ಸರಕಾರದ ಪರಿಹಾರ ದಲಿತ ಸಂತ್ರಸ್ತರ ಕೈಗೆ ಸಿಗುತ್ತಿಲ್ಲ

ಲೋಕದರ್ಶನ ವರದಿ 

ಚಿಂಚಲಿ: ಅತ್ತ ಕುರ್ಚಿಗಾಗಿ ಕಾದಾಟ, ಇತ್ತ ಅನ್ನಕ್ಕಾಗಿ ಅಲೆದಾಟ, ಅಧಿಕಾರಿಗಳಿಗಂತ್ತು ಹೆಳೊರಿಲ್ಲ ಕೇಳೋರಿಲ್ಲ. ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ತುತ್ತು ಅನ್ನಕ್ಕಾಗಿ ಅಲೆದಾಡಿ ಅಲೆದಾಡಿ ಸರಕಾರದಿಂದ ಪರಿಹಾರ ಸಿಗದೆ ಪಟ್ಟಣ ಪಂಚಾಯತ ಕಾಯರ್ಾಲಯದ ಮುಂದೆ ನೂರಾರು ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ.

  ಹೌದು ಚಿಂಚಲಿ ಪಟ್ಟಣದಲ್ಲಿ ಕೃಷ್ಣಾ ನದಿಯ ಪ್ರವಾಹದ ನೀರಿನಿದ್ದಾಗಿ ಸಾವಿರಾರೂ ನೆರೆ ಸಂತ್ರಸ್ತರ ತಮ್ಮದುರೇ ತಮ್ಮವರನ್ನು, ಮಕ್ಕಳನ್ನು ಅಪಾರ ಆಸ್ತಿಯನ್ನು ಕಳೆದುಕೊಂಡು ಬೀದಿಪಾಲಾದವರ ಗೋಳಾಟ ಆಘಾತದಿಂದ ಚೇತರಿಸಿಕೊಳ್ಳಲಾಗದೆ ನರಳಾಡಿದ್ದಾರೆ.  ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಗಭರ್ಿಣಿಯರು, ವೃದ್ಧರು, ಮಹಿಳೆಚಿುರು ಪರದಾಟ, ದಶಕಗಳ ಕಾಲ ಕಾದಿಟ್ಟುಕೊಂಡ ಬದುಕು ಸರ್ವನಾಶವಾದವರ ದುಃಖದ ಕಟ್ಟೆಯೊಡೆದಿತ್ತು. ಸಂತ್ರಸ್ತರು ಅತಂತ್ರರಾಗಿದ್ದಾರೆ. 

  ನರೆ ತಗ್ಗಿದೆ ಆದರೆ ಬದುಕಿಗೆ ದೊಡ್ಡ ಬರೆ ಎಳೆದಿದೆ. ಬೀದಿಗೆ ಬಿದ್ದ ರೈತ, ವರ್ತಕರು ಕಾಮರ್ಿಕರು ಬದುಕು ಕಟ್ಟಿಕೊಳ್ಳಕು ಹರಸಾಹಸ ಪಡುವಂತಾಗಿದೆ. ಅಳಿದುಳಿದ ವಸ್ತುಗಳೊಂದಿಗೆ ತಮ್ಮ ಬದುಕು ರೂಪಿಸಿಕೊಳ್ಳಲು ಹೆಣಾಗಾಡುತ್ತಿರುವ ಸಂತ್ರಸ್ತರೊಂದಿಗೆ ತಾಲೂಕಾ ಆಡಳಿತ ಅಧಿಕಾರಿಗಳು ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ.

  ಕಳೆದ ಎರಡು ವಾರದಿಂದ ಕನಿಷ್ಟ ಸೌಲಭ್ಯಗಳಿಲ್ಲದೆ ಅತ್ತ ಮನೆಗಳಿಗೂ ತೆರಳಲಾಗದೇ ಜನ ಪರಿತಪಿಸುತ್ತಿದ್ದಾರೆ. ಸಾವಿರಾರು ಜನರ ಬದುಕು ಮೂರಾವಟ್ಟೆಯಾಗಿದೆ. ಮುಂದೇನು ಎಂಬ ಆತಂಕ ಸಂತ್ರಸ್ತರಲ್ಲಿ ಮನೆ ಮಾಡಿದೆ. ರಾಜಕಾರಣಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಭರವನೆ ನೀಡಿ ಹೋದಾಗಿದ್ದಾರೆ ಹೋರತ್ತಾಗಿ ಪರಿಹಾರಗ ಕೈ ಸಿಗುತ್ತಿಲ್ಲ. ಒಟ್ಟಾರೆ ಒಂದಲ್ಲಾ ಒಂದು ಸಮಸ್ಯೆ ಎದುರಾಗಿದೆ. ಸರಕರ್ಾರ ನೀಡುವ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಸಂತ್ರಸ್ತರಿ ಪ್ರತಿ ದಿನ ಗ್ರಾಮಲೇಕಾಧಿಕಾರಿ ಹಾಗೂ ಪಟ್ಟಣ ಪಂಚಾಯತ ಕಾಯರ್ಾಲಯ ಅಲೆದಾಡಿ ಬೆಸತ್ತು ಗ್ರಾಮಲೇಕಾಧಿಕಾರಿ ಕಾಯರ್ಾಲಯದ ಎಂದುರು ಸಂತ್ರಸ್ತರ ಮಹಿಳೆಯರು ಪರಿಹಾರ ಚಕ್ ಮತ್ತು  ಕಿಟ್ಗಾಗಿ ಪ್ರತಿಭಟನೆ ನಡೆಸಿದ್ದರು.

  ಇಷ್ಟಾದರೂ ಅರ್ಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ತಾಲೂಕು ಆಡಳಿತ ಮೀನಮೇಷ ಎಣಿಸುತ್ತಿದ್ದೆ. ಸಂತ್ರಸ್ತರು ತಮ್ಮ ಸೂರು ದುರಸ್ತಿ ಮಾಡಿಕೊಳ್ಳಲಾಗದೆ ಮುರಿದ ಮನೆಗಳಲ್ಲಿಯೇ ಜೀವನ ಸಾಗಿಸುವಂತಾಗಿದೆ. ಪರಿಹಾರದ ಹಣಕ್ಕೆ ಕಾದು ಕುಳಿತಿದ್ದಾರೆ ಇನ್ನಾದರೂ ಜಾಣ ನಿದ್ರೆಯಲ್ಲಿರುವ ತಾಲೂಕಾ ಆಡಳಿತ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ ಕ್ಷೇತ್ರದ ಶಾಸಕ, ಸಚಿವರು ತಾಲೂಕು ಆಡಳಿತವನ್ನು ಎಚ್ಚರಿಸಿ ಸಂತ್ರಸ್ತರ ನೆರವಿಗೆ ಸ್ಪಂದಿಸಬೇಕು.