ಅಥಣಿ 04: ಅಥಣಿ ವಿಧಾನಸಭೆ ಮತಕ್ಷೇತ್ರದ ಜನತೆ ಈ ಬಾರಿ ನನಗೆ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಅದರಲ್ಲಿ ಪಟ್ಟಣದ ನಾಗರಿಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ದಿಯ ಹಿತದೃಷ್ಟಿಯಿಂದ ಅಥಣಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಸು.750 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಪುರಸಭೆ ಸಭಾ ಭವನದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. 166 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಅಥಣಿ ಪುರಸಭೆಯು ಅಭಿವೃದ್ದಿಯಲ್ಲಿ ಹಿಂದುಳಿದಿರುವದು ಕಳವಳಕಾರಿ ಸಂಗತಿಯಾಗಿದೆ. ಹಿಂದಿನ ಆಡಳಿತದವರು ಏನೇ ಮಾಡಲಿ, ಬಿಡಲಿ ಈಗ ನಮಗೆ ಸೇವೆ ಮಾಡುವ ಅವಕಾಶದಲ್ಲಿ ಪಟ್ಟಣವನ್ನು ಸುಂದರ ಮತ್ತು ಸ್ವಚ್ಛ ನಗರವನ್ನಾಗಿ ಮಾಡೋಣ ಎಂದರು.
ಈ ನಿಟ್ಟಿನಲ್ಲಿ ಅಥಣಿ ಪುರಸಭೆಯ ವ್ಯಾಪ್ತಿಯಲ್ಲಿನ ಜನವಸತಿಗಳ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ನಗರ ಸಭೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸೋಣ. ಅಲ್ಲದೇ ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಅಥಣಿ ಮತಕ್ಷೇತ್ರದ ಬಗ್ಗೆ ಕಾಳಜಿ ಹೊಂದಿದ್ದಾರೆ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 10 ಕೋಟಿ ರೂ. ವಿಶೇಷ ಅನುದಾನ ನೀಡುವದಾಗಿ ಭರವಸೆ ನೀಡಿದ್ದಾರೆ. ಅವರು ಸರಕಾರದಿಂದ ಕೊಡಿಸುವ ಅನುದಾನವನ್ನು ತಂದು ಮೂಲಭೂತ ಸವಲತ್ತುಗಳಿಂದ ವಂಚಿತವಾದ ವಾರ್ಡಗಳಲ್ಲಿ ಯಾವುದೇ ತಾರ್ಯತಮ್ಯ ಮಾಡದೇ ಅಭಿವೃದ್ಧಿ ಮಾಡಲಾಗುವದು ಎಂದು ಎಂದು ಹೇಳಿದರು.
ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು. ನಂತರ ಸಿದ್ದಾರ್ಥ ನಗರದಲ್ಲಿ ಸುಮಾರು 50 ಲಕ್ಷ ರೂ. .ವೆಚ್ಚದ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮತ್ತು ಕನಕನಗರದಲ್ಲಿ 95 ಲಕ್ಷ ರೂ.ವೆಚ್ಚದ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಗುದ್ದಲಿ ಪೂಜೆ ನೆರವೇರಿಸಿದರು.
ಪುರಸಭಾಧ್ಯಕ್ಷ ರಾವಸಾಬ ಐಹೊಳೆ, ಉಪಾಧ್ಯಕ್ಷೆ ಶೈಲಜಾ ಹಳ್ಳದಮಳ್ಳ, ಸದಸ್ಯರಾದ ರಾಜು ಬುಲಬಲೆ, ಭರತಸಿಂಗ ರಜಪೂತ, ಜಯಶ್ರೀ ಕೆ.ವಿ. ಸೈಯದ ಅಮೀನ ಗದ್ಯಾಳ, ಮಹಾದೇವಿ ಪರಾಂಜಪೆ, ಬಾಹುಸಾಬ ದೊಡಮನಿ, ರಮೇಶ ದೊಡಮನಿ, ಎಸ್.ಆರ್.ಪೂಜೇರಿ, ವಿಲೀನ ಯಳಮಲ್ಲೆ, ಸಲ್ಲಾಂ ಕಲ್ಲಿ, ಸಿದ್ದಾರ್ಥ ಶಿಂಗೆ, ಶಿವು ಸಂಕ, ಬೀರಪ್ಪ ಯಕ್ಕಂಚಿ, ನಟರಾಜ ಹಿರೇಮಠ, ಬಿ.ಎಂ ಬಡಿಗೇರ, ಬಿ.ಎನ್. ರಂಗರೇಜ, ಪರಶುರಾಮ ತುಬಚಿ, ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಸ್ವಾಗತಿಸಿದರು. ಎ.ಕೆ.ಕುಲಕಣರ್ಿ ವಂದಿಸಿದರು.