ನಮ್ಮ ಕುಟುಂಬದ ಪ್ರೇರಣೆಯಿಂದ ಜನ ಸೇವೆಯಲ್ಲಿ ತೊಡಗಿದ್ದೇನೆ : ಭರತ್ ಬೊಮ್ಮಾಯಿ

I am involved in public service due to the motivation of my family: Bharat Bommai

ನಮ್ಮ ಕುಟುಂಬದ ಪ್ರೇರಣೆಯಿಂದ ಜನ ಸೇವೆಯಲ್ಲಿ ತೊಡಗಿದ್ದೇನೆ :  ಭರತ್ ಬೊಮ್ಮಾಯಿ 

ಶಿಗ್ಗಾವಿ  28: ನಮ್ಮ ತಾತ, ನನ್ನ ತಂದೆ ಸೇರಿದಂತೆ ನಮ್ಮ ಕುಟುಂಬ ನಿರಂತರವಾಗಿ ಜನ ಸೇವೆಯ ಮೂಲಕ ಜನರೊಂದಿಗೆ ಇರುವುದರಿಂದ, ನಾನು ಸಹ ನಮ್ಮ ಕುಟುಂಬದ ಪ್ರೇರಣೆಯಿಂದ ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.     ಪಟ್ಟಣದ ಹೊರವಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ  ಬೊಮ್ಮಾಯಿ ಅವರ 65 ಹುಟ್ಟು ಹಬ್ಬದ ಪ್ರಯುಕ್ತ  ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗ ಇವರ ಸಯುಕ್ತ ಆಶ್ರಯದಲ್ಲಿ ನಡೆದ  ಉಚಿತ ಆರೋಗ್ಯ ತಪಾಸಣೆ, ಕಣ್ಣು ತಪಾಸಣೆ, ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಅವರು ತಂದೆ ತಾಯಿಯ ಆಶೀರ್ವಾದದ ಜೊತೆಗೆ ಜನರ ಬೆಂಬಲವಿದ್ದರೆ ನಾವು ಮಾಡುವ ಯಾವುದೆ ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ  ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಾಲೂಕಿನ ಜನರ ಪ್ರೀತಿ ಅಭಿಮಾನ ಬೆಂಬಲ ದೊರೆತಿರುವುದು ನನ್ನ ಭಾಗ್ಯವಾಗಿದ್ದು. ನನ್ನ ಜೀವನದ ಕೊನೆ ಉಸಿರು ಇರುವರೆಗೂ ಜನಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿರುತ್ತೇನೆ ಎಂದು ಹೇಳಿದರು.    

      ಬಸವರಾಜ ಬೊಮ್ಮಾಯಿ ಅವರ ಹುಟ್ಟು ಹಬ್ಬದ ಪ್ರಯುಕ್ತ  ಅಜೇಯ ಹುಲಮನಿ,  ಡಾ. ಶ್ರುತಿ ಕುಲಕರ್ಣಿ,  ಡಾ. ರೇವಣಸಿದ್ಧಯ್ಯ್‌ ಅಂಗಡಿ, ಡಾ. ಅಮರಜಿತ, ಡಾ. ಪ್ರಿಯಾಂಕಾ ಗೌಡ್ರ, ಡಾ.ವಿನಾಯಕ ಗಂಜಿ  ಸೇರಿದಂತೆ ಇತರೆ ವೈದ್ಯಕೀಯ ಸಿಬ್ಬಂದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.       ಕಾರ್ಯಕ್ರಮದಲ್ಲಿ ಭಾಜಪ ತಾಲೂಕ ಅಧ್ಯಕ್ಷ ವಿಶ್ವಾನಾಥ ಹರವಿ, ಗಂಗಣ್ಣ ಸಾತಣ್ಣನವರ,ಶಿವಪ್ರಸಾದ ಸುರಗೀಮಠ, ಡಿ ಎಸ್ ಮಾಳಗಿ, ರವಿ ಕುಡವಕ್ಕಲಿಗೇರ, ಶಂಕರಗೌಡ ಪೊಲೀಸಗೌಡ್ರ, ಶಿವಾನಂದ ಮ್ಯಾಗೇರಿ, ಸುಭಾಸ ಚೌಹಾಣ, ದೇವಣ್ಣ ಚಾಕಲಬ್ಬಿ, ತಿಪ್ಪಣ್ಣ ಸಾತಣ್ಣನವರ, ನಿಂಗನಗೌಡ ದೊಡ್ಡಮನಿ,  ಡಾ. ಮಲ್ಲೇಶಪ್ಪ ರೇಣಕನಗೌಡ ಪಾಟೀಲ,  ಹನುಮಂತಪ್ಪ ಮಾದರ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ,  ನಿಂಗಪ್ಪ ಹರಿಜನ, ಪ್ರತೀಕ ಕೊಳೇಕರ, ಚೇತನ ಕಲಾಲ ಸೇರಿದಂತೆ  ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗ. ಭಾಜಪ ಕಾರ್ಯಕರ್ತರು ಪಾಲ್ಗೊಂಡಿದ್ದರು.