ಡಿ.ವಾಯ್‌.ಸಿ.ಭರತೇಶ ಪ್ರೌಢಶಾಲೆಯಲ್ಲಿ ಗುರುವಂದನೆ

Guruvandane at D.Y.C.Bharatesh High School

ಡಿ.ವಾಯ್‌.ಸಿ.ಭರತೇಶ ಪ್ರೌಢಶಾಲೆಯಲ್ಲಿ ಗುರುವಂದನೆ 

ಬೆಳಗಾವಿ 17: ಇಲ್ಲಿಯ ಡಿ.ವಾಯ್‌.ಸಿ.ಭರತೇಶ ಪ್ರೌಢಶಾಲೆಯ 2012 ರಿಂದ 2015 ನೇ ಸಾಲಿನಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪೈ ರೆಸಾರ್ಟ್‌ನಲ್ಲಿ ರವಿವಾರ ದಿ. 16ರಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಶಿಕ್ಷಕರಿಗೆ ಮೋಜಿನ ಆಟಗಳನ್ನು ಆಡಿಸಿ, ನಗಿಸಿ, ಖುಷಿಯಿಂದ ಬೀಗಿದರು. ಬಹುಮಾನ ನೀಡಿದರು. ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಾಧ್ಯಾಪಕ, ರಾಷ್ಟ್ರ​‍್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ಎ.ಎ.ಸನದಿ ಅವರು ಮಾತನಾಡಿ ಸಂತೃಪ್ತಿ.. ಶಾಂತಿ.. ನೆಮ್ಮದಿ ಪೇಟೆಯಲ್ಲಿ ಸಿಗುವ ವಸ್ತುಗಳಲ್ಲ. ಅವುಗಳನ್ನು ನಾವು ನಮ್ಮ ನಮ್ಮ ಉತ್ತಮ ನಡತೆ, ನುಡಿ ಹಾಗೂ ಸಮಾಜಕ್ಕೆ ಪೂರಕವಾಗುವ ಕೆಲಸ ಕಾರ್ಯಗಳಿಂದ ಪಡೆಯಲು ಸಾಧ್ಯ. ಆದ್ದರಿಂದ ಸಮಾಜಮುಖಿಯಾಗಿ, ಸಂಸ್ಕಾರವಂತರಾಗಿ ಆದರ್ಶ ಬದುಕನ್ನು ರೂಪಿಸಿಕೊಳ್ಳಿ ಎಂದು ಕರೆಕೊಟ್ಟರು. ಪಿ.ಎನ್‌. ಹಣ್ಣೀಕೇರಿ, ಪಿ.ಎಸ್‌.ಹಣಮಣ್ಣವರ ಮಾತನಾಡಿದರು. ಸೌರಭ ಯಂಗಟಿ ಸ್ವಾಗತಿಸಿದರು, ಮೇಘಾ ದೊಡ್ಡಕಲ್ಲಣ್ಣವರ ನಿರೂಪಿಸಿದರು. ಅಲ್ಫಾನ ತಹಶೀಲ್ದಾರ್ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸುದರ್ಶನ ಮೂಲ್ಯ, ಮೌನೇಶ್ ಪತ್ತಾರ, ಶ್ವೇತಾ ಶಿಗಿಹಳ್ಳಿ, ಅಕ್ಷತಾ ಬಡಚಿ, ಪದ್ಮಶ್ರೀ ಬಾಳೆಕಾಯಿ, ಸ್ನೇಹ ಜಿರಳೆ ಹಾಗು ಅರ್ಚನಾ ಕಾಮಕರ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.