ಜೀವನದಲ್ಲಿ ನಿರಂತರ ಪ್ರಯತ್ನದಿಂದ ಶ್ರೇಷ್ಠ ಸಾಧನೆ ಸಾಧ್ಯ: ಶಾಸಕ ನಾಡಗೌಡ
Great achievements in life are possible through continuous effort: MLA Nadagowda
ತಾಳಿಕೋಟಿ 08: ನಿಮಗೆ ಒಳ್ಳೆಯ ಶಿಕ್ಷಣವನ್ನು ನೀಡಿ ನಿಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಲು ಹೆತ್ತವರು ಹಗಲಿರಳು ಕಷ್ಟ ಪಡುತ್ತಾರೆ ಅವರ ನೀರೀಕ್ಷೆಗಳನ್ನು ಹುಸಿಗೊಳಿಸಬೇಡಿ ಜೀವನದಲ್ಲಿ ನಿರಂತರ ಪ್ರಯತ್ನದಿಂದ ಶ್ರೇಷ್ಠ ಸಾಧನೆಯನ್ನು ಮಾಡುವಂತವರಾಗಿ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಹೇಳಿದರು. ರವಿವಾರ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 240.80 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಿರುವ ಈ ವಸತಿ ನಿಲಯದಲ್ಲಿ 100 ವಿದ್ಯಾರ್ಥಿನೀಯರು ಇರುವಷ್ಟು ಸೌಲಭ್ಯವಿದೆ. ಈ ಮೊದಲು ಬಾಡಿಗೆ ಕಟ್ಟಿಡದಲ್ಲಿ ನಡೆಸುತ್ತಿರುವ ಈ ವಸತಿ ನಿಲಯವನ್ನು ಆದಷ್ಟು ಬೇಗ ಇಲ್ಲಿಗೆ ಸ್ಥಳಾಂತರ ಮಾಡಲಾಗುವುದು ವಿದ್ಯಾರ್ಥಿನಿಯರು ಈ ಕಟ್ಟಡದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಶ್ರೇಷ್ಠ ಸಾಧನೆ ಮಾಡುವಂತವರಾಗಬೇಕು, ಪಾಠದೊಂದಿಗೆ ಕ್ರೀಡೆಗೂ ಮಹತ್ವ ನೀಡಬೇಕು ಇಲ್ಲಿ ಸಣ್ಣಪುಟ್ಟ ಕ್ರೀಡೆಗಳನ್ನಾಡಲು ಸ್ಥಳಾವಕಾಶ ಇದೆ ಇದರ ಸದುಪಯೋಗ ಮಾಡಿಕೊಂಡು ಒಳ್ಳೆಯ ಕ್ರೀಡಾ ಪಟುಗಳಾಗಲೂ ಪ್ರಯತ್ನಿಸಿ ಎಂದರು. ಇದೇ ಸಂದರ್ಭದಲ್ಲಿ ನೂತನ ವಸತಿ ನಿಲಯದ ಕಟ್ಟಡ ನಿರ್ಮಾಣ ಮಾಡಿದ ಕೆಆರ್‌ಐಡಿಎಲ್ ಇಲಾಖೆಯ ಅಧಿಕಾರಿ ಬಸವರಾಜ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಲೀಲಾ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಪಿಎಸ್‌ಐ ಜ್ಯೋತಿ ಖೋತ, ನಿಲಯ ಮೇಲ್ವಿಚಾರಕಿ ಶಹನಾಜ ಮುದ್ದೇಬಿಹಾಳ, ನಿಲಯ ಪಾಲಕರಾದ ಐ.ಎಸ್.ಮೊರ್ಕಿ, ಎಚ್.ಎಸ್. ಬಾದವಾಡಗಿ, ಮುದ್ದೇಬಿಹಾಳ ನಿಲಯ ಮೇಲ್ವಿಚಾರಕ ಅಡಿವೆಪ್ಪ ಸೌಕಾರ, ಸಿಬ್ಬಂದಿಗಳಾದ ಯಲ್ಲಾಲಿಂಗ ಹೊಸಮನಿ, ಸಂಗಮೇಶ ಬಳಿಗಾರ, ಜ್ಯೋತಿ ಚೌದರಿ, ಅಂಬಾವತಿ ಹೊಸಮನಿ, ಗಂಗಾರಾಮ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 