ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸರಿಯಾಗಿ ನೀಡಿ: ಪಾಟೀಲ

ಕಾಗವಾಡ 31: ಸಕರ್ಾರ ನೀಡಿರುವ ಅಂಗನವಾಡಿ ಬಾಲಕ್ಪರಿಗೆ ಪೌಷ್ಟಿಕ ಆಹಾರ ಸರಿಯಾಗಿ ಮಕ್ಕಳಿಗೆ ನೀಡಿರಿ. ಕೆಲ ಸಹಾಯಕರು ಸರಿಯಾದ ಆಹಾರ ನೀಡುತ್ತಿಲ್ಲಾ ಎಂಬ ಮಾಹಿತಿ ದೊರೆತಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಹೇಳಿದರು.

ಸೋಮವಾರ ದಿ. 31ರಂದು ಕಾಗವಾಡದ ಸಕರ್ಾರಿ ವಿಶ್ರಾಂತಿ ಗ್ರಹದಲ್ಲಿ ಕಾಗವಾಡ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ನೇಮಕಗೊಂಡ ಸುರೇಶ ಕದ್ದು ಇವರಿಂದ ಸನ್ಮಾನ ಸ್ವೀಕರಿಸಿ ಶಾಸಕರು ಅಧಿಕಾರಿಗೆ ಸೂಚನೆ ನೀಡುವಾಗ ಹೇಳಿದರು.

ಶೇಡಬಾಳ ಪಶು ಚಿಕಿತ್ಸಾಲಯ ಕೇಂದ್ರದ ಅಧಿಕಾರಿ ಸುರೇಶ ಕದ್ದು ಇವರು ಕಾಗವಾಡ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ(ಸಿಡಿಪಿಒ) ಪ್ರಭಾರಿ ಅಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಅವರು ಶಾಸಕರನ್ನು ಸನ್ಮಾನಿಸಿದರು.

ಕಾಗವಾಡ ತಾಲೂಕಿನ ಒಂದು ಪುರಸಭೆ, ಎರಡು ಪಟ್ಟಣ, 45 ಗ್ರಾಮಗಳಲ್ಲಿಯ 252 ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರು, ಗಭರ್ಿಣಿಯರು, ಬಾಣಂತಿಯರು ಸಕರ್ಾರ ನೀಡುತ್ತಿರುವ ಯೋಜನೆಚಿು ಲಾಭ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಡಿಪಿಒ ಸುರೇಶ ಕದ್ದು ಶಾಸಕರಿಗೆ ಹೇಳಿದರು.

ಕಾಂಗ್ರೆಸ್ ಪಕ್ಷದಘಟಕಾಧ್ಯಕ್ಷ ವಿಜಯ ಅಕಿವಾಟೆ, ಮಾಜಿ ಅಧ್ಯಕ್ಷ ಸುಭಾಷ ಕಠಾರೆ, ಉಗಾರ ತಾ.ಪಂ. ಸದಸ್ಯ ವಸಚಿತ ಖೋತ, ಶೇಡಬಾಳದ ಮಾಜಿ ಗ್ರಾಪಂ. ಅಧ್ಯಕ್ಷ ಅಣ್ಣಾಸಾಹೇಬ ಹಂಡಗೆ, ಅಣ್ಣಾಗೌಡಾ ಪಾಟೀಲ, ಭರತೇಶ ಪಾಟೀಲ, ಅಮೀತ ಪಾಟೀಲ, ಸುಭಾಷ ಅಥಣಿ, ಸ್ಭೆರಿದಂತೆ ಅನೇಕರು ಇದ್ದರು.