ಸಿಂದಗಿ : ಜನಸಾಮಾನ್ಯರ ಬೇಡಿಕೆಗೆ ತೆಲೆಬಾಗಿ ಕೆಸಲ ಮಾಡುತ್ತೇನೆ ಎಂದು ತೋಟಕಾರಿಕೆ ಸಚಿವ, ಜಿಲ್ಲಾ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ಶನಿವಾರ ಪಟ್ಟಣದ ಉಸ್ಮಾನಿ ಹಾಗೂ ನೂರಾನಿ ನಗರ ವಾರ್ಡ ನಂ. 17, 18, 19ರಲ್ಲಿ ಅಲ್ಪಸಂಖ್ಯಾತರ ಕಾಲೋನಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಆರು ಸಿಸಿ ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೆರವೆರಸಿ ಅವರು ಮಾತನಾಡಿದರು.
ವಾರ್ಡಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ನಿವಾಸಿಗಳು ವಿಕ್ಷಣೆ ಮಾಡಬೇಕು. ಒಂದು ವೇಳೆ ಕಳಪೆ ಕಂಡು ಬಂದಲ್ಲಿ ಕೆಲಸ ಬಂದ ಮಾಡಬೇಕು. ರಸ್ತೆ ಕಾಮಗಾರಿಗೆ ಇನ್ನು ಹೆಚ್ಚಿನ ಅನುದಾನ ಬೇಕಾದಲ್ಲಿ ಸರಕಾರದಿಂದ ಹೆಚ್ಚಿನ ಅನುದಾನ ತರವುವುದಾಗಿ ಬರವಸೆ ನೀಡಿದರು.
ನಿಮ್ಮ ಆಶೀವರ್ಾದದಿಂದ ಕುಮಾರಸ್ವಾಮಿ ಅವರು ತೋಟಗಾರಿಕೆ ಸಚಿವರನ್ನಾಗಿ ಮಾಡುವ ಜೊತೆಗೆ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ. ಈ ಅವಧಿಯಲ್ಲಿಯೂ ಹೆಸರು ಅಜರಾಮರವಾಗಿ ಉಳಿಯುವಂತ ಮೂರು ಕೆಸಲಗಳನ್ನು ಮಾಡುತ್ತೇನೆ. ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿದ್ದರಿಂದ ಪಟ್ಟಣದಲ್ಲಿನ ಕೆರೆಯಲ್ಲಿನ ನೀರು ಸಾಲುತ್ತಿಲ್ಲ. ಆದ್ದರಿಂದ ತಾಲೂಕಿನ ಬಳಗನೂರ ಕೆರೆಯಿಂದ ಪಟ್ಟಣದಕ್ಕೆ ನೀರು ತರುವ ಮೂಲಕ ಶಾಸ್ವತ ಕುಡಿಯುವ ನೀರಿನ ಸಮಸ್ಯೆ ಪರಿಸುವುದಾಗಿ ಬರವಸೆ ನೀಡಿದರು.
ಜೆಡಿಎಸ್ ನಗರ ಘಟಕ ಅಧ್ಯಕ್ಷ ಡಾ.ರಾಜಶೇಖರ ಸಂಗಮ, ನೂರಹ್ಮದ ಅತ್ತಾರ, ಸಲೀಮ ಜುಮನಾಳ, ಪುರಸಭೆ ಮಾಜಿ ಸದಸ್ಯ ರಾಜಣ್ಣ ನಾರಾಯಣಕರ ಸೇರಿದಂತೆ ಇತರರು ಮಾತನಾಡಿದರು.
ಪದಮಗೌಡ ಬಿರಾದಾರ, ಚಾಂದಸಾಬ ಗಣಿಹಾರ, ರಹಿಮ ಸಿಂದಗಿಕರ, ಇಮ್ತಿಹಾಜ ಖತಿಬ, ಯುಸೂಫ್ ಬೆಣ್ಣೆಶಿರೂರ, ಹಾಜಿಸಾಬ ಬೈರಾಮುಡಗಿ, ಸುರೇಶ ನಾಯಿಕ್, ಜಿಲಾನಿ ನಾಟಿಕಾರ, ಶಿವಾನಂದ ಕರನಾಳ, ಮೊಸಿನ್ ಬಿಳಗಿ, ಮೊಸಿನ್ ಮುಲ್ಲಾ, ಮೊಸಿನ್ ಜುಮನಾಳ, ಜಾವಿದ ಮುಲ್ಲಾ, ಬಾಬು ಮುಗಳಿ, ಬಾಬು ಮತರ್ೂರ, ನಬಿ ನಾಯ್ಕೋಡಿ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ವಾರ್ಡ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.