ಲೋಕದರ್ಶನ ವರದಿ
ಧಾರವಾಡ21: ಎಲ್ಲಾ ಕಲೆಗಳಿಗಿಂತ ಸಂಗೀತ ನಮ್ಮನ್ನು ತನ್ಮಯಗೊಳಿಸಬಲ್ಲ ಕಲೆ. ಅದು ರಾಜನಿಗಿಂತಲೂ ಹೆಚ್ಚಿನ ರಕ್ಷಣೆಯನ್ನು ಕೊಡುತ್ತದೆ ಎಂದು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಹೇಳಿದರು. ಅವರು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಮಾನಸಾ ಸಂಗೀತ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಶ್ರೀನಗರದ ಪರಿಸರ ಭವನದಲ್ಲಿ ಹಮ್ಮಿಕೊಂಡ 'ಗುರುವಂದನಾ ಮತ್ತು ಸಂಗೀತೋತ್ಸವ ಕಾರ್ಯಕ್ರಮದ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಗುರಲಿಂಗ ಕಾಪಸೆ, ಹಾಡುಗಾರರಿಗೆ, ಕಲಾವಿದರಿಗೆ ರಾಜರ ಅರಮನೆಯ ಹಂಗಿಲ್ಲ. ಅವರು ಸ್ವತಂತ್ರರು, ಸಂಗೀತಕ್ಕೆ ಸಹೃದಯತೆ ಬೇಕೆ ಹೊರತು ಬಲವಂತಿಕೆಯಲ್ಲವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷರಾದ ಶಂಕರ ಕುಂಬಿಯವರು, ಪ್ಲಾಸ್ಟಿಕ್ ನಿಷೇಧ ಮಾಡುವ ಮೂಲಕ ಹಾಗೂ ಸಾಕಷ್ಟು ಗಿಡ-ಮರಗಳನ್ನು ನೆಡುವ ಮೂಲಕ ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಮಹಾನಗರವನ್ನು ಮಾಡಲು ನಾವೆಲ್ಲರೂ ಪಣ ತೊಡಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಾಧ್ಯಾಪಕ ಡಾ. ವಾಯ್ ಎಂ. ಭಜಂತ್ರಿ ಮಾತನಾಡಿ, ಶಹನಾಯಿ ಉಸಿರಿನ ಕಲೆ, ಉಸಿರಿನ ಆರಂಭ ಮತ್ತು ಅಂತ್ಯಗಳೆರಡರಲ್ಲಿಯೂ ಉಸಿರು ಬಹಳ ಮುಖ್ಯ. ಹುಟ್ಟಿದಾಗ ಉಸಿರಾಡಲು ಆರಂಭಿಸುತ್ತೇವೆ, ಮರಣದಲ್ಲಿ ಆ ಉಸಿರು ನಿಲ್ಲುತ್ತದೆ ಎಂದು ಹೇಳಿ ಖ್ಯಾತ ಶಹನಾಯಿ ವಾದಕ ಬಿಸ್ಮಿಲಾಖಾನ, ಸನಾದಿ ಅಪ್ಪಣ್ಣ ಮೊದಲಾದವರನ್ನು ಉದಾಹರಿಸಿ ಇಂಥ ಪ್ರತಿಭಾವಂತ ಕಲಾವಿದರಿಗೆ ಸರಕಾರದ ರಕ್ಷಣೆ ಬೇಕಾಗಿದೆ.
ಸಮಾರಂಭದ ಸಾನಿಧ್ಯ ವಹಿಸಿದ ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸಂಗೀತ ನೊಂದವರ ಬದುಕಿನ ಪ್ರತಿಕ್ರಿಯೆ. ಸಂಗೀತ ಸಾಮಾಜಿಕ ಸ್ವಾಸ್ತ್ಯವನ್ನು ಕಾಪಾಡುತ್ತದೆ. ಕಲಾವಿದರು ದುಶ್ಚಟಗಳಿಗೆ ವ್ಯಸನಿಗಳಾಗಬಾರದು ಎಂದರು
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದರ್ೇಶಕರು ಮಲ್ಲಿಕಾಜರ್ುನ ಭಜಂತ್ರಿ ಸ್ವಾಗತಿಸಿದರು. ರೇಖಾ ಭಜಂತ್ರಿ ನಿರೂಪಿಸಿದರು.
ಡಾ. ಉಮಾದೇವಿ ಜಡರಾಮಕುಂತಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಟಿ. ಭಜಂತ್ರಿ, (ಹೆಡಿಗೊಂಡ) ಗುರುವಂದನ ಸಲ್ಲಿಸಲಾಯಿತು. ಪರಿಸರ ಸಮಿತಿ ಕಾರ್ಯದಶರ್ಿ ಡಾ. ವಿಲಾಸ ಕುಲಕಣರ್ಿ, ಮಲ್ಲಿಕಾಜರ್ುನ ತರ್ಲಘಟ್ಟಿ, ಆಯ್. ಎಲ್. ಪಾಟೀಲ, ಮುಖ್ಯ ಅಧಿಕ್ಷಕ ಅಭಿಯಂತರರಾದ ನಾರಾಯಣ ಭಜಂತ್ರಿ, ಮುಂತಾದವರು ಉಪಸ್ಥಿತರಿದ್ದರು.
ಮಾನಸಾ ಸಂಗೀತ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ ಶಿವಾನಂದ ಭಜಂತ್ರಿ ಯವರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಸಂಗೀತೋತ್ಸದಲ್ಲಿ ಡಾ. ಮೃತ್ಯುಂಜಯ ಅಗಡಿ, ಡಾ. ಅರಣ್ಯಕುಮಾರ ಮುನೆನ್ನಿ, ಪಂ. ಶಾಂತಲಿಂಗ ಹೂಗಾರ, ಪರುಶುರಾಮ ಕಟ್ಟಿಸಂಗಾವಿ, ಪುಟ್ಟರಾಜ ಭಜಂತ್ರಿ, ಮಲ್ಲೇಶ ಹೂಗಾರ, ನಿತೀಶ ಭಜಂತ್ರಿ ಇವರು ಸಂಗೀತ ಕಾರ್ಯಕ್ರಮ ನೀಡಿದರು.