ಕೋಳಿಗುಡ್ಡ 02: ಸಮೀಪದ ಏಬರಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಥಮಿಕ ಶಾಲೆಯ ಅಕ್ಷರಬಂಡಿ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವವನ್ನು ರಾಯಬಾಗ ತಾ. ಪಂ ಸದಸ್ಯ ರವಿಶಂಕರ ನರಗಟ್ಟಿ ಢೋಲು ಬಾರಿಸಿ ಚಾಲನೆ ನೀಡಿದರು. ಶಾಲೆಯಲ್ಲಿ ವಿಶೇಷವಾಗಿ ವಿದ್ಯಾಥರ್ಿಗಳ ಊಟಕ್ಕೆ ಹೋಳಿಗೆ, ಸೀಖರಣಿ, ಅಣ್ಣ ಸಾಂಬಾರು ಮಾಡಿ ಉಣಬಡಿಸಿದರು.
ಶಾಲೆಯ ಪ್ರಧಾನ ಗುರು ಎ ಬಿ ಕೌಲಗುಡ್ಡ ಮಾತನಾಡಿ ಸಕರ್ಾರ ಶಿಕ್ಷಣದ ಸೌಲಭ್ಯಗಳನ್ನು ಮನದಟ್ಟು ಮಾಡಿಕೊಂಡು ಶಾಲೆಯ ಪ್ರಗತಿಗೆ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಬೇಕು ಮತ್ತು ಶೈಕ್ಷಣಿಕ ರಂಗದಲ್ಲಿ ವಿವಿಧ ರೀತಿಯ ಅಧ್ಯಯನ ಮಾಡುವ ವಿದ್ಯಾಥರ್ಿಗಳಿದ್ದಾರೆ. ಮಕ್ಕಳು ದೇಶದ ಸಂಪತ್ತು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಆದರ್ಶ ವ್ಯಕ್ತಿಯಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಅವರಲ್ಲಿ ಆಚಾರ-ವಿಚಾರ, ನೈತಿಕ ಮೌಲ್ಯಗಳನ್ನು, ನಾಯಕತ್ವದ ಗುಣಗಳನ್ನು ಭಿತ್ತಿ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಾಗಿದೆ. ಅದಕ್ಕಾಗಿ ಪಾಲಕರು ಸಹಕರಿಸಬೇಕು ತಮ್ಮ ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿಷಯ ಸರಿಯೋ? ತಪ್ಪೋ, ಎಂಬ ವಿಚಾರವನ್ನು ಮನೆಯಲ್ಲಿ ನೀವು ಗಮನಹರಿಸಿ ಶಿಕ್ಷಕರಲ್ಲಿ ತಿಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಮ್ಸಿ ಅಧ್ಯಕ್ಷ ಶಂಭು ಪಾಟೀಲ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಗಾಣಿಗೇರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಉಪಾಧ್ಯಕ್ಷೆ ಹಸೀನಾ ನದಾಪ, ಸಿಆರ್ಪಿ ಬಿ ಎಸ್ ಕಶೆಟ್ಟಿ, ಗ್ರಾಪಂ ಸದಸ್ಯ ಶಿವಾನಂದಗೌಡ ಪಾಟೀಲ, ಶಂಭು ಮೋಳೆ, ಯಲ್ಲಪ್ಪ ಒಡೆಯರ, ರವೀಂದ್ರ ಸರಿಕರ, ಕಡಿವಾಲ ಮಠಪತಿ, ಕಳಸನ್ನಿ, ಶಾಲೆಯ ಭೂದಾನಿಗಳಾದ ಶಿವನಗೌಡ ಪಾಟೀಲ, ಶರಣಪ್ಪಗೌಡ ಪಾಟೀಲ, ಹಾಗೂ ಗ್ರಾಪಂ ಸಿಬ್ಬಂದಿಗಳು, ವಿದ್ಯಾಥರ್ಿಗಳು ಇದ್ದರು. ಕಾರ್ಯಕ್ರಮವನ್ನು ಎಸ್ ಎ ದೇಸಾಯಿ ನಿರೂಪಿಸಿದರು. ಜಿ ಎ ಅಂಬೇಕರ ಸ್ವಾಗತಿಸಿದರು. ಎ ಎಸ್ ಘಿವಾರಿ ವಂದಿಸಿದರು.