೆ ಸರ್ವತೋಮುಖ ಅಭಿವೃದ್ಧಿಗೆ ಸಕರ್ಾರದ ವತಿಯಿಂದ ಹಲವಾರು ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗು ವಿಶೇಷವಾಗಿ ಮಹಿಳೆಯರ ಪೌಷ್ಠಿಕತೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂ ಮಾತೃಪೂರ್ಣ, ಮಾತೃವಂದನಾ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವೀಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸಕರ್ಾರದ ವತಿಯಿಂದ ಇರುವ ಪ್ರತಿಯೊಂದು ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಮಹಿಳೆ ಸಬಲರಾದಾಗ ಮಾತ್ರ ಉತ್ತಮ ಸಮಾಜದ ನಿಮರ್ಾಣ ಸಾಧ್ಯ ಎಂದುರು. ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಂದ ಹಾಡಿನ ಸ್ಪದರ್ೆ, ಗುಂಪು ನೃತ್ಯ, ಭಾಷಣ ಮತ್ತು ವೇಷಭೂಷಣ ಸ್ಪದರ್ೆಗಳನ್ನು ನಡೆಯಿತು. ಸ್ಪದರ್ೆಯಲ್ಲಿ 642 ಮಹಿಳೆಯರು ಪಾಲ್ಗೊಂಡಿದ್ದರು. ನಿರೂಪಣೆಯನ್ನು ಸಾವಿತ್ರಿ, ಸ್ವಾಗತವನ್ನು ಭಾಗ್ಯ ಹಾಗು ವಂದನೆಯನ್ನು ಚಿದಾನಂದ ನಡೆಸಿದರು