ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಕ್ತದಾನ ಶಿಬಿರ

Blood Donation Camp by Vijayanagar District Health and Family Welfare Department

ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಕ್ತದಾನ ಶಿಬಿರ 

ಹೊಸಪೇಟೆ 16: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ, ಜಿಲ್ಲಾ ಟಾಸ್ಕ್‌ ಪೋಸ್ಟ್‌ ಸಮಿತಿ ರಕ್ತ ಸುರಕ್ಷತೆ ವಿಜಯನಗರ,  ಏಡ್ಸ್‌ ನಿಯಂತ್ರಣ ಮತ್ತು ನಿರ್ವಾಹಣ ಘಟಕ ವಿಜಯನಗರ, ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆಕಾಶವಾಣಿ ಹಾಗೂ  ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.  

ರಕ್ತದಾನ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಹೆಚ್‌. ಏನ್ ಮಹಮ್ಮದ್ ಇಮಾಮ ನಿಯಾಜಿ ರವರು ಭಾಗವಹಿಸಿ ಮಾತನಾಡಿ ಅತ್ಯಂತ ಮಹತ್ವವಾದ ದಾನದಲ್ಲಿ ರಕ್ತದಾನವು ಒಂದು ಹಾಗಾಗಿ 20 ವರ್ಷ ಮೇಲ್ಪಟ್ಟವರು ಹಾಗೂ 50 ವರ್ಷದ ಒಳಗಿನವರು ರಕ್ತದಾನ ಮಾಡುವುದರಿಂದ ಹಲವಾರು ಜನರ ಪ್ರಾಣವನ್ನು ಉಳಿಸುವ ಮಹತ್ವದ ಕಾರ್ಯ ಪ್ರತಿಯೊಬ್ಬರಿಂದಲೂ ನೀರೀಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ರಕ್ತದಾನಿಗಳಿಗೂ ಆರೋಗ್ಯಕರವಾದ ಲಾಭಗಳು ಸಹ ಇರುತ್ತದೆ ಎಂದರು. ಅತಿ ಹೆಚ್ಚಿನ ರಕ್ತವೂ ದೇಹದಲ್ಲಿ ಇರುವುದರಿಂದ ಹೃದಯಘಾತ, ಕ್ಯಾನ್ಸರ್ ಹಾಗೂ ಚರ್ಮರೋಗ, ಅಧಿಕ ಕಬ್ಬಿಣದ ಅಂಶದಿಂದ ಉಂಟಾಗುವ ಅನೇಕ ಕಾಯಿಲೆಗಳಿಗೆ ರಕ್ತದಾನ ಒಂದೇ ಪರಿಹಾರ ವಾಗಿರುತ್ತದೆ. ಹಾಗೂ ರಕ್ತದಾನ ಅತಿಯಾದ ಬೊಜ್ಜು ಹಾಗೂ ತೂಕದಿಂದ ಉಂಟಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ವಾಗಿರುತ್ತದೆ. ಹಾಗೂ ಹೊಸ ರಕ್ತ ಕಣಗಳ ಉತ್ಪಾದನೆ ರಕ್ತದವೇಗಕ್ಕೂ ಸಹಕಾರಿಯಾಗಿರುತ್ತದೆ. ಅದರಿಂದ ಈ ಒಂದು ರಕ್ತದಾನ ಶಿಬಿರವನ್ನು ಆಯೋಜಿಸಿರುವ ಹಾಗೂ ಈ ಒಂದು ರಕ್ತದಾನ ಶಿಬಿರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು.  ಇನ್ನು ಮುಂದಿನ ದಿನಗಳಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಮಟ್ಟದಲ್ಲಿ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.  

 ರಕ್ತದಾನ ಶಿಬಿರದಲ್ಲಿ 22ನೇ ವಾರ್ಡ್‌ನ  ನಗರಸಭಾ ಸದಸ್ಯರಾದ ಶಕ್ಷಾವಲಿ, ಹಾಗೂ ವಾರ್ಡ್‌ನ ಮುಖಂಡರಾದ ಟಿಂಕರ ರಫೀಕ್,  ಟೈಲರ್ ಮೆಹಬೂಬ್, ಎಲ್ಲಪ್ಪ ಕೋರಿ, ಕಟಿಗಿ ಇಸ್ಮಾಯಿಲ್,  ಆಡಳಿತ ವೈದ್ಯಾಧಿಕಾರಿಗಳಾದ ಡಾ. ದಿವ್ಯಶ್ರೀ ಹಾಗೂ ಆಕಾಶವಾಣಿ ಯು. ಪಿ. ಹೆಚ್‌. ಸಿ ವೈದ್ಯಾಧಿಕಾರಿಗಳಾದ ಅಶ್ವಿನಿ ಎನ್ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ತಿಮ್ಮಜ್ಜ, ಆಶಾ ಕಾರ್ಯಕರ್ತೆಯರಾದ ವೈದಾ ಬೇಗಂ ಪಾರ್ವತಿ ರೇಷ್ಮಾ ಹಾಗೂ ಮುತ್ತುರಾಜ್ ಹಾಗೂ ಹಲವಾರು ಜನ ರಕ್ತಧಾನಿಗಳು ಉಪಸ್ಥಿತರಿದ್ದರು