ಹಗರಿಬೊಮ್ಮನಹಳ್ಳಿ: ಮದ್ಯದಂಗಡಿಗೆ ಬೆಂಕಿ, 14.90 ಲಕ್ಷ ಹಾನಿ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 31: ಪಟ್ಟಣದ ಬಸವೇಶ್ವರ ಬಜಾರ್ನಲ್ಲಿರುವ ಮಧು ಬಾರ್ ಅಂಡ್ ರೆಸ್ಟೋರೆಂಟ್ಗೆ ದುಷ್ಕಮರ್ಿಗಳು ಹಚ್ಚಿದ ಬೆಂಕಿಗೆ 14.90 ಲಕ್ಷ ನಷ್ಟವಾಗಿರುವ ಘಟನೆ ಜರುಗಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ಬಸವರಾಜ್ ಈ ಬಗ್ಗೆ ಪಟ್ಟಣದ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಯಾರೊ ಕಿಡಿಗೇಡಿಗಳು ಈ ದುಷ್ಕೃತ್ಯವೆಸಗಿದ್ದು ಬಾರ್ನಲ್ಲಿ ಶೇಖರಿಸಿದ್ದ ವಿವಿಧ ರೀತಿಯ ಮದ್ಯ ಹಾಗೂ ಬಾರ್ನಲ್ಲಿನ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಭಂಧಿಸಿದಂತೆ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.