ಧಾರ್ಮಿಕ ಭಾವನೆಗೆ ಧಕ್ಕೆ- ಕಾನೂನು ಹೋರಾಟ

Harm to religious feeling- legal fight

ಧಾರ್ಮಿಕ ಭಾವನೆಗೆ ಧಕ್ಕೆ- ಕಾನೂನು ಹೋರಾಟ

ಹೂವಿನಹಡಗಲಿ 08: ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇಗುಲದಲ್ಲಿ ವಂಶ ಪರಂಪರೆಯಾಗಿ ಧಾರ್ಮಿಕ ವಿಧಿ ವಿಧಾನ ದೀಕ್ಷೆ.ದೋಣಿ ಸೇವೆಗಳನ್ನು ಜತೆಗೆ ಭಕ್ತರ ಸೇವೆ ಮಾಡಿಕೊಂಡು ಬಂದಿದ್ದು.ಏಕಾಏಕಿ ದೇಗುಲ ಇಒ. ಹನುಮಂತಪ್ಪ ಬಲವಂತವಾಗಿ ದೇಗುಲದಿಂದ ಹೊರಗೆ ಕಳಿಸಿದ್ದು ಇದು ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದ್ದು ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ದೇಗುಲ ವಂಶಪರಂಪರೆ ಧರ್ಮಕರ್ತ ಗುರು ವೆಂಪ್ಪಯ್ಯ ಒಡೆಯರು ಹೇಳಿದರು. 

ಈ ಬಗ್ಗೆ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನಮ್ಮ ಹಿರಿಯರು ಪುರತಾನ ಕಾಲದಿಂದ ಧಾರ್ಮಿಕ ಸೇವೆ ಮಾಡುತ್ತ ಬಂದಿದ್ದು.ಇದೀಗ ಜಿಲ್ಲಾಧಿಕಾರಿಗಳ ಆದೇಶ ಎಂದು ಹೇಳಿಧಾರ್ಮಿಕ ಇಲಾಖೆ ಇಒ ವಂಶಸ್ಥರನ್ನು ಬಲವಂತವಾಗಿ ಹೊರಗೆ ಕಳಿಸಿದ್ದಾರೆ.ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ವೆಂಕಪ್ಪಯ್ಯ ಒಡೆಯರು ಹೇಳಿದರು