ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ14:ಗರದ 21ನೇ ವಾರ್ಡನಲ್ಲಿ ಎಸ್.ಎಫ.ಸಿ ಮುಕ್ತ ಅನುದಾನದಡಿಯಲ್ಲಿ ಅಂದಾಜೂ ಮೊತ್ತ ರೂ. 8ಲಕ್ಷ ಮೊತ್ತದ ಕುಡಿಯುವ ನೀರಿನ ಪೈಪಲೈನ ಕಾಮಾಗಾರಿ ಹಾಗೂ ಚರಂಡಿ ಕಾಮಾಗಾರಿಗೆ ಭೂಮಿ ಪೂಜೆ ನೆರವರಿಸಿದ ಬಳಿಕ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ  ತಿವೃಗತಿಯಲ್ಲಿ ಬೆಳೆಯುತ್ತಿರುವ ಕೊಪಳ ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ನಗರದ ಸೌಂಧರ್ಯಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ನಗರೊತ್ಥಾನ 3ನೇ ಹಂತದ ಯೋಜನೆಡಿಯಲ್ಲಿ ಅಂದಾಜು 40-00 ಕೋಟಿಗೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರವೇ ಎಲ್ಲಾ 31 ವಾರ್ಡಗಳಲ್ಲಿ ಬಾಕಿ ಉಳಿದಿರುವ ಸಿಸಿ ರಸ್ತೆ ಚರಂಡಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಲಾಗುವುದ ಶೀಘ್ರವೇ ಬರುವ ದಿನಗಳಲ್ಲಿ ನಗರದ ಬಸೇವಶ್ವರ ವೃತ್ತ ದಿಂದ ಗವಿಮಠದ ರಸ್ತೆಯ ಕಾಮಾಗಾರಿ ಕೈಗೆತ್ತಿ ಕೊಳ್ಳಲಾಗುವುದು ಈಗಾಗಲೇ ನಗರದ ಶೇಕಡಾ 90ರಷ್ಟು ಮುಖ್ಯ ರಸ್ತೆ ಕಾಮಾಗಾರಿ ಪೊರ್ಣಗೊಂಡಿದ್ದು ನನ್ನ ಅವದಿಯಲ್ಲಿ ಕೊಪ್ಪಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದೆಂದು ಹೇಳಿದರು.

            ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಸುರೇಶ ಭೂಮರಡ್ಡಿ, ಕಾಟನ ಪಾಷ, 21ನೇ ವಾಡರ್ಿನ ಸದಸ್ಯರಾದ ಗುರು ಹಲಗೇರಿ, ನಗರ ಸಭಾಸದಸ್ಯರಾದ ಅಕ್ಬರ ಪಾಷ ಪಲ್ಟನ್, ಬಸವರಾಜ, ವಿಜಯ ನಾಲ್ವಾಡ, ಶರಣಪ್ಪ ಸಜ್ಜನ್, ಶಿವಾನಮದ ಹೊದ್ಲೂರ, ನಾರಯಣರಾವ್ ಬಳೂಟಗಿ, ಸಿದ್ದಣ್ಣ ಮೇಟ್ಟಿ. ಆಯೋಬ್, ಜಗನ್ನಾಥ ಶೆಟ್ಟಿ, ಸುಭಾಷ ಪರಚಂಡಿ, ಜವೇರ ಖಾನ, ರಾಘವೇಂದ್ರ ಕಟ್ಟಿಮನಿ, ಗುತ್ತಿಗೆದಾರರಾದ ಮದರ್ಾನ ಮಿಠಾಯಿ ಉಪಸ್ಥಿತರಿದ್ದರು.