ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ  Distribution of milk, fruit, bread to mentally retarded children

ಲೋಕದರ್ಶನ ವರದಿ

       ಕಂಪ್ಲಿ 15 : ಪಟ್ಟಣದ ಕೊಟ್ಟಾಲ್ ರಸ್ತೆಯ ತಹಶೀಲ್ದಾರ್ ಕಛೇರಿ ಎದುರುಗಡೆಯಲ್ಲಿರುವ ಸಮಗ್ರ ಸಾಮಾಜಿಕ ಮತ್ತು ನೈತಿಕ ಅಭಿವೃದ್ಧಿ (ಸ್ಮೈಲ್) ಸಂಸ್ಥೆಯ ಕಂಪಲಿರಾಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ದಲಿತ ಮುಖಂಡ ಮತ್ತು ಹಿರಿಯ ನಾಯಕ ಜಿ.ರಾಮಣ್ಣ ಜನ್ಮದಿನದ ಪ್ರಯುಕ್ತ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ಸೋಮವಾರ ವಿತರಿಸಲಾಯಿತು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಿ.ರಾಮಣ್ಣ ಮಾತನಾಡಿ, ಪ್ರತಿ ಬಾರಿಯೂ ಎಲ್ಲೆಲ್ಲೋ ಜನ್ಮದಿನಾಚರಣೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ನಮ್ಮ ಜನ್ಮದಿನಾಚರಣೆ ಮಾಡಿರುವುದು ಖುಷಿಯ ಜೊತೆಗೆ ನಮ್ಮ ಜನ್ಮ ಸಾರ್ಥಕವಾಯಿತು.

ಇಲ್ಲಿನ ಮಕ್ಕಳಿಗೆ ಸಹಯ ಮಾಡುವ ಮೂಲಕ ಸೇವೆ ಸಲ್ಲಿಸಲು ಮುಂದಾಗಬೇಕು. ಸಂಘ-ಸಂಸ್ಥೆ ಸೇರಿದಂತೆ ಮುಖಂಡರು ಇಲ್ಲಿನ ಮಕ್ಕಳಿಗೆ ಆಹಾರದೊಂದಿಗೆ ಸಹಕಾರ ಮಾಡಬೇಕು ಎಂದರು.ನಂತರ ಯುವ ಮುಖಂಡ ಜಿ.ಯಲ್ಲಪ್ಪ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂತಹ ಮಕ್ಕಳ ಜೊತೆಗಿನ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿದೆ. ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಿ.ರಾಮಣ್ಣ ಅವರ ಜನ್ಮದಿನದ ಪ್ರಯುಕ್ತ ಅವರ ಸಮ್ಮುಖದಲ್ಲಿ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿರುವುದು ಖುಷಿದಾಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಸಿದ್ದಪ್ಪ ಬಿ.ದೇವೇಂದ್ರ, ಹೆಚ್‌.ಶೇಖರ್, ಶ್ರೀನಿವಾಸ, ಹೆಚ್‌.ಮಂಜು, ಎನ್‌.ಗಂಗಣ್ಣ, ರವಿ, ಹೊನ್ನೂರ​‍್ಪ, ನಾಗರಾಜ, ಹೆಚ್‌.ರಾಜಶೇಖರ, ಗಂಗಾಧರ, ಹೆಚ್‌.ಚಂದ್ರ, ಮುತ್ತಣ್ಣ, ತಿಪ್ಪೇಸ್ವಾಮಿ ಸಣಾಪುರ, ಹನುಮಂತ, ಬಾಬು, ಕರಣ್ಯ(ಹುಲುಗಪ್ಪ), ಹೆಚ್‌.ಕನಕ,  ಮುಖ್ಯಗುರು ಟಿ.ಎಂ.ಬಸವರಾಜಯ್ಯ  ಶಿಕ್ಷಕಿಯರಾದ ಮೆಹಬೂಬ್ ಬೀ, ರಾಧಮ್ಮ, ಅನಿತಾ, ವಿಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು.