ಲೋಕದರ್ಶನ ವರದಿ
ಗಂಗಾವತಿ 07: ವಿವಿದ್ದೋಶ (ಎಂಆರ್ಡಬ್ಲೂ) ಮತ್ತು ಗ್ರಾಮೀಣ ಪುನರ್ವಸತಿ(ವಿಆರ್ಡಬ್ಲೂ) ನಗರ ಪುನರ್ವಸತಿ ವಿಕಲಚೇತನ ಕಾರ್ಯಕರ್ತರನ್ನು ಖಾಯಂಗೊಳಿಸಬೇಕು ಎಂದು ವಿಕಲಚೇತನರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ ಹೊಸ್ಕೇರಾ ಶುಕ್ರವಾರ ಒತ್ತಾಯಿಸಿದರು.
ಶಾಸಕ ಪರಣ್ಣ ಮುನವಳ್ಳಿಯವರ ನಿವಾಸಕ್ಕೆ ಆಗಮಿಸಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು. ಕಾರ್ಯಕರ್ತರ ಖಾಯಂಗಾಗಿ ಈ ಅಧಿವೇಶನದಲ್ಲಿ ಚಚರ್ೆ ನಡೆಸಬೇಕು. ರಾಜ್ಯದ ಜನಸಂಖ್ಯೆಯ ಶೇ.75 ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯ ಶೇ.6 ರಷ್ಟು ವಿಕಲಚೇತನರ ಆಥರ್ಿಕ ಪುನರ್ವ ವಸತಿಗಾಗಿ 2006-07 ಸಾಲಿನಲ್ಲಿ ಈ ಯೋಜನೆ ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.
2011 ರ ಜನ ಗಣತಿಯಂತೆ ರಾಜ್ಯದಲ್ಲಿ 13,29,204 ವಿಕಲಚೇತನ ಕುಟುಂಬಗಳಿವೆ. ತಾಲೂಕಿಗೆ ಸರಾಸರಿ 6 ಸಾವಿರ ವಿಕಲಚೇತನರಿದ್ದಾರೆ. ಇವರ ಮೇಲೆ ಅವಲಂಬಿತರು 50 ಸಾವಿರ ಜನಸಂಖ್ಯೆ ಇದೆ. ಇವರಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ಡಬ್ಲೂ ಮತ್ತು ವಿಆರ್ಡಬ್ಲೂಗಳಿಗೆ ಉದೋಗ ಭದ್ರತೆ ಇಲ್ಲ. ಕಾರಣ ಇವರನ್ನು ತಾಲೂಕು ಅಂಗವಿಕಲ ಕಲ್ಯಾಣ ಅಧಿಕಾರಿ, ವಿಕಲಚೇತನರ ಅಭಿವೃದ್ದಿ ಅಧಿಕಾರಿ ಎಂದು ಹುದ್ದೆ ಸೃಷ್ಟಿಸಿ ಖಾಯಂಗೊಳಿಸಬೇಕು ಎಂದು ಅವರು ತಿಳಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಹುಲುಗಪ್ಪ ಕಾಗೇರಿ, ಮಂಜುಳಾ ಪುರಾಣಿಕ, ಯಮನೂರಪ್ಪ ಪುಂಡಗೌಡ, ಸೋಮಶೇಖರಗೌಡ, ಪಂಪಣ್ಣ, ಶರಣಯ್ಯಸ್ವಾಮಿ ಕರಡಿಮಠ ಪಾಲ್ಗೊಂಡಿದ್ದರು.