ಹಗರಿಬೊಮ್ಮನಹಳ್ಳಿ: ಪರಿಸರ ಸಂರಕ್ಷಣೆಗೆ ಸೀಡ್ ಬಾಲ್

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 07: ಜೂನ್ 7ರಂದು ಆಚರಿಸುವ ವಿಶ್ವ ಪರಿಸರ ದಿನಾಚರಣೆಯು ಕೇವಲ ಆಚರಣೆಗೆ ಆ ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿದಿನವೂ ಪರಿಸರದ ಬಗ್ಗೆ ಕಾಳಜಿ ಇರಬೇಕು ಅದ್ದರಿಂದ ಪಟ್ಟಣದ ಮೈತ್ರಿ ಟ್ರಸ್ಟ್ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಸಸಿಗಳನ್ನು ಬೆಳೆಸಲು ವಿನೂತನವಾದ ಸೀಡ್ ಬಾಲ್ ತಯಾರಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರೀಕರಣ ಮಾಡಲು ನಿರ್ಧರಿಸಲಾಯಿತೆಂದು ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಬಸವರಾಜ್ ರೆಡ್ಡಿ ಹೇಳಿದರು.

     ಪಟ್ಟಣದ ವಿಷ್ಣು ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದ ಉಸ್ತವಾರಿ ವಹಿಸಿಕೊಂಡ ವೈಭವ್ ಚಿದ್ರಿ ಮಾತನಾಡಿ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಹಸಿರೀಕರಣದಿಂದ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ಬಾರಿ ಹತ್ತು ಸಾವಿರ ಸೀಡ್ ಬಾಲ್ ತಯಾರಿಸಲಾಗುತ್ತಿದೆ, ಪ್ರಕೃತಿ ವಿಕೋಪಕ್ಕೆ ಪರಿಸರ ನಾಶವು ಒಂದು ಕಾರಣವಾಗಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೀಡ್ ಬಾಲ್ ಗಳನ್ನು ತಯಾರಿಸುವು ಬಗ್ಗೆ ಯೋಜನೆ ರೂಪಿಸುವ ಅಭಿಪ್ರಾಯವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಮೈತ್ರಿ ಟ್ರಸ್ಟ್ ನ ಲಕ್ಷೀಪತಿ, ಎಂ.ಎಸ್.ಪಟೀಲ್, ಪರಮೇಶ್ವರಯ್ಯ ಸೊಪ್ಪಿಮಠ್,,ಬಾವಿ ಶಶಿಧರ, ಆನಂದ ಬಡಗೇರ್, ಹಾಗೂ ಇತರೆ ಸಂಘಟನೆಗಳ ಆನಂದ, ಬಾಬು, ರಾಜೇಶ್ ಬ್ಯಾಡಗಿ, ಅನಿಲ್ ಚಿದ್ರಿ, ರಮೇಶ್, ಜಿ.ವಿಷ್ಣು, ಮತ್ತಿತರರು ಉಪಸ್ಥಿತರಿದ್ದರು. ಬೆಳೆಗ್ಗೆ ಎರಡು ಸಾವಿರ ಸೀಡ್ ಬಾಲ್ ಸಿದ್ಧಪಡಿಸಲಾಯಿತು.