ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಯಶಸ್ವಿ

Guru Vandana program by Junior Technical School students a success

ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಯಶಸ್ವಿ 

ಬಳ್ಳಾರಿ 12:ಸ್ಥಳೀಯ ಕಂಟೋನ್ಮೆಂಟ್ ಹತ್ತಿರದಲ್ಲಿರುವ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ  2000-2001 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಪುನರ್ಮಿಲ ಮತ್ತು ಗುರುವಂದನಾ ಕಾರ್ಯಕ್ರಮವನ್ನು ನಗರದ ರಾಯಲ್ ಫೋರ್ಟ್‌ ಹೋಟೆಲ್ ಫಂಕ್ಷನ್ ಹಾಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.  

ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಬಹುತೇಕ ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿನಮ್ರತೆಯಿಂದ ಪಾಲ್ಗೊಂಡು ತಮಗೆ ವಿದ್ಯಾ ದಾನ  ಮಾಡಿದ ಗುರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ತೋರಿದ್ದಾರೆ. 

ಕಾರ್ಯಕ್ರಮದ ಅಂಗವಾಗಿ ಗವಾಯಿಗಳವರಲ್ಲಿ ಸಂಗೀತಾಭ್ಯಾಸ ಮಾಡಿದ ಗಾಯಕಿ ಸುರಯ್ಯ ಬೇಗಮ್ ಕಾಸಿಂ ವಲಿ ಅವರು ತಮ್ಮ ಸುಮಧುರ ಕಂಠದಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸಮಾರಂಭಕ್ಕೆ ಶೋಭೆಯನ್ನುಂಟು ಮಾಡಿದರು. ಇದರ ಜೊತೆಗೆ ಇನ್ನೂ ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳು ನಡೆದವು. ಹಿರಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ಕಳೆದ ಅದ್ಭುತ ಕ್ಷಣಗಳನ್ನು ಮತ್ತು ತಮ್ಮ ಗುರುಗಳ ಕುರಿತು ಹೆಮ್ಮೆಯ ಮಾತುಗಳನ್ನು ಆಡುವ ಮೂಲಕ ಭಾವುಕರಾಗಿದ್ದು ಅತ್ಯಂತ ವಿಶೇಷವಾಗಿತ್ತು.  

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ರಾಮದಾಸ್, ತಿಪ್ಪೇಸ್ವಾಮಿ, ಶಿವಶಂಕರ ಮತ್ತು ಶಿಕ್ಷಕಿಯರಾದ ಗಿರಿಜಾ, ಸುಮಾ, ರೇಖಾ, ಸುಜಾತ ಅವರೆಲ್ಲರೂ ಪಾಲ್ಗೊಂಡು ಸಂತಸಪಟ್ಟು ಮತ್ತು ತಮ್ಮ ವಿದ್ಯಾರ್ಥಿಗಳ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದರು. 

ಯಾವುದೇ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬರಬೇಕಾದರೆ ಹಲವರ ಪರಿಶ್ರಮವಿರುತ್ತದೆ. ಇದರ ಮುಖ್ಯ ರೂವಾರಿಗಳೆಂದರೆ ಹಿರಿಯ ವಿದ್ಯಾರ್ಥಿಗಳಾದ ಕೆಂಚಪ್ಪ ಮತ್ತು ಬಾಬು ಇವರುಗಳು ತಮ್ಮೆಲ್ಲ ಗೆಳೆಯರ ಬಳಗವನ್ನು ಒಂದುಗೂಡಿಸಿ ಎಲ್ಲರ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅದ್ಭುತವಾಗಿ ನೆರವೇರಿಸಿ ಕೊಟ್ಟಿರುವುದು ಗುರುವೃಂದದ ಮೇಲಿರುವ ಭಕ್ತಿ ಮತ್ತು ಗೌರವವನ್ನು ಸೂಚಿಸುತ್ತದೆ. ಇಂತಹ ಕಾರ್ಯಕ್ರಮಗಳು ಇಂದಿನ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದು ಹೇಳಿದರೂ ಅದು ಅತಿಶಯೋಕ್ತಿಯಾಗಲಾರದು.