ಲೋಕದರ್ಶನ ವರದಿ
ಹೊಸಪೇಟೆ 17: ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಲಿಂಗ ಸಮಾನತೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ನಿಗಾಘಟಕದ ಸದಸ್ಯರು, ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಚ್.ಸಿ, ತಾಂತ್ರಿಕ ವಿಭಾಗದ ಪ್ರಾಶುಪಾಲರಾದ ಫಾದರ್ ಯೇಸುದಾಸ್ರವರು, ಮಹಿಳಾ ಸಭಲೀಕರಣ ಯೋಜನೆಯ ಸಂಯೋಜಕರು ಸಿಸ್ಟರ್ ಸೀಮಾ ಮತ್ತು ಸಿಸ್ಟರ್ ಮೆಲರ್ಿನ್ರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮಕ್ಕೆ ಪ್ರಾಸ್ತವಿಕ ನುಡಿಯನ್ನು ಸಿಸ್ಟರ್ ಸೀಮಾ ಹೇಳುತ್ತಾ ಇಡೀ ಪ್ರಪಂಚವು ಅಭಿವೃಧ್ದಿ ಹೊಂದಬೇಕಾದರೆ ಮಾನವಕುಲದಲ್ಲಿ ಸಮಾನತೆ ಎಂಬುದು ಎಲ್ಲಾ ಕ್ಷೇತ್ರದಲ್ಲೂ ಬಂದರೆಮಾತ್ರ ಸಾಧ್ಯ. ಮೊದಲು ಹೆಣ್ಣು ತನ್ನತನವನ್ನು ಒಪ್ಪಿಕೊಳ್ಳಬೇಕು. ತನಗೆ ತಾನು ಪ್ರೀತಿ ಮತ್ತು ಗೌರವವನ್ನು ನೀಡುವುದು ಮುಖ್ಯ, ಆಗ ಹೆಣ್ಣು ಎಂಬ ಕೀಳುಭಾವನೆ ಹೋಗಿ ಇತರರನ್ನು ಗೌರವಿಸಲು ಹೆಮ್ಮೆಯಿಂದ ಬದುಕಲು ಸಾಧ್ಯ. ಎಂದರು. ತಾಂತ್ರಿಕ ವಿಭಾಗದ ಪ್ರಾಶುಪಾಲ ಫಾದರ್ ಯೇಸುದಾಸ್ರವರು ಕಾರ್ಯಗಾರವನ್ನುದ್ದೇಶಿಸಿ ಮಾತನಾಡುತ್ತಾ ಹೆಣ್ಣು ಹುಟ್ಟುನಿಂದ ಸಾಯುವ ತನಕ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟ ಅನುಭವಿಸುತ್ತಿರುತ್ತಾಳೆ. ಎಂದರು.
ಕರ್ನಾಟಕ ರಾಜ್ಯ ಮಕ್ಕಳ ನಿಗಾಘಟಕದ ಸದಸ್ಯರು, ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಚ್.ಸಿ, ಕಾರ್ಯಗಾರದಲ್ಲಿ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸಭಲರಾದರೆ ಅಥವಾ ವಿಧ್ಯೆಕಲಿತರೆ, ಒಳೆಯ ಕುಟುಂಬದಲ್ಲಿ ಜನಿಸಿದರೆ ಆಗುವುದಿಲ್ಲ. ಪುರುಷರು ಮಹಿಳೆಯರನ್ನು ತಮ್ಮ ಹಾಗೆಯೇ ಒಬ್ಬ ವ್ಯಕ್ತಿನ್ನಾಗಿ ಕಂಡು ಗೌರವಿಸಿದರೆ ಮಾತ್ರಸಾಧ್ಯ ಎಂದರು. ಈ ಕಾರ್ಯಗಾರಕ್ಕೆ ಒಟ್ಟು 35 ಜನ ಭಾಗವಹೀಸಿದ್ದರು.