ನವದೆಹಲಿ 20: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ರೋಹಿತ್ ಶಮರ್ಾ ಟ್ವಿಟ್ಟರ್ನಲ್ಲಿ ಧನಾತ್ಮಕ ಸಂದೇಶಹೊಂದಿರುವ ಪೋಸ್ಟ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಏಕದಿನ ತಂಡದ ಆರಂಭಿಕ ಆಟಗಾರ ರೋಹಿತ್ ಟೆಸ್ಟ್ ತಂಡದಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಹಿಟ್ಮ್ಯಾನ್ 'ಖಣಟಿ ತಿಟಟ ಡಿಜ ಚಿರಚಿಟಿ ಣಠಟಠಡಿಡಿಠತಿ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮನ್ನು ಆಯ್ಕೆ ಮಾಡದ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವಂತಿದೆ.
ರೋಹಿತ್ ಶಮರ್ಾ ಈ ವರ್ಷದ ಜನವರಿಯಲ್ಲಿ ದ.ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಆಡಿದ್ದಾರೆ. ಆದರೆ 3 ಪಂದ್ಯಗಳ ಸರಣಿಯ ನಾಲ್ಕು ಇನ್ನಿಂಗ್ಸ್ಗಳಿಂದ ರೋಹಿತ್ 19.50 ಸರಾಸರಿಯಲ್ಲಿ ಕೇವಲ 78 ರನ್ ಮಾತ್ರ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ದರು.
ಅಲ್ಲದೆ ಏಕದಿನ ಹಾಗೂ ಟಿ-20ಯಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಟೆಸ್ಟ್ನಲ್ಲಿ ಅಷ್ಟೊಂದು ಯಶಸ್ಸು ಕಂಡಿಲ್ಲ. 2013ರಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿರುವ ಶಮರ್ಾ 25 ಪಂದ್ಯಗಳಿಂದ 39.97ರ ಸರಾಸರಿಯಲ್ಲಿ 1479 ರನ್ ಗಳಿಸಿದ್ದಾರೆ.