ಲೋಕದರ್ಶನ ವರದಿ
ಕೊಪ್ಪಳ 12: ಜನ ಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸುವದಕ್ಕಾಗಿ ಕಾನೂನು ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ನ. 13ರಿಂದ 18 ವರೆಗೆ ಮನೆ ಮನೆಗೆ ಕಾನೂನು ಅರಿವು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಅಧ್ಯಕ್ಷರು ಆಗಿರುವ ಸಂಜೀವ ವಿ. ಕುಲಕಣರ್ಿ ಯವರು ತಿಳಿಸಿದ್ದಾರೆ.
ಸೋಮವಾರ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಸಭಾಭವನದಲ್ಲಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನ. 18 ರವರೆಗೆ ನಡೆಯಲಿದೆ ಎಂದು ಹೇಳಿದರು.
ಜನ ಸಾಮಾನ್ಯರಲ್ಲಿ ಕಾನೂನು ಅರಿವು, ಸಾಕ್ಷರತೆ, ಉಚಿತ ಕಾನೂನು ಸೇವೆಯನ್ನು ಒದಗಿಸುತ್ತಿದ್ದು, ಜನತಾ ನ್ಯಾಯಾಲಯಗಳ ಮೂಲಕ ಹಲವಾರು ವ್ಯಾಜ್ಯಗಳನ್ನು ವಿಲೆವಾರಿ ಮಾಡಿದೆ. ಈಗ ಹಳ್ಳಿ, ಮತ್ತು ವಾರ್ಡ ಮಟ್ಟದಲ್ಲಿಯೂ ಮನೆ ಮನೆಗೆ ಕಾನೂನುಗಳ ಬಗ್ಗೆ ಜಾಗೃತಿ ಆಂದೋಲನ ನಡೆಸಿದ್ದು, ಇದರಲ್ಲಿ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದು, ಅಭಿಯಾನದ ಮುಕ್ತಾಯ ಸಮಾರಂಭ ನ.18 ರಂದು ಅಳವಂಡಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಬರುವ ಡಿ. 08ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಆದಾಲತ್, ಜನತಾ ನ್ಯಾಯಾಲಯವನ್ನು ಏರ್ಪಡಿಸಿದ್ದು, ಪ್ರತಿ ಎರಡು ತಿಂಗಳುಗೊಮ್ಮೆ ಜನಾತಾ ನ್ಯಾಯಾಲಯಗಳ ಮೂಲಕ ಮೋಟಾರ್ ಕಾಯ್ದೆ, ವಿದ್ಯುತ್, ಬಿಎಸ್ಎನ್ಎಲ್, ಸೇರದಂತೆ ಗ್ರಾಹಕ ಸಂಬಂಧಿತ ವಿವಿಧ ಬಗೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವದೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಅಧ್ಯಕ್ಷರು ಆಗಿರುವ ಸಂಜೀವ ವಿ. ಕುಲಕಣರ್ಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ನ್ಯಾಯಾಧೀಶರಾದ ಮನು ಶಮರ್ಾ ಉಪಸ್ಥಿತರಿದ್ದರು.