ಹರಪನಹಳ್ಳಿ: ವೇತನ ಬಿಡುಗಡೆಗೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಹರಪನಹಳ್ಳಿ 17: ತಾಲೂಕಿನ ಶಿಕ್ಷಕರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಸಂಪ್ಪನವರ್ ತಮ್ಮ ಶಿಕ್ಷಕರ ತೊಂದರೆಗಳನ್ನು ಬಗೆಹರಿಸುವಂತೆ ತಾಲೂಕು ಉಪವಿಭಾಗಾಧಿಕಾರಿ ಇಸ್ಮಾಯಿಲ್ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿದರು. 

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಸಕರ್ಾರಿ ನೌಕರರ ಸಂಘ, ಶಿಕ್ಷಕರ ಸಂಘ,  ಮುಖ್ಯೋಪಾಧ್ಯಾಯರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ, ಶಿಕ್ಷಕರ ಪತ್ತಿನ ಬ್ಯಾಂಕ್, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ,  ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಅಂಜಿನಪ್ಪ, ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ದೇವೇಂದ್ರ ಗೌಡ, ಪ್ರೌಢ ಶಾಲಾ ಶಿಕ್ಷಕರ ಸಂಘದ  ಅಧ್ಯಕ್ಷ ಹೊವಣ್ಣ,  ರಾಜ್ಯ ಸಕರ್ಾರಿ ರಾಜ್ಯ ಪರಿಷತ್ ಸದಸ್ಯ ಕೆ. ಸಿದ್ದಲಿಂಗನಗೌಡ,  ಶಿಕ್ಷಕರಾದ ಪದ್ಮರಾಜ್ ಜೈನ್, ಎಸ್. ರಾಮಪ್ಪ, ಬಿ. ರಾಜಶೇಖರ್, ಬಿ.ಸುಬ್ಬಣ್ಣ,  ಹನುಮಂತಪ್ಪ ಹೊಳಗುಂದಿ,  ಬಿ.ತಿಮ್ಮಪ್ಪ, ಕೆ.ಎಸ್. ಉಸ್ಮಾನ್, ರಾಮಮೂತರ್ಿ, ಅಜರ್ುನ್ ಪರಸಪ್ಪ, ರಮೇಶ, ಗುರುಪ್ರಸಾದ್, ಶೇಖರಪ್ಪ, ಮಾಲತೇಶ ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.