ಉಚಿತ ಆರೋಗ್ಯ ಮೇಳ ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ: ಚರಂತಿಮಠ್

ಲೋಕದರ್ಶನ ವರದಿ

ಹರಪನಹಳ್ಳಿ 07: ಪಟ್ಟಣದ ಎ.ಡಿ.ಬಿ ಕಾಲೇಜು ಆವರಣದಲ್ಲಿ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ತಥಾಗತ್ ಮೆಡಿಕಲ್ ಟ್ರಸ್ಟ್ ಮತ್ತು ಐ.ಎಂ.ಎ ಹರಪನಹಳ್ಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳವನ್ನು ಅಮ್ಮಿಕೊಳ್ಳಲಾಗಿತ್ತು, ಪ್ರಸ್ಥಾವಿಕವಾಗಿ ಮಾತನಾಡಿದ ತಥಾಗತ್ ಹಾರ್ಟ ಕೇರ್ ಸೆಂಟರ್ನ ಪ್ರಖ್ಯಾತ ತಜ್ಞ ವೈದ್ಯರಾದ ಡಾ. ಮಹಾಂತೇಶ್ ಆರ್. ಚರಂತಿಮಠ್, ಈ ಆರೋಗ್ಯ ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದ ಹೃದಯಾಘಾತ, ಹೃದಯ ರಕ್ತನಾಳ ಮತ್ತು ಕವಾಟುಗಳ ಖಾಯಿಲೆಗಳು, ಹುಟ್ಟಿನಿಂದ ಬಂದಂತಹ ಹೃದ್ರೋಗಗಳು ಅತಿಯಾದ ರಕ್ತದೋತ್ತಡ(ಬಿ.ಪಿ), ಮಧುಮೇಹ (ಡಯಾಬಿಟೀಸ್) ಹಾಗೂ ಇನ್ನಿತರ ಹೃದಯ, ಕ್ಯಾನ್ಸರಿಗೆ ಸಂಬಂಧಿಸಿದ ಬಳಲುತ್ತಿರುವವರಿಗೆ ಸಣ್ಣ ಪುಟ್ಟ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ, ತಾಲ್ಲೂಕಿನ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ನಾಗರೀಕರಿಗೆ ಬೆಂಗಳೂರಿನಿಂದ ಬಂದ, 15ಜನರ ವೈದ್ಯರ ತಂಡ, ತಪಾಸಣೆ ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಇದರ ಸದುಪಯೋಗವನ್ನು ತಾಲ್ಲೂಕಿ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು. 

ವಕೀಲರಾದ ಟಿ.ಹೆಚ್.ಎಂ. ವಿರೂಪಾಕ್ಷಯ್ಯ ಕಾರ್ಯಕ್ರಮವನ್ನು ಉದ್ಘಟಸಿ ಮಾತನಾಡಿ ಮನುಷ್ಯನಿಗೆ ಆರೋಗ್ಯವೇ ಮಹಾ ಭಾಗ್ಯ, ತಪಾಸಣೆ ಮಾಡಿ ಚಿಕಿತ್ಸೆ ಮತ್ತು ಆರೋಗ್ಯದ ಅರಿವಿನ ಬಗ್ಗೆ ಇಡೀ ನಾಡಿನಾದ್ಯಂತ ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ಎಂ.ಪಿ.ಪ್ರಕಾಶ್ ಕುಟುಂಬಕ್ಕೆ ಮಾತ್ರ ಸಾದ್ಯ, ಎಂದು ಹೇಳಿದರು.

ಈ ಕಾರ್ಯಕ್ರಮ ಕುರಿತು ಡಾ. ಮಹೇಶ್ ಮಾತನಾಡಿ ಭಾರತೀಯ ವೈದ್ಯಕೀಯ ಸಂಘದಲ್ಲಿ ಸದಸ್ಯರಾಗಿರುವ ಮಹಾಂತೇಶ್ ಚರಂತಿಮಠ್ ಕಾಡಿಯಲಜಿ ವಿಭಾಗದ ಶ್ರೇಷ್ಟ ತಜ್ಞರಾಗಿ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುವುದು ನಿಜವಾಗಲೂ ಮೆಚ್ಚುವಂತದ್ದು, ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಎಂ.ಪಿ. ವೀಣಾ ಮಹಾಂತೇಶ್ ಚರಂತಿಮಠ್ ಮಾತನಾಡಿದ ನಮ್ಮ ಟ್ರಸ್ಟ್ ಹಿಂದಿನಿಂದಲೂ ಇಡೀ ನಾಡಿನಾದ್ಯಂತ ಇಂತಹ ಸಾಮಾಜಿ ಕಾರ್ಯಕ್ರಮಗಳ ಮಾಡುತ್ತ ಬಂದಿದೆ, ಮುಂದೆ ಹರಪನಹಳ್ಳಿ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಿಗಳಲ್ಲಿ ಉಚಿತ ಆರೋಗ್ಯದ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು. 

500ಕ್ಕೂ ಹೆಚ್ಚು ಜನರು ರಕ್ತದ ಶುಗರ್ ಟೆಸ್ಟ್, 250ಕ್ಕೂ ಹೆಚ್ಚು ಜನರು ಇ.ಸಿ.ಜಿ, 150ಕ್ಕೂ ಹೆಚ್ಚು ಜನರು ಹಾರ್ಟ ಸ್ಕ್ಯಾನ್, 110 ಹೆಚ್ಚು ಜನರು ಕ್ಯಾನ್ಸರ್ ಸ್ಕ್ಯಾನಿಂಗ್, ಮಾಡಿಸಿಕೊಂಡರು, ಅನೇಕ ಜನರಿಗೆ ಮಧುಮೇಹ, ಬಿ.ಪಿ, ಪ್ರಪ್ರಥಮವಾಗಿ ಇರುವುದು ಗೊತ್ತಾಯಿತು, ಬಿ.ಪಿ. ಬಿಕಾಂಪ್ಲೆಕ್ಸ್, ಐರನ್ ಟ್ಯಾಬ್ಲೆಟ್ಸ್, ಮೈ ಕೈ ಹೊಟ್ಟೆ ನೋವು, ಜಂತು ಯಾಸಿಡಿಟಿ ಗುಳಿಗೆ ಮತ್ತು ಅನೇಕ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು, ಹೃದಯ, ಕ್ಯಾನ್ಸರ್ ಸಂಬಂಧಪಟ್ಟಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವಶ್ಯಕತೆ ಇದ್ದವರನ್ನು ಬೆಂಗಳೂರಿಗೆ ಶಿಪಾರಸ್ಸು ಮಾಡಲಾಯಿತು, ಎಂದು ವೈದ್ಯರಾದ ಮಹಾಂತೇಶ್ ಚರಂತಿಮಠ್ ತಿಳಿಸಿದರು. 

ಈ ಆರೋಗ್ಯ ಮೇಳವನ್ನು ಯಶಸ್ವಿಯಾಗಿ ಆಯೋಜನೆ ಮಾಡಲು ಸಹಾಯ ಸಹಕಾರ ನೀಡಿದ ಹರಪನಹಳ್ಳಿ ಕ್ಷೇತ್ರದ ಎಲ್ಲಾ ನಾಗರೀಕ ಬಂಧುಗಳಿಗೆ, ರೈತರಿಗೆ, ಯುವಕರಿಗೆ, ವೈದ್ಯರಿಗೆ, ಪೊಲೀಸರಿಗೆ, ಎ.ಡಿ.ಬಿ. ಕಾಲೇಜಿನ ಆಡಳಿತ ಮಂಡಳಿಗೆ ನಮ್ಮ ಸಂಘಟಕರಿಗೆ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಪರವಾಗಿ ಡಾ. ಮಹಾಂತೇಶ್ ಚರಂತಿಮಠ್ ಮತ್ತು ಟ್ರಸ್ಟ್ನ ಅಧ್ಯಕ್ಷೆಯಾದ ಎಂ.ಪಿ. ವೀಣಾ ಮಹಾಂತೇಶ್ರವರು ಅನಂತ ಧನ್ಯವಾದಗಳನ್ನು ಸಮಪರ್ಿಸಿದರು. 

ಈ ಸಂದರ್ಭದಲ್ಲಿ ಕಣ್ಣಿನ ತಜ್ಞರು, ಡಾ.ಎಂ.ಎಸ್. ಖಾನ್, ಡಾ. ಮಹೇಶ್, ಬೆಂಗಳೂರಿನ ಡಾ. ಶ್ರೀನಿವಾಸ ವೇಲೂರು ಮತ್ತು ಅವರ ತಂಡ, ಎ.ಡಿ.ಬಿ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಮೊಹನ್ ರೆಡ್ಡಿ, ಸುಮ ವಿಜಯ್, ಕವಿತ ವಾಗೀಶ್, ಟಿ.ಹೆಚ್.ಓ. ಮೆಣಸಿನಕಾಯಿ, ಡಾ.ಮಂಜುನಾಥ್, ಡಾ.ಅನಂತ ಶೆಟ್ಟಿ, ಎ.ಎಸ್.ಐ ಸದ್ಯೋಜಾತಪ್ಪ, ಹಲಗೇರಿ ಮಂಜಪ್ಪ, ವಕೀಲರಾದ ಸಿದ್ದಲಿಂಗನಗೌಡ, ಭಾಷಾ ಮುಜಾವರ್ ಶಿವಕುಮಾರ್ ನಾಯ್ಕ, ಶ್ರೀಕಾಂತ, ಚೇತನ ಕುಮಾರ್, ಬೆಂಗಳೂರಿನ ವೈದ್ಯತಂಡ ಮತ್ತು ಹರಪಹಳ್ಳಿ ವೈದ್ಯ ತಂಡ, ಹಾಗೂ ಹರಪನಹಳ್ಳಿ ತಾಲ್ಲೂಕಿನ ನಾಗರೀಕ ಬಂಧುಗಳು ಮುಂತಾದವರು ಇದ್ದರು.