ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ರಾಷ್ಟೀಯ ಪದ್ಮಶ್ರೀ ಪುರಸ್ಕಾರ :ಎಂ. ವೆಂಕಟೇಶಕುಮಾರ

Gurukumar Panchakshari Award-2025 Rashtiya Padma Shri Award :M. Venkatesh Kumar

ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ರಾಷ್ಟೀಯ ಪದ್ಮಶ್ರೀ ಪುರಸ್ಕಾರ :ಎಂ. ವೆಂಕಟೇಶಕುಮಾರ   

ಗದಗ 03  : ನಗರದ  ಅಡವೀಂದ್ರಸ್ವಾಮಿ ಮಠದ ಕೃಪಾಶ್ರಯದಲ್ಲಿ  ಇದೇ ಮಾ. 4 ಮತ್ತು 5 ರಂದು  ಎರಡು ದಿನಗಳವರೆಗೆ ನಡೆಯುವ ಗಾನಯೋಗಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನ ಅದ್ದೂರಿಯಾಗಿ ಆಚರಿಸುತ್ತಿರುವ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಗದಗ  ವತಿಯಿಂದ  ಕೊಡ ಮಾಡುವ “ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025'' ಪ್ರಶಸ್ತಿಗೆ  ಅಂತರರಾಷ್ಟ್ರೀಯ ಶಾಸ್ತ್ರೀಯ  ಸಂಗೀತಗಾರ, ಸ್ವರ ಸಾಮ್ರಾಟ ಧಾರವಾಡದ ಪದ್ಮಶ್ರೀ ಡಾ. ಪಂ. ಎಂ ವೆಂಕಟೇಶಕುಮಾರ  ಅವರು ಭಾಜನರಾಗಿದ್ದಾರೆ.  

      ಶ್ರೀಯುತರು ಖ್ಯಾತ ಜನಪದ ಕಲಾವಿದರಾಗಿದ್ದ ಸೋದರಮಾವ  ವೀರಣ್ಣನವರ ನೆರವಿನಿಂದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ 60ರ ದಶಕದ ಅಂಚಿಗೆ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳವರ ಕೃಪಾಶ್ರಯದಲ್ಲಿ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ  ಗಾಯನ ತರಬೇತಿಯನ್ನು ಪಡೆಯಲಾರಂಬಿಸಿದರು. ಸಾಂಪ್ರದಾಯಿಕ ಗುರು-ಶಿಷ್ಯ ಪರಂಪರೆಯ ಪದ್ಧತಿಯಲ್ಲಿ ಗ್ವಾಲಿಯರ ಮತ್ತು ಕಿರಾನಾ ಘರಾನಾ ಶೈಲಿಗಳಲ್ಲಿ 12 ವರ್ಷಗಳವರೆಗೆ ಉಭಯ ಗಾಯನಾಚಾರ್ಯ ಪಂ. ಡಾ. ಪುಟ್ಟರಾಜ ಗವಾಯಿಗಳವರ ಆಶ್ರಯದಲ್ಲಿ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತವನ್ನು ಕಲಿತು ಗಾನ ವಿಶಾರದರಾದರು. ವೆಂಕಟೇಶಕುಮಾರ  ಅವರು ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಯಿಂದ  ರಾತ್ರಿಯವರೆಗೆ ರಾಗಧಾರಿಗಳನ್ನು ಕರಗತಮಾಡಿಕೊಂಡು ಜಗತ್ತೇ ಮೆಚ್ಚುವ ಪ್ರಸಿದ್ಧ ಸಂಗೀತಗಾರರಾದರು. 

      ಪಂ. ವೆಂಕಟೇಶಕುಮಾರವರಿಗೆ ಮೊದಲ ಬಾರಿಗೆ ಅತ್ಯನ್ನತ ಅವಕಾಶ ಸಿಕ್ಕಿದ್ದು 1993 ರಲ್ಲಿ ಭಾರತರತ್ನ ಪಂ. ಭೀಮಸೇನ್ ಜೋಶಿಯವರು ಮಹಾರಾಷ್ಟ್ರ  ಪುಣೆ ಮಹಾನಗರದಲ್ಲಿ ನಡೆದ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ಕೊಡಿಸಿದ್ದಲ್ಲದೆ,  ಪಂ. ಭೀಮಸೇನ್ ಜೋಶಿಯವರಿಗೆ ಮಹಾರಾಷ್ಟ್ರ ಸರಕಾರ ಕೊಡಮಾಡುವ “ಮಹಾರಾಷ್ಟ್ರ ಭೂಷಣ” ಪ್ರಶಸ್ತಿ ನೀಡಿ ಗೌರವಿಸುವ ಸಮಾರಂಭದಲ್ಲಿ ವೆಂಕಟೇಶಕುಮಾರ ಅವರ ಸಂಗೀತ ಕಾರ್ಯಕ್ರಮ ಇರಬೇಕೆಂದು ಮಹಾರಾಷ್ಟ್ರ ಸರಕಾರಕ್ಕೆ ಸಿಪಾರಸ್ಸು ಮಾಡಿ ಅವಕಾಶ ಕೊಡಿಸಿದ್ದು ಪಂ. ಭೀಮಸೇನ್ ಜೋಶಿಯವರು.     ಪಂ. ಎಂ ವೆಂಕಟೇಶಕುಮಾರ ಅವರು ಮಧುರವಾದ, ದೃಡವಾದ ಮತ್ತು ರೋಮಾಂಚಕ ಧ್ವನಿಯೊಂದಿಗೆ ಪ್ರಸಿದ್ಧ ಸಾಧಕರಲ್ಲೊಬ್ಬರಾಗಿದ್ದಾರೆ.  ಸಂಗೀತ ಸಂಪ್ರದಾಯದಲ್ಲಿ ಶ್ರೀಮಂತರಾಗಿದ್ದಾರೆ ಆಳವಾಗಿ ಬೇರೂರಿರುವ ಬದ್ಧತೆಯು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅವರನ್ನು ಉತ್ತುಂಗಕ್ಕೇರಿಸಿದೆ. ಅವರು ಭಾರತವಲ್ಲದೆ ವಿದೇಶಗಳಲ್ಲಿನ ಪ್ರಮುಖ ಸಂಗೀತ ಸಮಾರಂಭಗಳಲ್ಲಿ ಪ್ರದರ್ಶನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪಂ. ಎಂ. ವೆಂಕಟೇಶಕುಮಾರವರು ಕನ್ನಡ ವಚನಗಳು, ಭಕ್ತಿಗೀತೆಗಳು ಮತ್ತು ದಾಸರ ಪದಗಳನ್ನು ಹಾಡುವುದರಿಂದ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ. ಅವರು ಅನೇಕ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ ಸಿ.ಡಿ. ಅಲ್ಬಂಗಳನ್ನು ರೆಕಾರ್ಡಮಾಡಿ ಸಂಗೀತ ಪ್ರಪಂಚಕ್ಕೆ ಅರ​‍್ಿಸಿದ್ದಾರೆ.     ಪಂ.ಎಂ.ವೆಂಕಟೇಶಕುಮಾರ ಅವರು ಧಾರವಾಡ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದಲ್ಲಿ 33 ವರ್ಷಗಳ ಕಾಲ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಭಾರತಿಯ ಸಂಗೀತ ಕ್ಷೇತ್ರದಲ್ಲಿ ಅತ್ಯುನತ “ಎ ಟಾಪ್'' ಗ್ರೇಡ್ ಹೊಂದಿದ ಶ್ರೇಷ್ಟ ಸಂಗೀತ ಕಲಾವಿದರಾಗಿದ್ದಾರೆ. ಪದ್ಮಶ್ರೀ ಡಾ.ಪಂ.ಎಂ ವೆಂಕಟೇಶಕುಮಾರವರಿಗೆ 2022 ರಲ್ಲಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಮದ್ದೇನಹಳ್ಳಿಯಿಂದ ಗೌರವ ಡಾಕ್ಟರೇಟ್, 2017 ರಲ್ಲಿ  ಕಾಳಿದಾಸ ಸಮ್ಮಾನ್ ಪ್ರಶಸ್ತಿ, 2016 ರಲ್ಲಿ  ಭಾರತ ಘನ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ, 2014 ರಲ್ಲಿ ಸ್ವರ ಲಯ ಸಾಮ್ರಾಟ್, 2014 ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 2012 ರಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯಿಂದ ಪ್ರಶಸ್ತಿ, 2009 ರಲ್ಲಿ ಕೃಷ್ಣ ಹಾನಗಲ್ಲ ಪ್ರಶಸ್ತಿ, 2008 ರಲ್ಲಿ ವತ್ಸಲಾ ಭೀಮಸೇನ್ ಜೋಶಿ ಪ್ರಶಸ್ತಿ, 2007 ರಲ್ಲಿ ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, 1999 ರಲ್ಲಿ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ, ಸಂಗೀತ ಸುಧಾಕರ, ಸರ್ವಶ್ರೀ ಹೀಗೆ ರಾಜ್ಯ, ಹೊರರಾಜ್ಯ ಹಾಗೂ  ಭಾರತ ಸರಕಾರದಿಂದ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದಲ್ಲದೆ ನಾಡಿನ ಸಂಘ-ಸಂಸ್ಥೆಗಳು ಮಠಮಾನ್ಯಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪದ್ಮಶ್ರೀ ಡಾ. ಪಂ. ಎಂ ವೆಂಕಟೇಶಕುಮಾರವರ ಮುಡಿ ಅಲಂಕರಿಸಿವೆ.  

      ಇಂತಹ ಮಹಾನ್ ಸಾಧಕರಿಗೆ  ಇದೇ ಮಾ. 5 ರಂದು  ಗದುಗಿನ  ಶ್ರೀ ಅಡವೀಂದ್ರಸ್ವಾಮಿಮಠದಲ್ಲಿ  ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಗದಗ ವತಿಯಿಂದ  ಅದ್ದೂರಿಯಾಗಿ ಆಚರಿಸುವ ಗಾನಯೋಗಿ ಪಂಚಾಕ್ಷರಿ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ಘರಾನ ಸಮ್ಮೇಳನ ಸಮಾರಂಭದ ವೇದಿಕೆಯಲ್ಲಿ ದೇಶ ಕಂಡ ಅಪ್ರತಿಮ ಸಂಗೀತಗಾರ ಸ್ವರ ಮಾಂತ್ರಿಕ ಪದ್ಮಶ್ರೀ ಡಾ. ಪಂ. ಎಂ ವೆಂಕಟೇಶಕುಮಾರವರಿಗೆ “ಗುರುಕುಮಾರ ಪಂಚಾಕ್ಷರಿ ಸಮ್ಮಾನ- 2025'' ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ನಂತರ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದೆಂದು ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಕಾರ್ಯದರ್ಶಿ  ಮಲ್ಲಯ್ಯ ಶಿರೋಳಮಠ ಅವರು  ಪ್ರಕಟನೆಯಲ್ಲಿ ತಿಳಿಸಿದ್ದಾರೆ.