ಜೀವನದಲ್ಲಿ ಶಿಸ್ತು ಆಳವಡಿಸಿಕೊಂಡರೆ ಸುಂದರ ಬದುಕು ರೂಪಿಸಲು ಸಾಧ್ಯ: ಕುಲಾಲ

ಲೋಕದರ್ಶನವರದಿ

ಶಿಗ್ಗಾವಿ15: ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡರೆ ಸುಂದರ ಬದುಕು ರೂಪಿಸಿಕೊಳ್ಳಬಹುದು. ಇವೆರಡು ಅಭಿವೃದ್ಧಿಗೆ ಪೂರವು ಹೌದು  ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾವೇರಿ ಜಿಲ್ಲಾ ಕಚೇರಿ ನಿದರ್ೇಶಕ ಮಹಾಬಲ ಕುಲಾಲ ಹೇಳಿದರು.

    ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ರಾಣೇಬೆನ್ನೂರು ಯೋಜನಾ ಕಚೇರಿಯಿಂದ ಹಮ್ಮಿಕೊಂಡಿದ್ದ ಸ್ನೇಹಕೂಟ ಸಮಾರಂಭ ಜರುಗಿತು.

  ನಂತರ ಮಾತನಾಡಿದ ಅವರು ಸ್ನೇಹಕೂಟ ಎಂದರೆ ಒಗ್ಗಟ್ಟಿನ ಸಂಕೇತ.ಇಲ್ಲಿ ಎಲ್ಲರೂ ಒಂದೇ. ನಮಗೆ ಗೊತ್ತಿರದ ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರೆ ನಿಗದಿತ ಗುರಿ ತಲುಪಲು ಸಹಕಾರಿ ಆಗುತ್ತದೆ ಎಂದು ನುಡಿದರು. ಉತ್ಸವ ರಾಕ್ ಗಾರ್ಡನ್ ಹೆಸರಿಗೆ ತಕ್ಕಂತೆ. ಎಲ್ಲರಲ್ಲೂ ಹೊಸ ಉತ್ಸಾಹ ತುಂಬುತ್ತದೆ ಎಂದ ಮಹಾಬಲ ಕುಲಾಲ, ಇದು ಕಲೆ, ಸಂಸ್ಕೃತಿಯ ಬೀಡು. ಈ ಸ್ನೇಹಕೂಟ ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತದೆ ಎಂಬ ವಿಶ್ವಾಸ ಇದೆ ಎಂದರು.

ರಾಣೇಬೆನ್ನೂರು ಕಚೇರಿಯ ಯೋಜನಾಧಿಕಾರಿ ಈಶ್ವರ ಮಾತನಾಡಿ, ಸ್ನೇಹಕೂಟ ನಾವೆಲ್ಲರೂ ಎಂಬ ಭಾವನೆ ಮೂಡಿಸುತ್ತದೆ ಅಲ್ಲದೆ ಎಲ್ಲರಲ್ಲೂ ಹೊಸ ಉತ್ಸವ ತುಂಬಲು ಸಹಕಾರಿ ಆಗುತ್ತದೆ. ವರ್ಷವೀಡಿ ಕೆಲಸ ಮಾಡುವವರಿಗೆ ಒಂದು ದಿನವಾದರೂ ವಿಶ್ರಾಂತಿಯೊಂದಿಗೆ ಮನೋರಂಜನೆಯು ಅಗತ್ಯ ಎಂದು ಹೇಳಿದರು. ಯೋಜನೆಯ ಕಾರ್ಯಕರ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ನೇಹಕೂಟ ಅಂಗವಾಗಿ ಏರ್ಪಡಿಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೇಲ್ವಿಚಾರಕ ವಿಶ್ವನಾಥ ನಿರೂಪಿಸಿದರು. ಈಶ್ವರ ಸ್ವಾಗತಿಸಿದರು. ಮೇಲ್ವಿಚಾರಕಿ ಶಶಿಕಲಾ ವಂದಿಸಿದರು.