ಹನುಮಂತ ದೇವರ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 16: ಜಂಬಗಿ ಗ್ರಾಮದ ಮಾಳಿ ನಗರ ತೋಟದಲ್ಲಿ ಎಪ್ರೀಲ್ 19 ರಂದು ಹನುಮಾನ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಬೆಳಗ್ಗೆ ಹನುಮಂತ ದೇವರನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ಆನಂತರ ವಿಶೇಷ ಪೂಜೆ ಮತ್ತು ಮಹಾಪ್ರಸಾದ ನಡೆಯುತ್ತದೆ.

ಸಾಯಂಕಾಲ 4 ಗಂಟೆಗೆ  ಜಂಗಿ ಕುಸ್ತಿ ಅಕಾಡ ಏರ್ಪಡಿಸಲಾಗಿದೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ.ಪೂ ಕರೇಪ್ಪ ಮಹಾರಾಜ, ಪ.ಪೂ ಕೊಂಡಿಬಾ ಮಹಾರಾಜ ಶಿರೂರ ಇವರ ಹಸ್ತದಿಂದ ಕುಸ್ತಿಯನ್ನು ಪ್ರಾರಂಭಿಸಲಾಗುವದು ಪೈ ವಿಜಯ ದೂಮಾಳ ಮಹಾರಾಷ್ಟ್ರ ಕೇಸರಿ, ಪೈ ಪೋಪಟ ಗೊಡಕೆ ಕೊಲ್ಹಾಪೂರ, ಶಂಕರ ಮಾಯನಟ್ಟಿ, ಶಿವಾನಂದ ಪಾಟೀಲ ನಾಗರ ಮುನ್ನೋಳ್ಳಿ, ಪ್ರದೀಪ ಠಾಕೂರ ಇಚ್ಚಲಕರಂಜಿ, ರವಿ ಕೆಂಪಣ್ಣವರ ಬೆಳಗಾವಿ,  ಸಿಭೋದ ಪಾಟೀಲ ಇಚ್ಚಲಕರಂಜಿ, ರಮೇಶ ಶಿನಾಳ ಬೆಳಗಾವಿ, ಶಿವಪುತ್ರ ಮಾಯನಟ್ಟಿ ಬೆಳಗಾವಿ, ಅಮೀತ ಶಿರಸಿ ಶಿರಸಿ, ಶಿವಪುತ್ರ ಮಾಯನಟ್ಟಿ ಬೆಳಗಾವಿ, ನಿಂಗಪ್ಪ ಶಿವನೂರ, ಜ್ಯೋತಿಬಾ ಬಾಗಿ ಕ ಮಹಾಂಕಾಲ ಸೇರಿದಂತ ಹಲವಾರು ಪೈಲವಾನರ ಕುಸ್ತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹನುಮಾನ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಾನಿಕ (ದಾದಾ) ಅಹ್ವಾನಿಸಿದ್ದಾರೆ.