ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 26: ಅರಣ್ಯ ಭೂಮಿ ಸಾಗುವಳಿದಾರರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಧರಣಿ ಮಾಡುವುದರ ಮೂಲಕ ಕನರ್ಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕವು ಮನವಿಯನ್ನು ನೀಡಿದರು.
ಸಿಐಟಿಯು ಕಾರ್ಯದರ್ಶಿ ಜಗನ್ನಾಥ್ ಮಾತನಾಡಿ ಪರಿಶಿಷ್ಟ ಪಂಗಡ(ಬುಡಕಟ್ಟು) ಮತ್ತು ಪಾರಂಪಾರಿಕ ಅರಣ್ಯ ನಿವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪಡೆಯಲು ನಾಲ್ಕು ಕೋಟಿಗೂ ಹೆಚ್ಚು ಅರ್ಹ ಜನರಿದ್ದು,ಕರ್ನಾಟಕ ರಾಜ್ಯಾದ್ಯಾಂತ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಎರೆಡು ಲಕ್ಷ ಎಂಭತ್ತು ನಾಲ್ಕು ಸಾವಿರ ಆರುನೂರ ಇಪ್ಪತೈದು ಅರಣ್ಯ ಭೂ ಉತ್ಪನ್ನ ಉಳುಮೆದಾರರು ಹಕ್ಕು ಮಂಡಿಸಿಅರ್ಜಿ ಸಲ್ಲಿಸಿದ್ದಾರೆ ಅದರಲ್ಲಿ ಕೇವಲ ಹದಿನಾರು ಸಾವಿರನೂರಮೂವತ್ತು ಅರ್ಜಿಗಳನ್ನು ಪುರಸ್ಕರಿಸಿ ಉಳಿದ ಅಜರ್ಿಗಳನ್ನು ತಿರಸ್ಕೃತ ಹಾಗೂ ವಿಲೇವಾರಿಗೆ ಬಾಕಿ ಉಳಿಸಲಾಗಿದೆ, ತಿರಸ್ಕೃತ ಅಜರ್ಿಗಳ ಭೂಉಳೆಮೆಗಾರರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ವಶ ಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಸಿದ್ದ ಪರಿಣಾಮ ಇಂದು ಅರಣ್ಯ ಬೂಮಿ ಅಎಂದ್ರ ಬುಡಕಟ್ಟುವಲಂಬಿತ ಕುಟುಂಬಗಳು ಆತಂಕದಲ್ಲಿ ಬದುಕುತ್ತಿವೆ ಹಾಗೂ ಕೇಂದ್ರ ಬುಡಕಟ್ಟು ಸಚಿವಾಲಯದ ಮೇಲ್ಮನವಿಯನ್ನು ಪರಿಗಣಿಸಿ ಸುಪ್ರೀ ಕೊಟ್ರ್ ತನ್ನ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ಹೊರಡಿಸಿದ್ದು ಸಲ್ಲಿಸಿದ ಅರ್ಜಿಗಳನ್ನು ಮರುಪರಿಶೀಲಿಸಿ ಹಕ್ಕುದಾರರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದರು.
ಅರಣ್ಯ ಭೂಮಿ ಸಾಗುವಳಿ ಮಾಡುವ ಕುಟುಂಬಗಳು ಬಡವರಾಗಿದ್ದು ಸಾಗುವಳಿ ಮಾಡುವ ಭೂಮಿಯನ್ನೆ ಅವಲಂಬಿತರಾದ್ದಾರೆ, ತಾಲೂಕಿನ ದಶಮಾಪುರ ಗ್ರಾಮದ ಎಪ್ಪತ್ತೆರಡು ಅರ್ಜಿಗಳು ತಿರಸ್ಕೃತಗೊಂಡಿದ್ದು, ಹಲಗಾಪುರ ಗ್ರಾ.ಪಂ.ಕಟ್ಟೆಹೊಲತಾಂಡದ ಸಾಗುವಳಿದಾರರಿಂದಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ, ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಗೈಗೊಂಡು ಅಜರ್ಿದಾರರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಎಐಕೆಎಸ್ನ ತಾಲೂಕು ಅಧ್ಯಕ್ಷ ಗಾಳೆಪ್ಪ,ಉಪಾಧ್ಯಕ್ಷ ಸಿ.ಹನುಮಂತಪ್ಪ, ಕಾರ್ಯದಶರ್ಿ ಮಂಜುನಾಥ್, ಸಹಕಾರ್ಯದರ್ಶಿ ಆನಂದ, ಕಡ್ಲೆಪ್ಪ, ಸರೋಜಮ್ಮ, ಮಹೇಶ್, ಅಂಜಿನಪ್ಪ,ಮಲ್ಲಮ್ಮ, ಹನುಮಂತ ಸೇರಿದಂತೆ ದಶಮಾಪುರ ಕಟ್ಟೆಹೊಲತಾಂಡದ ಸಾಗುವಳಿದಾರರು ಭಾಗವಹಿಸಿದ್ದರು.