ಹೈದರಾಬಾದ್, ಏ.4- ಹತ್ತನೇ ತರಗತಿ ಪರೀಕ್ಷೆಗೆ ಓದದೆ ಪಬ್ ಜೀ ವಿಡಿಯೋ ಗೇಮ್ ಆಡುತ್ತಿದ್ದುದ್ದಕ್ಕೆ ಪೋಷಕರು ಬೈದಿದ್ದರಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದರೊಂದಿಗೆ ಈ ಮಾರಕ ಗೇಮ್ಗೆ ಮತ್ತೊಬ್ಬ ಬಾಲಕ ಬಲಿಯಾದಂತಾಗಿದೆ.
ತೆಲಂಗಾಣದ ಮಲ್ಕಾಜ್ಗಿರಿಯ ವಿಷ್ಣುಪುರಿ ಎಕ್ಸ್ಟೆನ್ಷನ್ ನಿವಾಸಿ ಕಲ್ಲಕುರಿ ಸಾಂಬಶಿವ(16)ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾಥರ್ಿ.
ಮಲ್ಕಾಜ್ ಗಿರಿಯ ಗೌತಮಿ ಶಾಲೆಯ ವಿದ್ಯಾಥರ್ಿಯಾಗಿದ್ದ ಸಾಂಬಶಿವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ವಿದ್ಯಾಥರ್ಿ ತಂದೆ ಅರ್ಚಕರಾಗಿರುವ ಭರತ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಫೋನ್ನಲ್ಲಿ ಪಬ್ ಜೀ ಗೇಮ್ ಆಡುತ್ತಿದ್ದ ಕಾರಣ ಸಾಂಬಶಿವನ ತಾಯಿ ಉಮಾದೇವಿ ಬೈದಿದ್ದಾರೆ. ಇದರೊಂದ ಮನನೊಂದು ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಈ ಅಪಾಯಕಾರಿ ಗೇಮನ್ನು ನಿಷೇಧಿಸಿ ಜನರಿಗೆ ಅದರಲ್ಲೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದರೂ ಕೂಡ ಇಂತಹ ಘಟನೆಗಳು ಮರಕಳುಹಿಸುತ್ತಿರುವುದು ದುರದೃಷ್ಟಕರ.