ಲೋಕದರ್ಶನ ವರದಿ
ಹುಬ್ಬಳ್ಳಿ 24: ಯಲಬುಗರ್ಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಬನಶಂಕರಿ ಬಡಾವಣೆಯ ನಿವಾಸಿ ಸಾಹಿತಿ ಕೆ.ಶಾಂತಾ ಬಸವರಾಜ ಅವರನ್ನು ಅವರ ಮನೆಯಲ್ಲಿ ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಜಯನಗರ ಬಿಎಡ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ವಿ.ಬೆಳಗಲಿ ಮಾತನಾಡಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ. ಸಾಧಕರಿಗೆ ಸನ್ಮಾನ ಮಾಡಿ ಗೌರವಿಸುವುದರಿಂದ ಇನ್ನೂ ಹೆಚ್ಚು ಸಾಧನೆ ಮಾಡಲು ಉತ್ಸಾಹ, ಉಮ್ಮಸ್ಸು ಸಿಕ್ಕಂತಾಗುತ್ತದೆ ಎಂದರು.
ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಕೆ.ಶಾಂತಾ ಬಸವರಾಜ ಅವರು ಹಲವಾರು ಧಾಮರ್ಿಕ, ಆಧ್ಯಾತ್ಮಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ ಎಂದು ಅಭಿನಂದಿಸಿ, ಶುಭ ಕೋರಿದರು.
ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ, ಡಾ. ಎಸ್.ಬಿ.ಕಪಟಕರ, ಆನಂದ ಘಟಪನದಿ, ಡಾ. ಬಸವಕುಮಾರ ತಲವಾಯಿ, ಮೃತ್ಯುಂಜಯ ಮಟ್ಟಿ, ಗೀತಾ ಕಪಟಕರ, ರಾಜೇಶ್ವರಿ, ವಿಜಯಲಕ್ಷ್ಮೀ, ರಶ್ಮಿ, ಮುಂತಾದವರು ಇದ್ದರು. ಪ್ರೊ. ಶೋಭಾ ಜಾಬಿನ ವಚನಗಳನ್ನು ಹಾಡಿದರು. ಸಿದ್ದರಾಮಗೌಡ ಮಾಲಿಪಾಟೀಲ, ಶರಣು ಕೆ. ಕನ್ನಡ ಗೀತೆಗಳನ್ನು ಹಾಡಿದರು.