ಹಗರಿಬೊಮ್ಮನಹಳ್ಳಿ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್ಸಿ ಶಾಲೆಯಲ್ಲಿ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠ ಸಂಸ್ಕಾರಯುತ ಶಿಕ್ಷಣ ಉತ್ತಮ ಪ್ರಜೆಗಳನ್ನಾಗಿಸುತ್ತದೆ: ವರಸದ್ಯೋಜಾತ ಶ್ರೀ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 31: ಮಕ್ಕಳಿಗೆ ನೀಡುವ ಶಿಕ್ಷಣವು ಸಂಸ್ಕಾರಯುತವಾಗಿದ್ದರೆ ಮಾತ್ರ ಉತ್ತಮ ಪ್ರಜೆಗಳನ್ನಾಗಿಸಲು ಸಾಧ್ಯವೆಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್ಸಿ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ನಹಿಸಿ ಮಾತನಾಡಿ "ಮೂಲತಃ ಪುರಾತನ ಕಾಲದಲ್ಲಿ ಅಕ್ಷರಭ್ಯಾಸ ನಡೆಯುತಿತ್ತು. ಅದು ಇತಿಹಾಸ. ಆದರೆ ಇಂದು ರಾಷ್ಟ್ರೋತ್ಥಾನ ಪರಿಷತ್ ಗತಕಾಲದ ಈ ಸಂಸ್ಕಾರವನ್ನು ನಡೆಸಿಕೊಂಡು ಬರುತ್ತಿರುವುದು ಈ ಸಂಸ್ಥೆಗೆ ಕೀತರ್ಿ ಸಲ್ಲುತ್ತದೆ"  ಎಂದು ತಿಳಿಸಿದರು. ನಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಉತ್ತಮ ಹಾಗೂ ಅಭ್ಯುದಯ ಪ್ರಜೆಗಳನ್ನು ನೀಡಲು ಸಾದ್ಯವೆಂದು ನುಡಿದರು.

ಮನುಷ್ಯನಿಗೆ ಕೊಡುವಂತಹ ಹದಿನಾರು ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸವು ಒಂದು ಸಂಸ್ಕಾರ. ಮನುಷ್ಯನ ಸಾಧನೆಗೆ ಅಕ್ಷರಾಭ್ಯಾಸ ಮೊದಲ ಮೆಟ್ಟಿಲು. ಅಕ್ಷರಾಭ್ಯಾಸವನ್ನು ಪೂರ್ವ ಪ್ರಾಥಮಿಕ ಮಕ್ಕಳಿಗೆ, ಪ್ರಥಮ ಪಾಠವನ್ನು 1 ರಿಂದ 10ನೇ ತರಗತಿ ವಿದ್ಯಾಥರ್ಿಗಳಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಗಣಹೋಮದಿಂದ ಆರಂಭಗೊಂಡಿತು. 

ಶಾಲಾ ಸಂಯೋಜಕರಾದ ವಿನಯ್ ಸಿಂಹ ಜೀ ವೇದಿಕೆಯಲ್ಲಿರುವಂತಹ ಗಣ್ಯರನ್ನು ಸ್ವಾಗತಿಸಿದರು. ಶ್ರೀಧರ ಮೂತರ್ಿಜೀ (ಕನ್ನಡ ನಿವೃತ್ತ ಶಿಕ್ಷಕರು) ರಾಷ್ಟ್ರೋತ್ಥಾನ ಪರಿಷತ್ತಿನ ಪರಿಚಯವನ್ನು ಮಾಡಿಕೊಟ್ಟರು. ಈ ಸಂದರ್ಭದಲ್ಲಿ  ಬಸವನಗೌಡ ಜೀ (ಕಾರ್ಯದಶರ್ಿಗಳು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ)  ವಿಠಲ್ ಜೀ (ಉತ್ತರ ಪ್ರಾಂತ ಅಧ್ಯಕ್ಷರು ಆರೋಗ್ಯ ಭಾರತಿ), ಪ್ರಧಾನಾಚಾರ್ಯರು,  ಶಿಕ್ಷಕ ಸಿಬ್ಬಂದಿ, ಪಾಲಕ -ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.