ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ: ಶಂಕರ್

ಲೋಕದರ್ಶನವರದಿ

ರಾಣಿಬೆನ್ನೂರ18: ಸಮಾಜದಲ್ಲಿ ಶ್ರಮಿಕ ಜೀವಿಗಳಾಗಿರುವ ಲಂಬಾಣಿ ಜನಾಂಗದವರು ಈ ಹಿಂದೆ ಕುಡಿತ ಮತ್ತು ಅನಕ್ಷರತೆಗೆ ದಾಸರಾಗಿದ್ದರು. ಆದರೆ ಇದೀಗ ಆ ಜನಾಂಗದಲ್ಲಿ ಅರಿವು ಉಂಟಾಗಿ ಕುಡಿತದಿಂದ ದೂರವಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದರ ಮೂಲಕ ಜನಾಂಗವು ಪ್ರಗತಿಯತ್ತ ಸಾಗುತ್ತಿದೆ ಎಂದು ಶಾಸಕ ಆರ್.ಶಂಕರ್ ಹೇಳಿದರು. 

   ಸೋಮವಾರದಂದು ಇಲ್ಲಿನ ಮೇಡ್ಲೇರಿ ರಸ್ತೆಯ ವಿಕಾಸ ನಗರದ ಸಂತ ಶ್ರೀ ಸೇವಾಲಾಲರ ದೇವಸ್ಥಾನ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸೇವಾಲಾಲ್ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಸೇವಾಲಾಲರ 280ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

   ಈ ಜನಾಂಗವು ಸದ್ಯ ಏಳ್ಗೆಯತ್ತ ಮುನ್ನುಗ್ಗುತ್ತಿದ್ದು, ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗದವರಿಗೂ ಸಹ ಅಭ್ಯಾಸಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಜನಾಂಗದವರು ಸರಕಾರದ ವಿವಿಧ ಇಲಾಖೆಗಳಿಗೆ ಕಿರಿಯ, ಹಿರಿಯ ಮಟ್ಟದ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

  ಲಮಾಣಿ ಜನಾಂಗದವರು ಶೈಕ್ಷಣಿಕವಾಗಿ ಇನ್ನೂ ಮುಂದೆ ಬರಬೇಕು. ತಮ್ಮ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಹಾಗೂ ಶಿಕ್ಷಣವಂತರನ್ನಾಗಿಸುವ ಮೂಲಕ ಸಮಾಜದ ಪ್ರಗತಿಗೂ ಮುಂದಾಗಬೇಕು. ಈ ದಿಶೆಯಲ್ಲಿ ಪಾಲಕರ ಮತ್ತು ಪೋಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದರು.

  ಬೆಂಗಳೂರಿನ ಅಪನಾ ದೇಶ ಅಸೋಷಿಯೇಷನ್ನ ರಾಜ್ಯ ಉಪಾದ್ಯಾಕ್ಷ ಡಾ.ಆರ್.ಎನ್.ರಾಜಾನಾಯಕ ಉಪನ್ಯಾಸ ನೀಡಿ ಮಾತನಾಡಿದ ಅವರು, ಲಂಬಾಣಿ ಸಮಾಜದ ಆರಾಧ್ಯದೈವ ಹಾಗೂ ಸಮಾಜ ಸುಧಾರಕ ಸೇವಾಲಾಲ್ ಗುರೂಜಿಯವರ ಅದರ್ಶಗಳು ಇಂದಿನ ಜನಾಂಗಕ್ಕೆ ದಾರಿದೀಪವಾಗಿವೆ ಎಂದರು.

  ಬಂಜಾರ ಗುರುಪೀಠದ ಸದರ್ಾರ ಸೇವಾಲಾಲ್ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಜಿಪಂ ಸದಸ್ಯರಾದ ಮಂಗಳಗೌರಿ ಪೂಜಾರ, ತಾಲೂಕ ಸಂಘದ ಅಧ್ಯಕ್ಷ  ಶಿವಪ್ಪ ಲಮಾಣಿ, ರಾಮಪ್ಪ ನಾಯಕ, ಡಾಕೇಶ ಲಮಾಣಿ, ರಮೇಶ ನಾಯಕ, ಲಲಿತಾ ಜಾಧವ್, ವಸಂತ ಲಮಾಣಿ, ವೀರನಗೌಡ ಪೊಲೀಸ್ಗೌಡ್ರ, ಕೃಷ್ಣಮೂತರ್ಿ ಲಮಾಣಿ, ಪಾರವ್ವ ಲಮಾಣಿ, ಕೃಷ್ಣಪ್ಪ ಲಮಾಣಿ, ರೂಪ್ಲಪ್ಪ ಲಮಾಣಿ, ದಯಾಲಾಲ್ ಸಾಂಘವಿ, ಗಂಗಮ್ಮ ಹಾವನೂರು, ರಾಜು ಅಡಿವೆಪ್ಪನವರ ಸೇರಿದಂತೆ ನಗರಸಭೆ, ತಾಪಂ ಸದಸ್ಯರು ಮತ್ತಿತರರು ಇದ್ದರು.

   ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸೇವಾಲಾಲ್ರ ಭಾವಚಿತ್ರದ ಮೆರವಣಿಗೆಯು ಇಲ್ಲಿನ ತಾಲೂಕು ಕಚೇರಿಯಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೈವಿಧ್ಯಮಯ ವಾಧ್ಯಮೇಳ, ಮಹಿಳೆಯರ ಕುಂಭದೊಂದಿಗೆ ಜನಾಕಷರ್ಿಸಿದ ಮೆರವಣಿಗೆಗೆ ಸಹಸ್ರಾರು ಲಂಬಾಣಿ ಜನಾಂಗದ ವೇಷಭೂಷಣವು ಮತ್ತಷ್ಟು ಮೆರಗು ತಂದಿತು