ಶಾಸಕ ಅಪ್ಪಾಜಿ ನಾಡಗೌಡರಿಗೆ ಹಿರೂರ ಗ್ರಾಮಸ್ಥರಿಂದ ಸನ್ಮಾನ
Hirura villagers honor MLA Appaji Nad Gowda
ಶಾಸಕ ಅಪ್ಪಾಜಿ ನಾಡಗೌಡರಿಗೆ ಹಿರೂರ ಗ್ರಾಮಸ್ಥರಿಂದ ಸನ್ಮಾನ
ತಾಳಿಕೋಟಿ 31: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮುದ್ದೇಬಿಹಾಳ ಮತಕ್ಷೇತ್ರ ಶಾಸಕ ಸಿ.ಎಸ್.ನಾಡಗೌಡ( ಅಪ್ಪಾಜಿ) ಇವರನ್ನು ತಾಲೂಕಿನ ಹಿರೂರ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಹಿರೂರ- ತಮದಡ್ಡಿ ಗ್ರಾಮದಲ್ಲಿ ಇತ್ತೀಚಿಗೆ ಸುಮಾರು ರೂ.4.20 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದಾಗ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರಿಗೆ ಈ ಸನ್ಮಾನ ನೀಡಿ ಗೌರವಿಸಲಾಯಿತು. ಸಮಾರಂಭದ ಸಾನಿಧ್ಯ ವಹಿಸಿದ ಹಿರೂರ ಅನ್ನದಾನೇಶ್ವರಿ ಮಠದ ಪೂಜ್ಯಶ್ರೀ ಗುರು ಜಯಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ ಅಪ್ಪಾಜಿ ನಾಡಗೌಡರು ನಾಡು ಕಂಡ ಧೀಮಂತ ಸರಳ ಸಜ್ಜನಿಕೆಯ ರಾಜಕಾರಣಿ ನುಡಿದಂತೆ ನಡೆಯುವ ವ್ಯಕ್ತಿತ್ವ ಅವರದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಅವರು ಮಾಡುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅಪ್ಪಾಜಿ ನಾಡಗೌಡರು ನನ್ನ ಮೇಲೆ ವಿಶ್ವಾಸ ಇಟ್ಟು ನೀವು ನನಗೆ ಮತನೀಡಿ ಆಯ್ಕೆ ಮಾಡಿದ್ದೀರಿ ನಿಮ್ಮ ಸೇವೆ ನನ್ನ ಕರ್ತವ್ಯವಾಗಿದೆ ನನಗೆ ಸನ್ಮಾನ ಪ್ರಚಾರದ ಅಗತ್ಯವಿಲ್ಲ ನಿಮ್ಮ ಹೃದಯದಲ್ಲಿ ನನಗೆ ಗೌರವದ ಸ್ಥಾನ ಇದ್ದರೆ ಸಾಕು ನನ್ನನ್ನು ಸನ್ಮಾನಿಸಿ ಗೌರವಿಸಿದ್ದಕ್ಕಾಗಿ ನಿಮ್ಮ ಈ ಪ್ರೀತಿಗೆ ಋಣಿಯಾಗಿರುವೆ ಎಂದರು. ಸಮಾರಂಭದ ಸಮ್ಮುಖವನ್ನು ಪೂಜ್ಯರಾದ ನವಲಪ್ಪ ಪೂಜಾರಿ ಹಾಗೂ ಚಂದಪ್ಪ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸುರೇಶಗೌಡ ಬಿರಾದಾರ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ,ಬಿ.ಎ.ಬಿರಾದಾರ, ಸಿದ್ದನಗೌಡ ಪಾಟೀಲ ನಾವದಗಿ, ಗುರು ತಾರನಾಳ,ಪ್ರಕಾಶ ಪಾಟೀಲ, ಮುತ್ತಪ್ಪ ದೊಡ್ಮನಿ, ಶಿವಲೀಲಾ ಕೊಣ್ಣೂರ,ಸಂಗನಗೌಡ ಅಸ್ಕಿ,ವೀರೇಶಗೌಡ ಬಾಗೇವಾಡಿ,ಬಿ.ಎನ್.ನಾಯ್ಕೋಡಿ, ಸಂಗಮೇಶ ದೇಸಾಯಿ,ಶಂಕರಗೌಡ ಬಿರಾದಾರ,ರಫೀಕ್ ಇಂಡಿಕರ್. ತುಕಾರಾಂ ಗೊಂದಳಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 