ಬಾಗಲಕೋಟೆ 23: ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಜಗತ್ತಿನಲ್ಲಿಯೇ ಗಮನ ಸೆಳೆಯುವಂತಾಗಬೇಕು. ರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳಿಗಿಂತ ಈ ವಿವಿಯು ಅತೀ ಹೆಚ್ಚು ಸಂಶೋಧನಾ ಶಿಷ್ಯವೇತನಗಳನ್ನು ಪಡೆದಿರುಸತ್ತದೆ. ಈ ವಿಶ್ವವಿದ್ಯಾಲಯದ ಆವರಣವನ್ನು ನೋಡಿದ ಮೇಲೆ ಪ್ರಗತಿಯು ಎದ್ದು ಕಾಣುತ್ತಿದೆ. ಆದರೂ ಸಹಿತ ತೋವಿವಿ ವಿಜ್ಞಾನಿಗಳು ಇನ್ನೂ ಹೆಚ್ಚಿನ ಪರಿಶ್ರಮ ಪಡಬೇಕಿದೆ. ತೋಟಗಾರಿಕೆ ಬೆಳೆಗಳ ಹೆಚ್ಚಿನ ತಳಿಗಳನ್ನು ಪರಿಚಯಿಸಬೇಕು. ಇನ್ನೊಂದು ಹಸಿರು ಕ್ರಾಂತಿಯ ಅವಶ್ಯಕತೆಯನ್ನು ವಿಜ್ಞಾನಿಗಳು ಪೂರೈಸಬೇಕಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಜೆ. ವಿ. ಗೌಡ ಅವರು ಅಭಿಪ್ರಾಯ ಪಟ್ಟರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 10 ನೇ ಸಂಸ್ಥಾಪನ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ ಹೇಳಿದರು. ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ಎಷ್ಟೋ ವರ್ಷಗಳು ಕಳೆದರೂ ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣೆಗಳಲ್ಲಿ ಯೋಜನೆಗಳನ್ನು ಹಾಕುವುದರಲ್ಲಿಯೇ ಕಾಲ ಕಳೆಯುತ್ತವೆ. ಆದರೆ ಈ ವಿಶ್ವವಿದ್ಯಾಲಯವು ಮಾಡಿದ ಸಾಧನೆ ಅವಲೋಕಿಸಿದಾಗ ಹರ್ಷವೆನಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ತೋವಿವಿ ಗೌರವಾನ್ವಿತ ಕುಲಪತಿ ಡಾ. ಇಂದಿರೇಶ ಅವರು ವಿಶ್ವವಿದ್ಯಾಲಯದ ಇಂತಹ ಪ್ರಗತಿಗೆ ನಮ್ಮ ಹಿಂದಿನ ಕುಲಪತಿಗಳು ಮಾಡಿದ ಪರಿಶ್ರಮ, ನಿಷ್ಠೆ, ಕಾರ್ಯವೈಖರಿಗಳನ್ನು ಇಂದು ನಾವು ಕೃತಜ್ಞಾಪೂರ್ವಕವಾಗಿ ಸ್ಮರಿಸಲೇಬೇಕಿದೆ. ನಮ್ಮ ತೋವಿವಿಯ ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳನ್ನು ಸಹ ಪ್ರೋತ್ಸಾಹಿಸಲು ನಾವು ಅವರಿಗಾಗಿಯೇ ಒಂದು ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು. ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ. ಯೋಗಿರಾಜ ಪಾಟೀಲ ಅವರು ತೋವಿವಿಯ ಅಭಿವೃದ್ಧಿಗಾಗಿ ಕೆಲವು ಸಲಹೆಗಳನ್ನು ನೀಡಿದರು. ವ್ಯವಸ್ಥಾಪನಾ ಮಂಡಳಿಯ ಇನ್ನುಳಿದ ಸದಸ್ಯರಾದ ಡಾ. ಎಸ್. ಬಿ. ಮಳಲಿ, ಶ್ರೀ ಮಂಜುನಾಥಗೌಡ ಮತ್ತು ಡಾ. ರಾಜೇಶ್ವರಿ ಅವರು ಉಪಸ್ಥಿತರಿದ್ದರು.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಅರಭಾವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸತೀಶ. ಡಿ ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ಹಣ್ಣು ವಿಭಾಗದ ಮುಖ್ಯಸ್ಥ ಡಾ. ಕುಲಪತಿ ಹಿಪ್ಪರಗಿ, ಬೆಂಗಳೂರು ಮಹಾವಿದ್ಯಾಲಯದ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಸದಾನಂದ ಜಿ. ಕೆ. ಇವರು ಪಡೆದಿದ್ದಾರೆ.
ಅತ್ಯುತ್ತಮ ಸಂಶೋಧನ ವಿಜ್ಞಾನಿ ಪ್ರಶಸ್ತಿಯನ್ನು ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್. ಎಲ್. ಜಗದೀಶ ಅವರು ಪಡೆದರು. ಡಾ. ಎಸ್. ಬಿ. ದಂಡಿನ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿಯನ್ನು ಬಾಗಲಕೋಟೆಯ ಸಹಾಯಕ ಪ್ರಾಧ್ಯಾಪಕ (ಬೇಸಾಯ ಶಾಸ್ತ್ರ) ಡಾ. ವಿಜಯಮಹಾಂತೇಶ ಇವರು ಪಡೆದರು. ಬಾಗಲಕೋಟೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ .ಜಿ. ಕೆರುಟಗಿ, ಡಾ. ರಾಘವೇಂದ್ರ ಗುನ್ನಯ್ಯ ಮತ್ತು ಡಾ. ಮಂಜುನಾಥ ಹುಬ್ಬಳ್ಳಿ ಇವರು ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚು ಬಾಹ್ಯ ಅನುದಾನ ತಂದ ವಿಜ್ಞಾನಿಗಳ ಪ್ರಶಸ್ತಿಯನ್ನು ಪಡೆದರು.
ಅತ್ಯುತ್ತಮ ಬೋಧಕೇತರ ಪ್ರಶಸ್ತಿಯನ್ನು ಬಾಗಲಕೋಟೆಯ ಸಹಾಯಕ ಆಡಳಿತಾಧಿಕಾರಿ ಶ್ರೀ ಶ್ರೀಪಾದ ಮಜಲಿ ಮತ್ತು ಮುನಿರಾಬಾದ ಮಹಾವಿದ್ಯಾಲಯದ ಹಿರಿಯ ಪ್ರಯೋಗಾಲಯ ಸಹಾಯಕ ಶ್ರೀ ಶ್ರೀಮಂತ ಧಾಟೆ ಅವರು ಪಡೆದರು. ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಎಲ್ಲ ಮಹಾವಿದ್ಯಾಲಯಗಳ ಡೀನ್ ರವರನ್ನು, ನಿವೃತ್ತಿಗೊಂಡ ಡೀನ್ ಮತ್ತು ಅಧಿಕಾರಿಗಳನ್ನು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಡಾ. ವೈ.ಕೆ. ಕೋಟಿಕಲ್ ಸ್ವಾಗತಿಸಿ ತೋವಿವಿಯ ವರದಿ ವಾಚನ ಸಲ್ಲಿಸಿದರು. ಡಾ. ಎಸ್. ಐ ಅಥಣಿ ಮತ್ತು ಡಾ. ಎಂ. ಎಸ್. ಕುಲಕಣರ್ಿ ಅವರು ಪ್ರಶಸ್ತಿವಿಜೇತ ಕಾರ್ಯಕ್ರಮಗಳನ್ನು ನೆರವೇರಿಸಿದರು. ಡಾ. ಟಿ. ಬಿ. ಅಳ್ಳೊಳ್ಳಿ ವಂದಿಸಿದರು. ಡಾ. ಸರ್ವಮಂಗಳಾ ಚೋಳಿನ ಮತ್ತು ಸುವಣರ್ಾ ಕೊಟ್ರಣ್ಣವರ ಕಾರ್ಯಕ್ರಮ ನಿರೂಪಿಸಿದರು.