ಹರಪನಹಳ್ಳಿ: ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಹರಪನಹಳ್ಳಿ 07: ಪರಿಶಿಷ್ಠ ಪಂಗಡ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ  ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. 

ಪಟ್ಟಣದ ಹರಿಹರ ವೃತ್ತದಿಂದ ಆರಂಭವಾದ ರ್ಯಾಲಿಯು ಪಟ್ಟಣದ ಇಜಾರಿ ಶಿರಸಪ್ಪ ವೃತ್ತದ ಮೂಲಕ ಹೊಸಪೇಟೆ ರಸ್ತೆ ಮಾರ್ಗವಾಗಿ ಆಗಮಿಸಿ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿಮರ್ಿಸಿ ಸಕರ್ಾರದ ವಿರುದ್ದ ಘೋಷಣೆ ಮೊಳಗಿಸಿದರು. ನಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಎಸ್.ಎ.ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ 42 ಲಕ್ಷಕ್ಕೂ ಅಧಿಕವಿದೆ. ಆದರೆ ವಾಲ್ಮೀಕಿ ನಾಯಕ ಸಮಾಜಕ್ಕೆ ಪ್ರಸ್ತುತ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರದಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ರಾಜ್ಯದಲ್ಲಿಯೂ ಇದೇ ಮಾದರಿಯ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

ರಾಜ್ಯದಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಶೇ.7.5ರಷ್ಟು ಮೀಸಲಾತಿಯನ್ನು ಪಡೆಯುತ್ತಿದ್ದು, ಆದರೆ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಶೇ.7.5ರಷ್ಟು ಮೀಸಲಾತಿ ನೀಡದೇ ವಂಚಿಸಲಾಗುತ್ತಿದೆ. 

1956ರಲ್ಲಿ ಪರಿಶಿಷ್ಠ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ನಿಗದಿಪಡಿಸಿತ್ತು. ರಾಜ್ಯದಲ್ಲಿ ಸಕರ್ಾರಗಳು ಬೇರೆ ಸಮುದಾಯಗಳನ್ನು ಪರಿಶಿಷ್ಠ ಪಂಗಡ ಪಟ್ಟಿಗೆ ಸೇರಿಸಿದೆ. ಆದರೆ ಮೀಸಲಾತಿ ಪ್ರಮಾಣ ಮಾತ್ರ ಹೆಚ್ಚಿಸದಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಕೆಲವು ಮುಂದುವರೆದ ವರ್ಗದವರು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ ಅನರ್ಹರಿಗೆ ಪ್ರಮಾಣ ಪತ್ರ ಸಿಗದಂತೆ ನೋಡಿಕೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ಸಮಾಜದ ಮುಖಂಡರಾದ ನೀಲಗುಂದ ವಾಗೇಶ್, ಪ್ರಾಣೇಶ್, ಹಳ್ಳಿಕೇರಿ ರಾಜಪ್ಪ, ಪಾಟ್ನಾಮದ ನಾಗರಾಜ್, ತೆಲಿಗಿ ಯೋಗೀಶ್, ಅರಸೀಕೆರೆ ಡಾ.ಸುರೇಶ್, ಕೆ.ಉಚ್ಚೆಂಗೆಪ್ಪ, ದುಗ್ಗಾವತ್ತಿ ಮಂಜಪ್ಪ, ಕುಂಚೂರ್ ಅಂಜಿನಪ್ಪ, ಹೆಚ್.ಬುಳ್ಳಪ್ಪ, ಕೆ.ದೇವೇಂದ್ರಪ್ಪ, ಆಲೂರು ಶ್ರೀನಿವಾಸ್, ಕೊಟ್ರೇಶಪ್ಪ, ತಿಪ್ಪೇಶ್, ಜಯಲಕ್ಷ್ಮೀ, ಗಿರಿಜಾ, ಪದ್ಮಕ್ಕ, ಸುಜಾತ, ಕೆ.ಮಂಜಮ್ಮ, ಪಿ.ಪವಿತ್ರ, ನೇತ್ರಾವತಿ, ಕೆಂಚಮ್ಮ, ತಿರುಮಲ, ಬಸಪ್ಪ, ಅಂಜಿನಪ್ಪ, ಎಸ್.ಬಸವರಾಜ್, ಷಣ್ಮುಖಪ್ಪ, ಕೆ.ರಾಜಪ್ಪ, ಹನುಮಂತಪ್ಪ, ದುರಗಪ್ಪ, ಮಂಜುನಾಥ್, ಕೋಡಿಹಳ್ಳಿ ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.