ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ರಕ್ತದಾನ: ಬೇವಿನಕಟ್ಟಿ

ಲೋಕದರ್ಶನ ವರದಿ

ಗದಗ12: ಯುವಕರು ನಮ್ಮ ದೇಶದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ದೇಶದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳಿಗಾಗಿ ಅವರ ಕಷ್ಟಸುಖಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸಾಮಾಜಿಕ ಸೇವೆಗಳನ್ನು ಮಾಡಲು ಮುಂದಾಗಬೇಕು, ಯುವಕರು ದುಷ್ಚಟಗಳಿಗೆ ದಾಸರಾಗದೆ ತಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಜನರ ಸೇವೆ ಮಾಡಿ, ಅನೇಕ ಬಡ ಕುಟುಂಬಗಳು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಪಡೆಯಲು ಸಾಧ್ಯವಾಗುದಿಲ್ಲಾ ಅಂತಹ ಕುಟುಂಬಗಳಿಗೆ ಸಹಾಯ ಮಾಡಿ, ಬಹಳ ಪ್ರಮುಖವಾಗಿ ಎಲ್ಲಾ ಯುವಕರು ರಕ್ತದಾನದಂತ ಸೇವೆ ಮಾಡಬೇಕು. ಎಲ್ಲಾ ದಾನಕ್ಕಿಂತ ಶ್ರೇಷ್ಠವಾದದ್ದು ರಕ್ತದಾನ ಹಾಗಾಗಿ ಎಲ್ಲರೂ ಯಾವುದೇ ಭಯ್ಯವಿಲ್ಲದೇ ರಕ್ತದಾನ ಮಾಡಬೇಕೆಂದು ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾಯನ್ ದತ್ತು ಬೇವಿನಕಟ್ಟಿ ಕರೆ ನೀಡಿದರು.       ಅವರು ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಅಂಜುಮನ್ ಕಮೀಟಿಗಳ ಸಂಯುಕ್ತ ಆಶ್ರಯದಲ್ಲಿ ಮತ್ತು ಲಾಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಮತ್ತು ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ನಿಮಿತ್ಯ ಲಾಯನ್ಸ್ ಕ್ಲಬ್ ಹಾಲನಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಪ್ರವಾದಿಗಳ ಜಯಂತ್ಯೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆಯಿಂದ ಇಂತಹ ರಕ್ತದಾನದಂತ ಅಮೂಲ್ಯವಾದ ಸೇವೆಯನ್ನು ನೀಡುತ್ತಿದ್ದು ನನ್ನಗೆ ತುಂಬಾ ಸಂತೋಷವಾಗಿದೆ. ಸಂಸ್ಥೆಯಿಂದ ಇಂತಹ ಸಮಾಜ ಸೇವೆಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮೌಲಾನಾ ಮುಫ್ತಿ ಆರೀಫಸಾಬ ಕಾಶ್ಮಿ ಇವರು ಮಾತನಾಡಿ ಅಂಜುಮನ್ ಸಂಸ್ಥೆಯಿಂದ ಪ್ರವಾದಿಗಳ ಜಯಂತ್ಯೋತ್ಸವದ ಅಂಗವಾಗಿ ಇಂತಹ ಬೃಹತ್ವಾದ ರಕ್ತದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ನಮ್ಮ ಯುವಕರು ಪ್ರವಾದಿ ಮುಹ್ಮದ ಪೈಗಂಬರವರ್ ತತ್ವಾದರ್ಶಗಳನ್ನು ಅರಿತುಕೊಂಡು ಇವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ ಮಾತನಾಡಿ ಪ್ರವಾದಿ ಹಜರತ್ ಮುಹ್ಮದ ಪೈಗಂಬರವರು ಇಡೀ ಜಗತ್ತಿಗೆ ಶಾಂತಿ ಸೌಹರ್ಾದತೆಯ ಸಂದೇಶವನ್ನು ಸಾರಿದವರು, ಎಲ್ಲಾ ಜಾತಿ ಸಮುದಾಯಗಳ ಜೊತೆಗೆ ಒಳ್ಳೆ ಸೌಹಾರ್ದತೆಯ ಭಾಂದ್ಯವವನ್ನು ಬೆಳೆಸಿಕೊಳ್ಳಲು ನಮ್ಮಗೆ ಮಾರ್ಗದರ್ಶನ ಮಾಡಿದ್ದಾರೆ. 

ವೇದಿಕೆಯ ಮೇಲೆ ಮೌಲಾನಾ ಶಮಶುದ್ದಿನ ಇನಾಮಿ, ಮೌಲಾನಾ ಮುಫ್ತಿ ಶಬ್ಬೀರಅಹ್ಮದ ಬೋದ್ಲೇಖಾನ, ಡಾ:ಪಲ್ಲೇದ, ಡಾ:ಪ್ಯಾರಅಲಿ ನೂರಾನಿ, ಡಾ:ಪವಾಡ ಶೆಟ್ಟರ, ಡಾ:ರಾಜೇಂದ್ರ ಗೋಡಬೋಲೆ, ಡಾ:ಮಸೂತಿಮನಿ, ತಾಲೂಕ ಪಂಚಾಯತ್ ಅಧಿಕಾರಿಗಳಾದ ಎಚ್.ಜಿ.ಜಿಣಗಿ, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾದ ಜಿ.ಎಂ.ದಂಡಿನ, ಈದ ಮೀಲಾದ ಕಮೀಟಿ ಅಧ್ಯಕ್ಷರಾದ ರಜಾಕ ಡೆಂಕೇದ, ಪಿ.ಎಸ್.ಐ ಗಳಾದ ಶೋಭಾ.ಎಮ್.ಭರಮಣ್ಣವರ ಉಪಸ್ಥಿತರಿದ್ದು ಮಾತನಾಡಿದರು, ಸಂಸ್ಥೆಯ ಕಾರ್ಯದಶರ್ಿಯಾದ ಇಮ್ತಿಯಾಜ.ಆರ್.ಮಾನ್ವಿ ಕರ್ಯಕ್ರಮವನ್ನು ನಿರೂಪಿಸಿದರು, ಮಹ್ಮದ ಮುಲ್ಲಾ ಸ್ವಾಗತಿಸಿದರು, ರಿಯಾಜಅಹ್ಮದ ಢಾಲಾಯತ ವಂದಿಸಿದರು, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಬಾಬಾಜಾನ ಬಳಗಾನೂರ, ಖಜಾಂಚಿಯಾದ ಬಾಷಾಸಾಬ ಮಲ್ಲಸಮುದ್ರ, ಸದಸ್ಯರಾದ ಅನ್ವರ ಶರಹಟ್ಟಿ, ಇಲಿಯಾಸ್ ಖೈರಾತಿ, ಮುನ್ನಾ ಶೇಖ, ಉಮರಫಾರುಖ ಹುಬ್ಬಳ್ಳಿ, ಅಷ್ಫಾಕಅಲಿ ಹೊಸಳ್ಳಿ, ಶಫಿಅಹ್ಮದ ನವಲಗುಂದ, ರಫೀಕ ಜಮಾಲಖಾನವರ, ತೌಸೀಫ ಕಮಾನಗಾರ, ಮೆಹಬೂಬ ಮುಲ್ಲಾ, ಜೂನಸಾಬ ನಮಾಜಿ, ಮಕ್ತುಂ ಮುಲ್ಲಾ, ಶಾರುಖ ಹುಯಿಲಗೋಳ, ಮುಸ್ತಾಕ ಕೌತಾಳ, ಮುಜಫರ ಮುಲ್ಲಾ, ಶಹಬಾಜ ಮುಲ್ಲಾ, ಸೋಹಿಲ್ ಹಲರ್ಾಪೂರ, ನಿಜಾಮುದ್ದಿನ ಕಾತರಕಿ, ಮಲೀಕ ಹಂಪಾಪಟ್ಟಣ, ಸಾಧಿಕ ನರೇಗಲ್ಲ ಹಾಗೂ ಸಂಸ್ಥೆಯ ನೂರಾರು ಯುವಕರು ಉಪಸ್ಥಿತರಿದ್ದು ರಕ್ತದಾನವನ್ನು ಮಾಡಿದರು.