ಅಂಗಾಂಗ ದಾನಿಗಳಿಗೆ ಸನ್ಮಾನ
ಧಾರವಾಡ 29: ಧಾರವಾಡ ಮದಿಹಾಳದ ಡಿಪೋ ಸರ್ಕಲ್ ಹತ್ತಿರ ಸಿದ್ದಾರೋಡ ಕಾಲೋನಿಯ ದಿ. ರೋಹಿತ ಜಗದೀಶ ಕುಂಬಾರ ಅವರು ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡು ಮರಣ ಹೊಂದಿದ್ದು, ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಮುಂದೆ ಬಂದು, ಅಗಸ್ಟ್ 07, 2024 ರಂದು ಧಾರವಾಡ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿರುತ್ತಾರೆ. ಕುಟುಂಬಸ್ಥರ ಮಾನವಿತೇಯ ಕಾರ್ಯವನ್ನು ಶ್ಲಾಘಿಸಿ, ಧಾರವಾಡ ಜಿಲ್ಲಾಡಳಿತವತಿಯಿಂದ ಜನವರಿ 26, 2025 ರಂದು ಗಣಾರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ ಆರ್.ಎನ್. ಶೆಟ್ಟಿ ಜಿಲ್ಲಾಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಕುಟುಂಬಸ್ಥರನ್ನು ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಿಸಿದರು.