ಲೋಕದರ್ಶನ ವರದಿ
ಕೊಪ್ಪಳ 11: ಹಜರತ್ ಟಿಪ್ಪು ಸುಲ್ತಾನ್ ವೃತ್ತ ವಿಸ್ತಾರಿಸಿ ಸುಂದರವಾಗಿ ನಿಮರ್ಿಸಲು ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶಾಸಕ ಕೆ. ರಾಘವೇಂದ್ರ ಬಿ. ಹಿಟ್ನಾಳರವರಿಗೆ ಮನವಿ ಅಪರ್ಿಸಲಾಯಿತು.
ಮನವಿಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲೊಂದಾಗಿರುವ ಹಸನ ರಸ್ತೆಯಲ್ಲಿಯ ಪೊಲೀಸ್ ಠಾಣೆ ಹತ್ತಿರದ ಬ್ರಿಟಿಷರ ವಿರುದ್ಧ ಹೋರಾಡಿದ ಹಾಗೂ ದೇಶಕ್ಕೆ ಆಧುನಿಕ ಕೃಷಿ ಪದ್ಧತಿ ಪರಿಚಯಿಸಿದ ಹಜರತ್ ಟಿಪ್ಪು ಸುಲ್ತಾನ್ ವೃತ್ತದ ಮುಂಭಾಗದಲ್ಲಿರುವ ರಾಜ ಕಾಲುವೆ ಸೇತುವೆಯನ್ನು ಅಗಲವಾಗಿ ವಿಸ್ತರಿಸಿದರೆ ವಾಹನಗಳನ್ನು ಸಂಚರಿಸಲು ಅನುಕೂಲವಾಗುತ್ತದೆ. ಅಲ್ಲದೆ ವೃತ್ತ ಅಭಿವೃದ್ಧಿ ಪಡಿಸಿದರೆ ಸುಂದರ ವೃತ್ತವಾಗಿ ರೂಪಗೊಳ್ಳುತ್ತದೆ. ಹಜರತ್ ಟಿಪ್ಪು ಸುಲ್ತಾನ್ ವೃತ್ತಕ್ಕೆ ಅನೇಕ ಅಧಿಕಾರಿಗಳು, ಉನ್ನತ ರಾಜಕಾರಣಿ ಸೇರಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ಸಹ ಭೇಟಿ ನೀಡಿ ಮಾಲಾರ್ಪಣೆ ಮಾಡಿ ಗೌರವಿಸಿದ್ದಾರೆ. ಹೀಗೆ ಗಣ್ಯಾತಿಗಣ್ಯರು ಭೇಟಿ ನೀಡುವ ಹಜರತ್ ಟಿಪ್ಪು ಸುಲ್ತಾನ ವೃತ್ತಕ್ಕೆ ತಾವು ಹೆಚ್ಚಿನ ಕಾಳಜಿವಹಿಸಿ ರಾಜಕಾಲುವೆ ಮೇಲಿನ ಸೇತುವೆ ಅಗಲವಾಗಿ ವಿಸ್ತಾರಿಸಿ ಸುಂದರ ವೃತ್ತವನ್ನಾಗಿಸಲು ಶ್ರಮಿಸುವಿರೆಂದು ನಂಬಿದ್ದೇವೆ ಎಂದು ತಿಳಿಸಲಾಗಿದೆ.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಜಿಲ್ಲಾ ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದಶರ್ಿ ಸೈಯ್ಯದ್ ಸಲೀಮುದ್ದೀನ್ ಅಲ್ವಿ, ಅಖಿಲ ಭಾರತ ಯುವಜನ ಸಂಘದ ಜಿಲ್ಲಾ ಸಂಚಾಲಕ ಮಹಮ್ಮದ ಗೌಸ ನೀಲಿ ಮುಂತಾದವರು ಇದ್ದರು.