ಲೋಕದರ್ಶನ ವರದಿ
ಹರಪನಹಳ್ಳಿ 12: ರಾಜ್ಯ ಸರ್ಕಾರ ಪ್ರಕೃತಿ ವಿಕೋಪವನ್ನು ಗಂಬೀರವಾಗಿ ಪರಿಗಣಿಸಿ ಕೇಂದ್ರಕ್ಕೆ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲು ಮನವಿ ಮಾಡಿದೆ. 10-8-2019ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ರಾಜ್ಯಕ್ಕೆ ಖುದ್ದಾಗಿ ಬೇಟಿ ನೀಡಿ ಪರಿಸ್ತಿತಿಯ ತೀವ್ರತೆ ಅರಿತಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
ಪಟ್ಟಣದ ಪ್ರಾವಾಸಿ ಮಂದಿರದಲ್ಲಿ ರಾಜ್ಯದ ನೇರೆ ಹಾವಳಿಯ ಬಗ್ಗೆ ತಮ್ಮ ಸರ್ಕಾರ ಕೈಗೋಂಡ ಕ್ರಮಗಳ ಬಗ್ಗೆ ಹಾಗೂ ಅನಾವುತಗಳ ಬಗ್ಗೆ ತಿಳಿಸಿದರು. ಇಂದು ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ರವರು ಕೂಡ ರಾಜ್ಯಕ್ಕೆ ಅಗಮಿಸಿ ವೈಮಾನಿಕ ಸಮಿಕ್ಷೆ ನಡೆಸಿ ಅದಿಕರಿಗೋಳೊಂದಿಗೆ ಸಭೆ ನಡೆಸಲಿದ್ದಾರೆ. ಇಲ್ಲಿಯವರೆಗು ರಾಜ್ಯದ 16 ಜಿಲ್ಲೆಗಳ 80 ತಾಲ್ಲೂಕ ಪ್ರವಾಹದಿಂದ ತತ್ತರಿಸಿವೆ. ಹಾಗೂ 2ಲಕ್ಷ 35 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ. 12 ಸಾವಿರದ 651 ಮನೆಗಳು ಜಖಂ ಗೊಂಡಿವೆ. 220 ಜಾನುವಾರುಗಳು ಸತ್ತಿವೆ. 40 ಸಾವಿರ ಜಾನುವಾರುಗಳ ರಕ್ಷಣೆ ಮಾಡಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರ 624 ನಿರಾಶ್ರಿತ ಸಂತ್ರಸ್ತರ ಶಿಬಿರಗಳನ್ನು ಸ್ತಾಪಿಸಲಾಗಿದೆ. ಈ ಬೀಕರ ಪ್ರವಾಹದಿಂದ ಇಲ್ಲಿಯವರೆಗೆ 31 ಜನ ಸತ್ತಿದ್ದಾರೆ. ಸತ್ತ ಕುಟುಂಬದವರಿಗೆ 5ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುವುದು ಹಾಗೂ 1024ಹಳ್ಳಿಗಳು ಪ್ರವಾಹ ಪಿಡಿತವಾಗಿವೆ. ನೆರೆ ಹಾವಾಳಿ ಪ್ರದೇಶಗಳ ನೇರವಿಗೆ 20 ಎನ್ಡಿಅರ್ೆಎಪ್ ತಂಡಗಳು 10 ಮಿಲಿಟರಿ ತಂಡಗಳು ಹಾಗೂ 05 ಸೇವಿ ತಂಡಗಳು ಕಾರ್ಯನಿರ್ವಹಿಸುತ್ತಾವೆ.
ಇಲ್ಲಿಯವರೆಗು ರಾಜ್ಯದಲ್ಲಿ ಅತಿವೃಷ್ಟಿ ಯಾಗಿರುವಯದು ಈ ಮಹಾ ಪ್ರವಾಹದಿಂದ 17 ಜಿಲ್ಲೆಗಳಲ್ಲಿ ಜಲಪ್ರಳಯಾವಾಗಿದೆ. 1702 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 343 ಜಾನುವಾರುಗಳು ಸತ್ತಿವೆ. 924 ನೆರೆ ಸಂತ್ರಸ್ತರಿಗೆ 924 ಪರಿಹಾರ ಕೇಂದ್ರಗಳನ್ನು ತೆರೆಯಾಲಾಗಿದೆ. 3ಲಕ್ಷ 15 ಸಾವಿರ ಜನರ ರಕ್ಷಣೆ ಮಾಡಲಾಗಿದೆ. 2ಲಕ್ಷ 18 ಸಾವಿರ ಜನ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ರಾಜ್ಯದಲ್ಲಿ ಇಂದಿನವರೆಗು ಬಾರಿ ಮಳೆಯಿಂದಾಗಿ 21 ಸಾವಿರದ 500 ಮನೆಗಳಿಗೆ ಹಾನಿಯಾಗಿದೆ. ಮತ್ತು ರೈತರ 4ಲಕ್ಷದ 16 ಸಾವಿರ ಹೆಕ್ಟೆರ್ ಬೇಳೆ ನಾಶವಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಸಂಸದ ವೈದೇವೆಂದ್ರಪ್ಪ ಶಾಸಕ ಜಿ.ಕರುಣಾಕರರೆಡ್ಡಿ. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ. ಬಳ್ಳಾರಿ ಬಿಜೆಪಿ ಜಿಲ್ಲಾದ್ಯಕ್ಷ ಚನ್ನಬಸವನಗೌಡ. ತಾಲ್ಲೂಕ ಅದ್ಯಕ್ಷರಾದ ಸತ್ತೂರು ಹಾಲೇಶ ಸಣ್ಣಹಾಲಪ್ಪ. ಎಮ್ಪಿ ನಾಯ್ಕ. ಕೋಡಿಹಳ್ಳಿ ಬೀಮಪ್ಪ ಬಾಗಳಿ ಕೋಟ್ರೇಶಪ್ಪ ಎಂ ಮಲ್ಲೇಶ ವೆಂಕಟೇಶ್ ನಾಯ್ಕ. ಜಾವೀದ್. ಗೋಣಿಬಸಪ್ಪ. ಯುಪಿ ನಾಗರಾಜ ಮತ್ತಿಹಳ್ಳಿ ಶಿವಣ್ಣ ಮಂಜಾನಾಯ್ಕ. ಸಂತೋಷ ಕೃಷ್ಣ ಹಾಜರಿದ್ದರು.