ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
Consuming contaminated food: 30 students rushed to hospital, stage late-night protest against author
ಬೆಳಗಾವಿ : ಹಾಸ್ಟೆಲ್ ನಲ್ಲಿ ಕಲುಸಿಯ ಆಹಾರ ಸೇವನೆ ಮಾಡಿದ ಕೆಲ ವಿಧ್ಯಾರ್ಥಿಗಳಿಗೆ ಆಸ್ಪತ್ರೆಗೆ ಅಲೇದಾಡುವ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ವಾರ್ಡನ್ ಹಾಗೂ ಮೇಲಾಧಿಕಾರಿಗಳ ವಿರುದ್ದ ವಿಧ್ಯಾರ್ಥಿಗಳು ಹಾಸ್ಟೆಲ್ ಮುಂದೆ ಪ್ರತಿಭಟನೆಗೆ ಇಳಿದ ಘಟನೆ ಮಚ್ಚೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಸರಕಾರಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ 6ರಲ್ಲಿ ರಾತ್ರಿ ಶನಿವಾರ ಸಂಭವಿಸಿದೆ.
ಮಚ್ವೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸರಕಾರಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ 6ರಲ್ಲಿನ ವಿದ್ಯಾರ್ಥಿಗಳು ಆಹಾರ ಸೇವನೆ ಮಾಡಿದ ಬಳಿಕ ಹೊಟ್ಟೆ ನೋವಿನ ಸಮಸ್ಯೆ ಎದುರಾಗುತ್ತಿದ್ದು, ಇದಕ್ಕೆ ಕಲುಸಿತ ಆಹಾರ ಸೇವನೆ ಕಾರಣ ಎಂದು ಹೇಳಲಾಗಿದೆ. ಇದರಿಂದ ಕೆಂಗೇಟ್ಟಿರುವ ವಿದ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ ಮಾಡಿ ರೋಷಿ ಹೋಗಿದ್ದಾರೆ.
ಇಷ್ಟೇಲ್ಲಾ ಆದರೂ ಇದರ ಬಗ್ಗೆ ಮೇಲಾಧಿಕಾರಿಗಳಾಗಲಿ ಅಥವಾ ವಾರ್ಡನ್ ಆಗಲಿ ಯಾವದೇ ವಿಚಾರಣೆ ಮಾಡದೆ ನಿರ್ಲಕ್ಷ್ಯ ವಹಿಸಿರುವದರಿಂದ ವಿದ್ಯಾರ್ಥಿಗಳು ರೊಚ್ವಿಗೆದ್ದಿದ್ದಾರೆ.
ಬಳಿಕ ಅಧಿಕಾರಿಗಳು ಮತ್ತು ಹಾಸ್ಟೆಲ್ ನ ವಾರ್ಡನ್ ವಿರುದ್ದ ಹಾಸ್ಟೆಲ್ ಮುಂದೆ ಶನಿವಾರ ರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ. ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಯಾವದೇ ಮೇಲಾಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ವಿಧ್ಯಾರ್ಥಿಗಳು ಮಾತನಾಡಿ, ಹಾಸ್ಟೆಲ್ ನಲ್ಲಿ ಸ್ವಚ್ಚತೆ ಇಲ್ಲ. ಸರಿಯಾದ ಆಹಾರ ಪದಾರ್ಥಗಳನ್ನು ನೀಡುವದಿಲ್ಲ. ಈ ಬಗ್ಗೆ ವಾರ್ಡನ್ ರನ್ನು ಕೇಳಿದರೆ ನಾವು ಗುತ್ತಿಗೆ ಆಧಾರದ ಮೇಲೆ ಆಹಾರ ಸರಬರಾಜು ಆಗುತ್ತದೆ. ಅವರು ಕೊಡುವ ಆಹಾರ ನಮಗೆ ಸಾಕಾಗುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಆದರೆ ವಿದ್ಯಾರ್ಥಿಗಳ ಗೋಳು ಯಾರು ಕೇಳತಾ ಇಲ್ಲ. ತಮ್ಮ ವಯಕ್ತಿಕ ಸಮಸ್ಯೆ ಹೇಳತಾರೆ ಆದರೆ ನಮ್ಮ ಸಮಸ್ಯೆ ಯಾರು ಕೇಳತಾ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಯಾವ ವಿದ್ಯಾರ್ಥಿಗಳಿಗೆ ಏನಾಗಿದೆ ಎಂದು ಕೇಳುವ ಸೌಜನ್ಯ ಇಲ್ಲ. ಹಾಸ್ಟೆಲ್ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳೊಲ್ಲ. ಇವಾಗಲೇ ಸುಮಾರು 30 ವಿಧ್ಯಾರ್ಥಿಗಳು ಊಟ ಸೇವನೆಯಿಂದ ಆಸ್ಪತ್ರೆಗೆ ಅಲೇದಾಡುತ್ತಿದ್ದಾರೆ. ಆದರು ಮೇಲಾಧಿಕಾರಿಗಳು ಆಗಲಿ ಅಥವಾ ವಾರ್ಡನ್ ಆಗಲಿ ಇದರ ಬಗ್ಗೆ ವಿಚಾರಣೆ ಮಾಡತಾ ಇಲ್ಲ. ಮೇಲಾಧಿಕಾರಿಗಳಿಗೆ ಕರೆ ಮಾಡಿದರು ಕೇರ್ ಮಾಡತಾ ಇಲ್ಲ ಎಂದು ಆರೋಪಿಸಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 