ನೀರು, ಮೇವು, ಜನರಿಗೆ ಕುಡಿಯುವ ನೀರು ಪೂರೈಸಲು ಸಿದ್ಧರಾಗಿರಿ'

ಲೋಕದರ್ಶನ ವರದಿ

ಕಾಗವಾಡ 26: ವಿಧಾನಸಭಾ ಕ್ಷೇತ್ರದ ಮದಭಾವಿ ಮತ್ತು ಅನಂತಪುರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬರುವ 30 ಗ್ರಾಮಗಳಲ್ಲಿಯ ಜನ ಜಾನುವಾರಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಬಾರದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಆದೇಶ ನೀಡಿದ್ದಾರೆ.

ಮಂಗಳವಾರ ರಂದು ತಾಲೂಕಿನ ಎಲ್ಲ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಸಭೆಯಲ್ಲಿ ತಹಶೀಲ್ದಾರ, ನೀರಾವರಿ, ಕೃಷಿ, ಪಂಚಾಯತಿ, ಜಿಲ್ಲಾ ಪಂಚಾಯತಿ ಇಲಾಖೆಯ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು.

ಸಭೆಯಲ್ಲಿ ಅಥಣಿ ಉಪತಹಶೀಲ್ದಾರ ಆರ್.ಆರ್.ಬುರಲಿ ಇವರು ಮಾಹಿತಿ ನೀಡುವಾಗ, ಈಗಾಗಲೇ ಮೇವಿನ ಬ್ಯಾಂಕ್ ಜಕ್ಕಾರಟ್ಟಿ, ಶಿರೂರ, ಖೀಳೆಗಾಂವದಲ್ಲಿ ಪ್ರಾರಂಭಿಸಿದ್ದು, ಕುಡಿಯುವ ನೀರಿಗಾಗಿ ಟ್ಯಾಂಕರ್ಗಳು ಪ್ರಾರಂಭಿಸಿದ್ದು ಇದರಲ್ಲಿ ಜಂಬಗಿ-2, ಶಿರೂರ ಮತ್ತು ಅಜೂರ ಗ್ರಾಮಗಳಲ್ಲಿ ಟ್ಯಾಂಕರ್ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಬೇರೆ ಬೇರೆ ಗ್ರಾಮಗಳಿಂದ ಟ್ಯಾಂಕರ್ ಪ್ರಾರಂಭಿಸಲು  ಬೇಡಿಕೆ ಬರುತ್ತಿವೆ ಎಂದು ಹೇಳಿದರು.

30 ಗ್ರಾಮಗಳಿಗೆ ನೀರು ಮತ್ತು ಮೇವು ಪೂರೈಸಿರಿ: ಅನಂತಪುರ ಮತ್ತು ಮದಭಾವಿ ಜಿಪಂ ವ್ಯಾಪ್ತಿಯಲ್ಲಿ ಉರಿ-ಬಿಸಿಲಿನಲ್ಲಿ ನೀರಿನ ಸಮಸ್ಯೆ ಗಂಭೀರಗೊಳ್ಳುತ್ತಿದೆ. ಎಲ್ಲ ಗ್ರಾಪಂ, ತಾಪಂ, ಜಿಪಂ ಚುನಾಯಿತ ಪ್ರತಿನಿಧಿಗಳು, ಪಿಡಿಒ, ಗ್ರಾಮದ ಮುಖಂಡರು ಗಂಭೀರವಾದ ಬರ ಎದುರಿಸಲು ಯಾವುದೇ ಪಕ್ಷ, ರಾಜಕೀಯ ಮಾಡದೆ ಎದುರಿಸಿರಿ. ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಕರ್ಾರ ನೀಡಿದ ಆದೇಶದಂತೆ ನೀರು, ಮೇವು ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸಿದ್ಧರಾಗಿರಿ. ಇದರಲ್ಲಿ ಅಧಿಕಾರಿಗಳು ಬೇಶಿಸ್ತವಾದರೆ ಸಹಿಸುವದಿಲ್ಲಾ ಎಂಬ ಎಚ್ಚರಿಕೆ ಶಾಸಕ ಶ್ರೀಮಂತ ಪಾಟೀಲ ನೀಡಿದರು.

ಸಭೆಯಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ, ಉಪತಹಸೀಲ್ದಾರ ರಾಜು ಬುರಲಿ, ನೀರಾವರಿ ಇಲಾಖೆಯ ಎ.ಟಿ.ಅಸ್ಕಿ, ಅಥಣಿ ನೀರಾವರಿ ಇಲಾಖೆಯ ಮುಖ್ಯಾಧಿಕಾರಿ ರಾಠೋಡ, ಕಾರ್ಯಪಾಲ ಅರುಣ ಯಲಗುದ್ರಿ, ಕೃಷಿ ಇಲಾಖೆ ನಿದರ್ೇಶಕರು, ಹಿರೇಮಠ, ತೋಟಗಾರಿಕೆ ಇಲಾಖೆಯ ಚುರಮುರಿ ಪಾಲ್ಗೊಂಡಿದ್ದರು.

ಕಾರ್ಯಕರ್ತರಾದ ಜಿಪಂ ಸದಸ್ಯ ಆರ್.ಎಂ.ಪಾಟೀಲ, ಈಶ್ವರ ಕುಂಬಾರೆ, ಪ್ರಶಾಂತ ಅವಳೆಕರ, ಆರ್.ಐ.ನಾಯಿಕ, ಎಂ.ಎಸ್.ಕಾಳೆ, ವಿಜಯ ಕಾಂಬಳೆ, ಶಂಕರ ದೇಸಾಯಿ, ಧೊಂಡಿರಾಮ ಅವಳೆಕರ, ಬಬನ ಜಾಧವ, ದಿಲೀಪ ಪವಾರ, ಆನಂದ ಭಂಡಾರೆ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.