ಕೊಪ್ಪಳ 18: ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವು ಕಡಿಮೆಯಾಗುತ್ತಿದ್ದು, ಗುಣಮಟ್ಟದ ರಸ್ತೆ ನೀಮಾರ್ಣಕ್ಕೆ ಹೆಚ್ಚಿನ ಆಧ್ಯತೆ ನಿಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಬುಧವಾರದಂದು ಜರುಗಿದ ಜಿ.ಪಂ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೈದ್ರಾಬಾದ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಹಣ ಜಿಲ್ಲೆಗೆ ಬಿಡುಗಡೆಯಾಗಿದ್ದು, ಮುಖ್ಯವಾಗಿ ರಸ್ತೆ ಅಭಿವೃದ್ಧಿಗೆ ಹೆಚ್ಚು ಅನುದಾನ ದೊರೆತಿದೆ. ಸದ್ಯ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ಕಡಿಮೆ ದರದಲ್ಲಿ ಟೆಂಡರ್ಗಳನ್ನು ಕರೆಯಲಾಗುತ್ತಿದೆ. ಇದರಿಂದಾಗಿ ರಸ್ತೆ ಕಾಮಗಾರಿಗಳು ಗುಣಮಟ್ಟದ್ದಾಗುತ್ತಿಲ್ಲ. ಟೆಂಡರ್ನ್ನು ಪ್ಯಾಕೇಜ್ ಮೂಲಕ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಪ್ಪಳ ಪಿಯುಸಿ ಕಾಲೇಜಿನ ಪ್ರಾಚಾರ್ಯರ ಮತ್ತು ಯಲಬುಗರ್ಾ ತಾಲೂಕಿನ ಸಕರ್ಾರಿ ಶಾಲೆಯ ಶಿಕ್ಷಕರ ಸಮಸ್ಯೆಗಳು ವರದಿಯಾಗಿದ್ದು ಇದಕ್ಕೆ ಶಿಕ್ಷಣ ಇಲಾಖೆ ಕೂಡಲೇ ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
19835.93 ಲಕ್ಷ ರೂ. ಅನುಮೋದನೆ: ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಬಳಿಕೆ ಜರುಗಿತ ಪ್ರಸಕ್ತ ಸಾಲಿನ ವಿವಿಧ ಇಲಾಖೆಗಳ ಜಿ.ಪಂ. ಕಾರ್ಯಕ್ರಮಗಳ ಕ್ರಿಯಾ ಯೋಜನೆ ಕುರಿತಾದ ಸಾಮಾನ್ಯ ಸಭೆಯಲ್ಲಿ ಜಿ.ಪಂ ಉಪಕಾರ್ಯದಶರ್ಿ ಎನ್.ಕೆ.ತೊರವಿ ಅವರು ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಿ ಸಭೆಯು ಒಪ್ಪಿಗೆಯನ್ನು ನೀಡಬೇಕಾಗಿದೆ ಎಂದರು. ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ ಇಲಾಖಾವಾರು ರೂ. 19835.93 ಲಕ್ಷಗಳ ಅನುದಾನವನ್ನು ಅಥರ್ಿಕ ಯೋಜನೆಗಳಿಗೆ ಎಪ್ರಿಲ್ ತಿಂಗಳಿನಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಬೇಕಾಗಿತ್ತು, ಆದರೆ ಕಾರಣಾಂತರಗಳಿಂದ ಸಾಮಾನ್ಯ ಸಭೆಯು ನಡೆಯದೇ ಇದ್ದರಿಂದ ವಿಳಂಭವಾಗಿದೆ. ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ ನಂತರ ಸಕರ್ಾರದಿಂದ ನಿಗದಿಗೊಳಿಸಿದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆಯಾಗಲಿದ್ದು, ಈ ಆಥರ್ಿಕ ಅನುದಾನದ ಕಾರ್ಯಕ್ರಮಗಳಿಗೆ ಸಭೆಯು ಅನುಮೋದನೆಯನ್ನು ನೀಡಿದೆ ಎಂದು ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಘೋಷಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮವ್ವ ಸಿದ್ದಪ್ಪ ನೀರಲೂಟಿ, ಮುಖ್ಯ ಕಾರ್ಯನಿವರ್ಾಹ ಅಧಿಕಾರಿ ವೆಂಕಟರಾಜಾ, ಯೋಜನಾಧಿಕಾರಿ ರವಿ ಬಿಸರಳ್ಳಿ ಸೇರಿದಂತೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.