ರಾಣೇಬೆನ್ನೂರು ಅಭಿವೃದ್ಧಿ ಪಡಿಸಲು ಸಹಕರಿಸಿ: ವೆಂಕಟೇಶ್

ರಾಣೇಬೆನ್ನೂರು 08:- ನಗರಸಭೆಯ 2018-19 ನೇ ಸಾಲಿನ ಪರಿಷ್ಕೃತ ಹಾಗೂ 2019-20 ನೇ ಸಾಲಿನ ಆಯ-ವ್ಯಯ ಮಂಡನಾ ಬಜೆಟ್ನ್ನು ನಗರ ಸಭೆಯ ಆಡಳಿತ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವಿ.ವೆಂಕಟೇಶ ಘೋಷಣೆ ಮಾಡಿದರು. 

ನಗರ ಸಭೆಯ ಸರ್.ಎಮ್.ವಿಶ್ವೇಶ್ವರಯ್ಯ ಸಂಭಾಗಣದಲ್ಲಿ ಸಭೆ ಕರೆದು ಬಜೆಟ್ ಮಂಡಣೆಯಲ್ಲಿ 2019-20 ನೇ ಸಾಲಿನಲ್ಲಿ ಒಟ್ಟು ಉಳಿತಾಯ ಬಜೆಟ್ 137.57 ಲಕ್ಷವನ್ನು ಘೋಷಣೆ ಮಾಡುವ ಮುಖಾಂತರ ಉತ್ತರ ಕನರ್ಾಟಕ ಹೆಬ್ಬಾಗಿಲು ಎಂದೇ ಹೆಸರಾಗಿ ಉಳಿದ ರಾಣೇಬೆನ್ನೂರು ನಗರವನ್ನು ಅಭಿವೃದ್ಧಿ ಪಡಿಸಲು ಹಾಗೂ ಉತ್ತಮ ಗುಣಮಟ್ಟದ ರಸ್ತೆಗಳು, ಚರಂಡಿ, ಸಾರ್ವಜನಿಕ ಸುರಕ್ಷತೆ ಕಾಪಡುವ ದೃಷ್ಟಿಯಿಂದ ನಗರ ಸಭೆಯು 2019-20 ನೇ ಸಾಲಿನ ಆಯ-ವ್ಯಯ ಬಜೆಟ್ ಅನ್ನು ಮಂಡಿಸಿದೆ.

 ಎಸ್.ಎಫ್.ಸಿ ಮುಕ್ತ ನಿಧಿಯಿಂದ 43200 ಲಕ್ಷಗಳು, ಎಸ್.ಎಫ್.ಸಿ ವಿದ್ಯುತ್ ಅನುದಾನದಿಂದ 500 ಲಕ್ಷ ಎಸ್.ಎಫ್.ಸಿ ವೇತನ  ಅನುದಾನದಿಂದ 500 ಲಕ್ಷ, ಕೇಂದ್ರ ಸಕರ್ಾರ ಬಿಡುಗಡೆಯಾಗುವ 14 ನೇ ಹಣಕಾಸು ಯೋಜನೆ ಅಡಿಯಲ್ಲಿ 511.12 ಲಕ್ಷಗಳು ಹಾಗೂ  ಇದೇ ರೀತಿ ಸೇರಿದಂತೆ ಅನೇಕ ಅಭಿವೃದ್ಧಿಗಳಿಗೆ 137.57 ಲಕ್ಷ ಉಳಿತಾಯ ಯೋಜನೆ ತೋರಿಸಲಾಗಿದ್ದು ರಾಣೇಬೆನ್ನೂರು ನಗರವು ಅತೀ ವೇಗವಾಗಿ ಬೆಳೆಯುತ್ತಿದ್ದು ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ತಜಾ ಉತ್ಪಾದನೆ ದಿನೇ ದಿನೇ ಅಧಿಕಗೊಳ್ಳುತ್ತಿದ್ದು ವೈಜ್ಞಾನಿಕ ಕಸವಿಲೇವಾರಿಗಾಗಿ ಎಲ್ಲಾ 35 ವಾಡರ್್ಗಳ ವ್ಯಾಪ್ತಿಯಲ್ಲಿ ಶೇ 100% ರಷ್ಟು ಘನ ತ್ಯಾಜ್ಯ ನಿರ್ವಹಣೆಗಾಗಿ ಕಾಮರ್ಿಕರ ವೇತನ ಮನೆ ಮನೆ ಸಂಗ್ರಹಣೆ ಹೊರಗುತ್ತಿಗೆ ವಾಹನ ಚಾಲಕರ ವೇತನಕ್ಕಾಗಿ 525 ಲಕ್ಷ ಕದೀರಿಸಿದ್ದು ಇರುತ್ತದೆ. ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. 

ನಗರ ಸಭೆ ಸದಸ್ಯರು ಆಡಳಿತ ಅಧಿಕಾರಿಗಳ ಜೊತೆ ನೇರ ಪ್ರಶ್ನೆಗೆ ಇಳಿದು ತಮ್ಮ ವಾಡರ್್ಗಳ ಸಮಸ್ಯೆಗಳನ್ನು ಹೇಳುತ್ತ ಜಿಲ್ಲಾಧಿಕಾರಿಗಳು ಸದಸ್ಯರ ಪ್ರಶ್ನೆಗೆ ಉತ್ತರ ನೀಡುತ್ತ ಹಂತ ಹಂತವಾಗಿ ವಾಡರ್್ಗಳ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ಹೇಳಿದರು. 

ಟ್ರಾಫಿಕ್ ಜಾಮ್ : 

ನಗರ ಸಭಾ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಮಾತನಾಡಿ ರಾಣೇಬೆನ್ನೂರು ನಗರ  ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದು. ಆದ ಕಾರಣ ಹಣ್ಣಿನ ವ್ಯಾಪರಸ್ಥರಿಗೆ ಹಾಗೂ ವಿವಿಧ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಪಾರ ಮಾಡಲು ಮಾಕರ್ೆಟ್ ನಿಮರ್ಾಣ ಮಾಡಿದರೆ ಟ್ರಾಫಿಕ್ ಜಾಮ್ ಮಾಡಲು ಸಾದ್ಯವಿಲ್ಲ, ವಾಹನ ಸವಾರರಿಗೆ ಸುಗಮರೀತಿಯಲ್ಲಿ ಸಂಚಾರ ಮಾಡುತ್ತಾರೆ. ಎಮ್.ಜಿ ರಸ್ತೆ, ಬಸ್ ಸ್ಟಾಂಡ್ ರಸ್ತೆ, ಪಿ.ಬಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. 

ಸಭೆಯಲ್ಲಿ ಯೋಜನಾಧಿಕಾರಿಗಳಾದ ವಾಸಣ್ಣ ಹಾಗೂ ಪೌರಾಯುಕ್ತರಾದ ಮಹಾಂತೇಶ್ ಹಾಗೂ 35 ವಾಡರ್ಿನ ಸದಸ್ಯರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.