ಸುಭಾಷ ಶೇವಾಳೆರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ

ಮಾಂಜರಿ 01:  ಅಥಣಿ ತಾಲೂಕಿನ ಮೋಳವಾಡ ಗ್ರಾಮದ ಮಹಾಲಕ್ಷ್ಮಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಂಪ್ರದಾಯಿಕ ಕಿರ್ತನಕಾರರಾದ ಸುಭಾಷ ಶ್ರೀಪತಿ ಶೇವಾಳೆ ಇವರಿಗೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯವರು ಆಯೋಜಿಸಲಾದ ಪ್ರೇರಣಾ ಉತ್ಸವದಲ್ಲಿ ಭಾರತೀಯ ಸಂಸ್ಕೃತಿ ಪ್ರೇರಣಾ ಪುರಸ್ಕಾರವನ್ನು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಪರಮಾನಂದವಾಡಿಯ ಅಭಿವಾನಂದ ಸ್ವಾಮಿಜಿಗಳ ಹಸ್ತದಿಂದ ನೀಡಿ ಸನ್ಮಾನಿಸಲಾಯಿತು.

ಸುಭಾಷ ಶೆವಾಳೆ ಇವರು ಶಿಕ್ಷಕ ವೃತ್ತಿಯಲ್ಲಿದ್ದರೂ ಕುಡ ಹರಿಭಕ್ತ ಪಾರಾಯಣ ಸಮಾಜದಲ್ಲಿ ತಮ್ಮ ಕಿರ್ತನದ ಮುಖಾಂತರ ಜನರಲ್ಲಿ ಜಾಗೃತಿಯನ್ನು ಮಾಡಿ ಅಧ್ಯಾತ್ಮದ ಸಾರನ್ನು ನೀಡಿದ್ದಾರೆ ಆದ್ದರಿಂದ ಅವರಿಗೆ ಈ ಭಾರತೀಯ ಸಂಸ್ಕೃತಿ ಪ್ರೇರಣಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು ಈ ವೆಳೆ ನಿಪ್ಪಾಣಿ ಶಾಕಿ ಶಶಿಕಲಾ ಜೊಲ್ಲೆ, ಜೊಲ್ಲ ಉದ್ಗೊಗ ಸಮುಹದ ರೂವಾರಿ ಅಣ್ಣಾಸಾಹೇಬ ಜೊಲ್ಲೆ, ಹಾಲಸಿದ್ದನಾಥ ಸಕ್ಕರೆ ಕಾಖರ್ಾನೆಯ ಅಧ್ಯಕ್ಷರು ಉಪಾಧ್ಯಕ್ಷರು ನಿದರ್ೆಶಕರು ಹಾಜರಿದ್ದರು.

***