ಹಳಿಯಾಳ ತಾಲೂಕಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಲೋಕದರ್ಶನ ವರದಿ

ಹಳಿಯಾಳ, 5 : ವಿವಿಧ ಕಾಮಗಾರಿಗಳನ್ನು ಸಕಾಲದಲ್ಲಿ ಮಾಡಿ ಇದಕ್ಕಾಗಿ ನಿಗದಿಪಡಿಸಿದ ಅನುದಾನ ಉಪಯೋಗಿಸಿಕೊಳ್ಳದಿದ್ದರೆ ಆ ಅನುದಾನ ಮರಳಿ ಹೋದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಎಚ್ಚರಿಸಿದರು.

ಮಿನಿ ವಿಧಾನಸೌಧದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಹಳಿಯಾಳ ತಾಲೂಕಾ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಸಚಿವ ಆರ್.ವಿ. ದೇಶಪಾಂಡೆಯವರು ಅನುಪಸ್ಥಿತರಿದ್ದ ಕಾರಣ ಸಭೆಯ ನೇತೃತ್ವ ವಹಿಸಿ ಎಂಎಲ್ಸಿ ಘೋಟ್ನೇಕರ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.

ಈ ಸಕರ್ಾರದಲ್ಲಿ ಯಾವುದೇ ಕಾಮಗಾರಿಯ ಅನುದಾನ ಕಾಮಗಾರಿ ಮಾಡದ ಕಾರಣ ವಾಪಸ್ ಹೋದರೆ ಅದು ಮರಳಿ ಬರುವುದಿಲ್ಲ. ಹೀಗಾಗಿ ವಿವಿಧ ಕಾಮಗಾರಿಗಳನ್ನು ಸಕಾಲದಲ್ಲಿ ಮಾಡಿ ಇದಕ್ಕಾಗಿ ನಿಗದಿಪಡಿಸಿದ ಅನುದಾನ ಉಪಯೋಗಿಸಿಕೊಳ್ಳಬೇಕು. ಒಂದಾನುವೇಳೆ ಅನುದಾನ ವಾಪಸ್ ಹೋದರೆ ನಾನೇ ಮುಂದಾಗಿ ಸಾರ್ವಜನಿಕರ ಜೊತೆಗೂಡಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ತಾಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿ ಪಂಚಾಯತ್ರಾಜ್ ಇಲಾಖೆಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಉಪಯೋಗಗೊಳ್ಳದೇ ಇರುವುದು ನೋವಿನ ಸಂಗತಿಯಾಗಿದೆ. ರಾಜ್ಯದಲ್ಲಿ ಅದೊಂದು ಬಹುದೊಡ್ಡ ಹಗರಣವಾಗಿದೆ. ಸಕರ್ಾರದ ಉತ್ತಮ ಯೋಜನೆಯಾದ ಇದು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಎಲ್ಲಾ ಶುದ್ಧ ನೀರು ಘಟಕಗಳು ಕಾಯರ್ಾರಂಭಗೊಂಡು ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿರಿ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಪಾಟೀಲ ಹಾಗೂ ಕೆಡಿಪಿ ನಾಮನಿದರ್ೇಶಿತ ಸದಸ್ಯ ವಾಮನ ಮಿರಾಶಿ ಇವರುಗಳು ಗಮನಸೆಳೆಯುವ ಸೂಚನೆಯೊಂದನ್ನು ಮಂಡಿಸುತ್ತಾ ರಸ್ತೆಗಳು ಅಲ್ಲಲ್ಲಿ ಹೊಂಡಬಿದ್ದು ಹಾಳಾಗಿದ್ದು ಇದರಿಂದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳು ಹಾಗೂ ಇತರ ವಾಹನಗಳ ಸಂಚಾರ ದುಸ್ತರಗೊಂಡಿದೆ. ಇನ್ನೊಂದೆಡೆ ಮೊಬೈಲ್ ಕಂಪನಿಗಳು ನೆಲದಡಿ ಕೇಬಲ್ ಅಳವಡಿಸುವ ಕಾಮಗಾರಿಯಿಂದ ರಸ್ತೆ ಪಕ್ಕದಲ್ಲಿ ಮಣ್ಣು ಅಸ್ತವ್ಯಸ್ತವಾಗಿ ಬಿದ್ದಿದ್ದು ಹಾಗೂ ರಸ್ತೆಬದಿ ಹೊಂಡಗಳು ಉದ್ಘವವಾಗಿವೆ ಎಂದು ತಿಳಿಸಿದರು.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಘೋಟ್ನೇಕರ ಅವರು ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಬಂದಿದ್ದ ಇಂಜಿನೀಯರ್ ಸಂಜೀವ ನಾಯ್ಕ ಅವರಿಗೆ ಹೇಳಿದರು. 

ಶ್ಲಾಘನೆ:- ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಬಗ್ಗೆ ಪೊಲೀಸ್ ಇಲಾಖೆಯ ಕಾರ್ಯವು ಶ್ಲಾಘನೀಯವಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ ಬಿ.ಎಸ್. ಲೋಕಾಪುರ ಅವರಿಗೆ ಅಭಿನಂದಿಸಿದ ಶ್ರೀಕಾಂತ ಘೋಟ್ನೇಕರ ಪರವಾನಿಗೆಯಿಲ್ಲದೇ ವಾಹನ ನಡೆಸುವವರನ್ನು, ದ್ವಿಚಕ್ರ ವಾಹನದ ಮೇಲೆ ಮೂರು ಜನ ಸವಾರಿ ಮಾಡದಂತೆ ಹಾಗೂ ನಶೆಯಲ್ಲಿ ವಾಹನ ನಡೆಸುವುದನ್ನು ಸಹ ತಡೆಗಟ್ಟುವಂತೆ ತನ್ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ನಿವೇಶನ ಮಾರಾಟ:- ಹಳಿಯಾಳ ಪಟ್ಟಣದಲ್ಲಿ ನಿವೇಶನಗಳಿಗೆ ಬಂಗಾರದ ಬೆಲೆ ಬಂದಿದೆ. ಏಜೆಂಟರುಗಳು ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಿವೇಶನ ಆಕಾಂಕ್ಷಿ ಜನರಿಂದ ದುಡ್ಡು ಹೊಡೆಯುವ ದಂಧೆ ನಿರಾತಂಕವಾಗಿ ನಡೆದಿದೆ. ಆದರೆ ಬಡಾವಣೆ ಪೂರ್ಣ ಅಭಿವೃದ್ಧಿಗೊಳಿಸದೇ ನಿವೇಶನ ಖರೀದಿಸಿ ಅಲ್ಲಿ ಮನೆ ನಿಮರ್ಿಸುವಾಗ ಪುರಸಭೆಯವರಿಗೆ ಅಭಿವೃದ್ಧಿ ಶುಲ್ಕವನ್ನು ಭರಿಸುವುದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪುರಸಭೆಯವರು ಗಮನಹರಿಸಬೇಕು. ಪೂತರ್ಿ ಅಭಿವೃದ್ಧಿಗೊಳಿಸದೇ ನಿವೇಶನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರಿಗೆ ಘೋಟ್ನೇಕರ ಆದೇಶಿಸಿದರು.

ಉಪಸ್ಥಿತಿ:- ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಮಹೇಶ್ರೀ ಮಿಶ್ಯಾಳಿ, ಲಕ್ಷ್ಮೀ ಕೋವರ್ೆಕರ, ಕೃಷ್ಣಾ ಪಾಟೀಲ, ತಾಲೂಕ ಪಂಚಾಯತ ಅಧ್ಯಕ್ಷ ರೀಟಾ ಸಿದ್ಧಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ ಹಾಗೂ ಸದಸ್ಯರು, ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ತಹಶೀಲ್ದಾರ ವಿದ್ಯಾಧರ ಗುಳಗುಳಿ ವೇದಿಕೆಯಲ್ಲಿದ್ದರು.