ಮನುಷ್ಯನಲ್ಲಿ ಅಹಂಕಾರ ನಾಶವಾದಾಗ ದೇವರದರ್ಶನ : ವೈಜನಾಥ
ಶಿಗ್ಗಾವಿ 31 : ಮನುಷ್ಯನಲ್ಲಿ ಅಹಂಕಾರ ನಾಶವಾದಾಗ ದೇವರದರ್ಶನವಾಗುತ್ತದೆ ಅಲ್ಲದೇ ಮೂಲಧರ್ಮದಲ್ಲಿ ಆಚಾರ, ವಿಚಾರ, ವಿಜ್ಞಾನವಿದೆ ಎಂದುಗಂಜೀಗಟ್ಟಿ ಡಾ.ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವವೇ ಅಚ್ಚರಿ ಪಡೆಯುವ ಸಂಗತಿ ದೇಶದ ಪ್ರಯಾಗರಾಜ ಕುಂಭಮೇಳದಲ್ಲಿ ನಡೆದಿದೆ ಅಲ್ಲಿ ವಿರೋಧ ಪಕ್ಷದದವರು ವಿಷಯವನ್ನು ವಿಷಯಾಂತರ ಮಾಡಿದ್ದಾರೆ ಹಾಗೂ ನಿಜವಾದ ರಾಜಕಾರಣಿ ಯಾಗಬೇಕಾದರೆ ಆದಿತ್ಯನಾಥ ಯೋಗಿಜಿತರ ಇರಬೇಕು. ಸಾಧುಗಳು ನಿಜವಾದ ಶ್ರೀಮಂತರು, ಮನುಷ್ಯತನ್ನನ್ನು ತಾನು ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಮನುಷ್ಯನಾಗುತ್ತಾನೆ ಎಂದರು.
ಧರ್ಮಸಭೆಯಲ್ಲಿ ರಮೇಶ ಸ್ವಾಮಿಗಳು ಜ್ಣಾನಶ್ರಾಮ ಗೋನಾಳ, ಸಮ್ಮುಖವಹಿಸಿದ ಗೊರವಯ್ಯ ಮೈಲಾರ ರಾಮಪ್ಪಜ್ಜಕಾರರ್ಣಿಕರ ಆರ್ಶಿವದಿಸಿದರು.
ಸಮಿತಿಅಧ್ಯಕ್ಷ ಸುಭಾಸ ಚವ್ಹಾಣ ಮಾತನಾಡಿ ಯಾವುದೇ ಕೆಲಸ ಆಗಬೇಕಾದರೆ ಭಕ್ತಿ ಪ್ರಮುಖಕಾರಣ ಅಲ್ಲದೇ ಭಕ್ತರ ಸಮೂಹದಿಂದ ಈ ಕಾರ್ಯ ಯಶಸ್ವಿಯಾಗಿದೆ. ಅನೇಕ ದಿವಂಗತರ ಪರಿಶ್ರಮದಿಂದದೇಗುಲ ನಿರ್ಮಾಣವಾಗಿದೆ. 2-3 ದಿನದ ಕಾರ್ಯಕ್ರಮ 9 ದಿನಕ್ಕೆ ಮಾರಾ್ಡಗಿದ್ದು ಭಕ್ತರ ಸಹಕಾರದಿಂದಾಗಿದೆ. ಅಲ್ಲದೇ ಪಟ್ಟಣದ ಆರಾಧ್ಯದೇವ ಮೈಲಾರಲಿಂಗೇಶ್ವರ ಆಗಬೇಕು ಮತ್ತು ಪ್ರತಿವರ್ಷ ವಾರ್ಷಿಕೋತ್ಸವ ಮಾಡಬೇಕು ಎಂದು ಸಮಿತಿ ಸದಸ್ಯರು ಸಂಕಲ್ಪ ಮಾಡಿದ್ದಾರೆಎಂದರು.
ಪುರಸಭೆಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಾತನಾಡಿ ಅತಿಅದ್ದೂರಿಯಿಂದ ಈ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ ಧರ್ಮಸಭೆಯ ಮೂಲಕ ಎಲ್ಲರಿಗೂ ಸಿರಿ ಸಂಪತ್ತು, ಧವಸ ಧಾನ್ಯಗಳು ಲಭ್ಯವಾಗಲಿ ಎಂದು ಹಾರೈಸಿದರು.
ಕೆ.ಸಿ.ಸಿ ಬ್ಯಾಂಕ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ ಮಾತನಾಡಿಧರ್ಮದಲ್ಲಿಅಧರ್ಮತಾಂಡವಾಡುತ್ತಿದ್ದುಅದನ್ನುಧರ್ಮಸಭೆಯ ಮೂಲಕ ಶಮನ ಮಾಡಬೇಕು ಅಲ್ಲದೇ ಈ ದೇವಸ್ಥಾನಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದವರ ಕಾರ್ಯವನ್ನು ಶ್ಲಾಘಿಸಿದರು.
ಪಕ್ಕೀರ್ಪಕುಂದೂರ ಮಾತನಾಡಿ ದರ್ಮಸಭೆ ಮಾಡುವ ಉದ್ದೇಶ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ, ಪುಣ್ಯ ಮಾತ್ರಕೊನೆಯವರೆಗೂ ಇರುತ್ತದೆ ಹೊರತು ಕರ್ಮದ ಫಲ ಬಹಳ ದಿನಗಳವರೆಗೆ ಇರುವುದಿಲ್ಲ ಎಂದರು.
ಸಮಿತಿ ಸದಸ್ಯ ಮಂಜುನಾಥ ಬ್ಯಾಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಾಣವನ್ನು ಪ್ರಭಯ್ಯ ಹಿರೇಮಠ ಪಠಿಸಿದರು, ಶಿವಾನಂದ ಮಂದೆವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ನೀಡಿದರು. ಧಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನೇರವೇರಿತು.
ಈ ಸಂದರ್ಭದಲ್ಲಿ ಡಾ.ಲಕ್ಷ್ಮಣ ನಾಯಕ, ಬಸವರಾಜ ಹೆಸರೂರ, ಶಿವಪ್ರಸಾದ ಸುರಗೀಮಠ, ಪರಮೇಶ ಲಮಾಣಿ, ವಿಶ್ವನಾಥ ಹರವಿ, ಪುಟ್ಟಪ್ಪ ಕುಂದಗೋಳ, ಶಿವಾನಂದ ಗಾಣಿಗೇರ, ನಾಗರಾಜ ಪವಾರ, ಸಿ.ವ್ಹಿ.ಮತ್ತಿಗಟ್ಟಿ ಸೇರಿದಂತೆ ಭಕ್ತ ಸಮೂಹ ಉಪಸ್ಥಿತರಿದ್ದರು.ಮಂಜುನಾಥದುಭೆ ಸ್ವಾಗತಿಸಿದರು.ಉಪನ್ಯಾಸಕ ಶಶಿಕಾಂತ ರಾಠೋಡ, ಶಿಕ್ಷಕಿ ಗಂಗೂಬಾಯಿ ದೇಸಾಯಿಕಾರ್ಯಕ್ರಮ ನಿರ್ವಹಿಸಿದರು.ರಾಜು ಕೆಂಬಾವಿ ವಂದಿಸಿದರು.