ಲೋಕದರ್ಶನ ವರದಿ
ಕಂಪ್ಲಿ 18:ಗುರುಗಳ ಮಾರ್ಗದರ್ಶದಲ್ಲಿ ವಿದ್ಯಾಥರ್ಿಗಳು ಗುರಿಯೊಂದಿಗೆ ಶೈಕ್ಷಣಿಕ ರಂಗದಲ್ಲಿ ದೊಡ್ಡ ಮಟ್ಟಡ ಸಾಧನೆಗೈಯ್ಯಲು ಜಾಗೃತಿವಹಿಸಬೇಕು ಎಂದು ಹಂಪಿ ಉಪ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾಜರ್್ ಹೇಳಿದರು.
ತಾಲ್ಲೂಕಿನ ಎಸ್.ಜಿ.ವಿ.ಎಸ್.ಎಸ್ ಸಕರ್ಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರಸ್ವತಿ ಪೂಜೆ ಹಾಗೂ ವಾಷರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾಥರ್ಿಗಳ ಭವಿಷ್ಯ ಅಡಗಿದೆ. ಪಾಠ, ಪ್ರವಚನ ಆಲಿಸುವ ಮೂಲಕ ಸಾಧನೆಯ ಗುರಿ ಮುಟ್ಟಬೇಕು. ಉನ್ನತ ವ್ಯಾಸಾಂಗದೊಂದಿಗೆ ಒಳ್ಳೆಯ ಉದ್ಯೋಗ ಪಡೆಯಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಎಂ.ಸುಧೀರ್ ಮಾತನಾಡಿ, ಪಾಠದ ಜೊತೆಗೆ ಪಠ್ಯೇತರ ರಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ಸು ಹೊಂದಬೇಕು. ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದರು.
ಪ್ರಾಂಶುಪಾಲ ಎಂ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ವಿದ್ಯಾಥರ್ಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಪ್ರತಿ ವರ್ಷದಲ್ಲಿ ವಿದ್ಯಾಥರ್ಿನಿಯರು ಸಾಧನೆಗೈಯು ಕಾಲೇಜು ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ನಂತರ ಭೂದಾನಿಗಳಾದ ರಾಮ್ಬಸವೇಶ್ವರರಾವ್, ಗೋಪಾಲ ಕೃಷ್ಣ ಸೇರಿದಂತೆ ಗಣ್ಯತೀ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾಥರ್ಿನಿಯರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನೃತ್ಯ, ಹಾಡು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ಲಕ್ಷ್ಮಣ, ಸಿಪಿಐ ಡಿ.ಹುಲುಗಪ್ಪ, ಪಿಎಸ್ಐ ಕೆ.ಬಿ.ವಾಸುಕುಮಾರ್, ಪ್ರಾಚಾರ್ಯ ಮಹ್ಮದ್ ಶಫಿ, ಉಪ ಪ್ರಾಚಾರ್ಯ ಅನ್ಸಾರ್ ಸಾಹೇಬ್, ಮುಖಂಡರಾದ ನಿರಂಜನ್ ಗುಪ್ತ, ನವಣೆಪಾಟೀ, ದಾಮೋದರ್, ಈರಣ್ಣ ಹಾಗೂ ಉಪನ್ಯಾಸಕರು ಸೇರಿದಂತೆ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.