ಫೆಬ್ರುವರಿ 21ರಿಂದ ಹುಣಶ್ಯಾಳ ದುರ್ಗಾದೇವಿ ಜಾತ್ರಾ ಮಹೋತ್ಸವ
ಗೋಕಾಕ 28 : ಸಮೀಪದ ಸುಕ್ಷೇತ್ರ ಹೊಸ ಹುಣಶ್ಯಾಳ (ಪಿ ಜಿ ) ಗ್ರಾಮದ ಶ್ರೀ ಶಕ್ತಿ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿಯ ಮುಖಂಡರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆಬ್ರವರಿ 21 ಮತ್ತು 22 ಎರಡು ದಿನಗಳವರೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಯುವ ಧುರೀಣರಾದ ಸರ್ವೋತ್ತಮ ಜಾರಕಿಹೊಳಿ ಅವರ ಸಹಕಾರದೊಂದಿಗೆ ದೇವಿ ಅರ್ಚಕರಾದ ಸಿದ್ದಲಿಂಗ ಪೂಜೇರಿ ಅವರ ನೇತೃತ್ವದಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವದಲ್ಲಿ ಅತಿ ವೈಭವದೊಂದಿಗೆ ಜಾತ್ರೆಯು ನಡೆಯಲಿದೆ.
ದಿನಾಂಕ 21 ರಂದು ಶ್ರೀ ದುರ್ಗಾದೇವಿಗೆ ಹೊಸಮೂರ್ತಿ ಪ್ರತಿಷ್ಠಾಪನೆ ಮತ್ತು ಅಭಿಷೇಕ ಮಹಾಪೂಜೆ, ಹೋಮ ಕಾರ್ಯಕ್ರಮದಲ್ಲಿ ಪ.ಪೂ .ಶ್ರೀ ನಿಜಗುಣದೇವ ಮಹಾಸ್ವಾಮಿಗಳು, ಮ. ನಿ. ಪ್ರ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು, ಶ್ರೀ ಕೃಪಾನಂದ ಮಹಾಸ್ವಾಮಿಗಳು,ಡಾ. ಶ್ರೀ ರವಿಶಂಕರ ಸ್ವಾಮಿಗಳು ಫಾಲ್ಸ್, ನಾಗನೂರಿನ ಲಕ್ಷಿ-್ಮದೇವಿ ಅರ್ಚಕರಾದ ಶ್ರೀ ವಿಠ್ಠಲ ಪೂಜಾರಿ ಮುಂತಾದ ಮಹಾತ್ಮರು ಭಾಗವಹಿಸಲಿದ್ದಾರೆ. ಸಾಯಂಕಾಲ 6 ಕ್ಕೆ ಸುಮಾರು 20 ಗ್ರಾಮಗಳಿಂದ ಶ್ರೀ ದುರ್ಗಾದೇವಿ ಪಲ್ಲಕ್ಕಿಗಳು ಆಗಮಿಸಲಿವೆ. ಡಿ 21ರಂದು ಅತಿಥಿಗಳಿಗೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಯುವಧುರೀಣ ಸರ್ವೋತ್ತಮ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯಮಾನ್ಯರನ್ನು ಸನ್ಮಾನಿಸಲಾಗುವುದು.ಅಂದು ಕುದುರೆ, ಆನೆ ಅಂಬಾರಿ ಸೇರಿದಂತೆ ಬ್ಯಾಂಡ್ ಮೇಳ, ದಟ್ಟಿ ಕುಣಿತ, ಕರಡಿಮೇಳ ಹೀಗೆ ಸಕಲ ವಾದ್ಯವೈಭವಗಳೊಂದಿಗೆ ಶ್ರೀ ದುರ್ಗಾದೇವಿ ಮೆರವಣಿಗೆ ವೈಭವಯುತವಾಗಿ ಜರುಗಲಿದೆ.
ಅಂದು ರಾತ್ರಿ ಪರಶು
ಕೊಲೂರ ಅವರಿಂದ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8970294622, 8217012156.01 ಜಿಕೆಕೆ 28