ಬಡವರಿಗೂ ಸಹಿತ ಮನೆಯ ಕನಸ್ಸನ್ನು ಈಡೇರಿಸಿದ ಸಂತೃಪ್ತಿ ನನ್ನದಾಗಿದೆ: ಬೊಮ್ಮಾಯಿ

ಲೋಕದರ್ಶನ ವರದಿ

ಶಿಗ್ಗಾವಿ 08: ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬಡವರಿಗಾಗಿ ಹಲವಾರು  ಕಾರ್ಯಕ್ರಮಗಳನ್ನು ರೂಪಿಸಿದ್ದೆವೆ, ಅದರಲ್ಲಿ ಪ್ರಮುಖವಾಗಿ ಜಿ+1 ಮನೆಗಳ ಯೋಜನೆಯು ಒಂದಾಗಿದ್ದು ಬಡವರ ಪರವಾದ ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಬಡವರಿಗೂ ಸಹಿತ ಮನೆಯ ಕನಸ್ಸನ್ನು ಈಡೇರಿಸಿದ ಸಂತೃಪ್ತಿ ನನ್ನದಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಕಾಲೋನಿಯಲ್ಲಿ ಪುರಸಭೆ ವತಿಯಿಂದ ನೂತನವಾಗಿ ನಿಮರ್ಾಣವಾದ ವಾಜಪೇಯಿ ನಗರ ವಸತಿ ವಿಶೇಷ ಪೈಲೇಟ್ ಗುಂಪು ಮನೆ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ ಯೋನೆಯ ಅಡಿಯಲ್ಲಿ ನಿಮರ್ಾಣವಾಗಿರುವ ಮನೆಗಳ ಸ್ವಾದಿನ ಪತ್ರಗಳ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ನನ್ನ ಅಭಿವೃದ್ಧಿ ಕಾರ್ಯಗಳಲ್ಲಿ 2012 ರಲ್ಲಿ ಜಿ+1 ಮನೆಗಳನ್ನು ಮಾಡುವ ತಿಮರ್ಾನವನ್ನು ಕೈಗೊಂಡಿದ್ದೆವು ಕನರ್ಾಟಕದಲ್ಲಿಯೇ ಮೊದನೆಯ ಯೋಜನೆ ಇದಾಗಿದ್ದು ಇದರಲ್ಲಿ 361 ಮನೆಗಳನ್ನು ಕೊಡಲಾಗಿದೆ ಅದರಲ್ಲಿ 100 ಕ್ಕೂ ಹೆಚ್ಚು ಫಲಾನುಭವಿಗಳು ಮುಂದೆ ಬಂದರೂ ನಿಗದಿಯಾದ 40,000 ರೂ ವಂತಿಗೆ ಹಣವನ್ನು ಕಟ್ಟಲು ಕೆಲ ಜನ ಮಾತ್ರ ಮುಂದೆ ಬಂದರು, ಆದರೆ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ, ಬ್ಯಾಂಕುಗಳು ಸಹಿತ ಸಾಲ ಕೊಡಲಿಲ್ಲ, ಇದಕ್ಕೆ ಪೂರಕವಾಗಿ 2013 ರಿಂದ 2016 ರ ವರೆಗೆ ವಿಶೇಷ ಅನುಧಾನ ಪಡೆಯಲು ನಿರಂತರವಾಗಿ ಸಕರ್ಾರವನ್ನು ಕೇಳಲು ಹೊದರೂ ಪ್ರಯೊಜನವಾಗಲಿಲ್ಲ, ನಂತರ 2017-18 ರಲ್ಲಿ ಇದರ ಕುರಿತು ಕೇಂದ್ರ ಸಕರ್ಾರದ ಪ್ರಧಾನಮಂತ್ರಿ ಆವಾಸ ಯೋಜನೆಯಡಿಯಲ್ಲಿ 1.50 ಲಕ್ಷ ಹಣವನ್ನು ತರಲಾಯಿತು ಅದು ಇಂದು 11 ಕೋಟಿ ಒಟ್ಟು ಹಣ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಮೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ 150 ಮನೆಗಳನ್ನು ನಿಗದಿತ ವೇಳೆಯಲ್ಲಿ ಕೆಲಸವನ್ನು ಮುಗಿಸುವ ಮೂಲಕ ಬಡವರಿಗೆ ವಸತಿಯ ಅನುಕೂಲ ಮಾಡಿಕೊಡುವಲ್ಲಿ ಅಧಿಕಾರಿಗಳಿಗೆ ಸಲಹೆ ಕೊಡಲಾಗಿದೆ ಎಂದರು.

ಈ ಯೋಜನೆಯಿಂದ  ಬಡವರಿಗೆ ಸೂರು ನೀಡಿರುವದು ವಯಕ್ತಿಕವಾಗಿ ಸಂತೋಷ ತಂದಿದೆ ಎಂದ ಅವರು ಹೊಸ ಫಲಾನುಭವಿಗಳಗೆ ಸದ್ಯದಲ್ಲಿಯೇ ಹೊಸ ಅಜರ್ಿಗಳನ್ನು ತೆಗೆದುಕೊಳ್ಳಲಾಗುವದು ಎಂದರು ಒಟ್ಟಾರೆ 2020ರ ವೇಳೆಗೆ ಪ್ರಧಾನಿ ಮೊದಿಯವರ ಕನಸಿನಂತೆ ಎಲ್ಲ ಬಡವರಿಗೆ ಉದ್ಯೋಗ, ವಸತಿ, ನೀರು, ವಿದ್ಯುತ್ ಗಳ ಜೊತೆಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಬಡತನ ನಿಮರ್ೂಲನೆ ಮಾಡಲಾಗುವದು ಎಂದರು.

ಪುರಸಭೆ ಸದಸ್ಯ ಸುಭಾಷ ಚೌವಾಣ ಮಾತನಾಡಿ ಶಾಸಕರ ಕನಸ್ಸಿನ ಕೂಸಾದ ಬಡವರಿಗೆ ಸೂರು ಒದಗಿಸುವ ಯೋಜನೆ ಇಂದು ನನಸ್ಸಾಗಿದೆ, ಬಡವರಿಗೆ ಕಡಿಮೆ ದರದಲ್ಲಿ ಮನೆ ಒದಗಿಸಲಾಗಿದೆ 40,000 ರೂಗಳ ವಂತಿಗೆ ಹಣ ಕಟ್ಟಲಾಗದ ಸ್ಥಿತಿಯಲ್ಲಿರುವವರಿಗೆ ಆರ್ಸಿಸಿ ಮನೆಯಲ್ಲಿ ಬದುಕುವಂತ ಅವಕಾಶ ಕಲ್ಪಿಸಲಾಗಿದೆ, ನಗರದ ಸೌಂದರ್ಯಕ್ಕೂ ಸಹಿತ ಹೆಚ್ಚು ಒತ್ತು ನೀಡಲಾಗಿದ್ದು ಒಟ್ಟಾರೆ ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ಶ್ರಮ ಹೆಚ್ಚಿದೆ ಎಂದರು.

ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕಿರೇಶ ಶಿಗ್ಗಾವಿ, ಕೆಸಿಸಿ ಬ್ಯಾಂಕ ನಿದರ್ೇಶಕ ಗಂಗಣ್ಣ ಸಾತಣ್ಣವರ, ಶ್ರೀಕಾಂತ ಬುಳ್ಳಕ್ಕನವರ, ಶಿವಾನಂದ ಮ್ಯಾಗೇರಿ ಮುಖ್ಯಾಧಿಕಾರಿ ಎಮ್,ಕೆ,ಗುಡದಾರಿ, ಫಕ್ಕಿರಪ್ಪ ವಡ್ಡರ, ಮುತ್ತು ಕಟ್ಟಿಮನಿ, ನಿಲವ್ವ ಕಾಲವಾಡ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಫಲಾನುಭವಿಗಳು ಹಾಜರಿದ್ದರು.