ಲೋಕದರ್ಶನ ವರದಿ
ಇಂಡಿ 25:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಹರಳಯ್ಯ ಸಮುಜಾದ ಮುಖಂಡರಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅದಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸನ್ಮಾನಿದರು.
ಈ ಸಂದರ್ಭದಲ್ಲಿ ಶ್ರೀ ಶಿವಶರಣ ಸಮಗಾರ ಹರಳಯ್ಯನವರ ಸಮುದಾಯ ಭವನದ ನೀವೇಶನದ ಹಕ್ಕು ಪತ್ರವನ್ನು ಸಮಾಜದ ಮುಖಂಡರಿಗೆ ಹಸ್ತಾಂತರಿಸಿ ಮಾತನಾಡಿ ಹರಳಯ್ಯ ಸಮಾಜ ಬಾಂದವರು ಸಹೃದಯಿಗಳಾಗಿದ್ದು ಎಲ್ಲರ ಜೊತೆ ಬೆರೆತು ಹೊಗುವಂತವರಾಗಿದ್ದಾರೆ. ಮಾತು ಕೊಟ್ಟಂತೆ ಇಂದು ತಮ್ಮ ಬಹುದಿನಗಳ ಬೇಡಿಕೆ ಇಡೇರಿದೆ. ಇದನ್ನು ಉಳಿಸಿ ಬೆಳಸಿಕೊಂಡು ಹೊಗುವುದು ಬಹಳ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಮಾಜ ಏಳಿಗೆಗಾಗಿ ಶ್ರಮಿಸಬೇಕು. ಅಲ್ಲದೆ ಎಲ್ಲ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಎಳಿಗೆಗಾಗಿ ಶ್ರಮಿಸಬೇಕು. ಹರಳಯ್ಯ ಸಮುದಾಯದ ಜನ ಮುಗ್ದ ಜನಾಂಗವಾಗಿದ್ದು ನಿಮ್ಮ ಬೇಕು ಬೇಡಿಕೆಗಾಗಿ ಸದಾ ಸಹಾಯ ಸಹಕಾರ ನೀಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ಎಮ್.ಎಸ್.ಕಟ್ಟಿಮನಿ, ಇಮ್ರಾನ ಮಿರಜಕರ, ಚಂದಪ್ಪ ಕಟ್ಟಿಮನಿ, ಕಾಸು ಹೊಸಮನಿ, ಮಹೇಶ ಹೊನ್ನಬಿಂದಗಿ, ರಾಜು ಚಾಬುಕಸವಾರ, ಜಟ್ಟೆಪ್ಪ ಕಟ್ಟಿಮನಿ, ಕಾಸು ಕಟ್ಟಿಮನಿ, ಪರಶುರಾಮ ಚಾಬುಕಸವಾರ, ಜಟ್ಟೆಪ್ಪ ಹೊನ್ನಕೊರೆ, ಬಂಗಾರೆಪ್ಪ ಮಾನೆ, ಪರಮೇಶ್ವರ ಕಟ್ಟಿಮನಿ, ಗಣೆಶ ಹೊನ್ನಮೊರೆ, ಕಾಸು ಕಟ್ಟಿಮನಿ, ಶಾಂತು ಕಟ್ಟಿಮನಿ ಸೇರಿದಂತೆ ಅನೇಕರಿದ್ದರು