ಲೋಕದರ್ಶನ ವರದಿ
ಹೊಸಪೇಟೆ 08: ತುಂಗಾಭದ್ರಾ ಮಂಡಳಿ (ಟಿ.ಬಿ. ಬೋಡರ್್) ಯ ಕಾರ್ಯದಶರ್ಿ ಜಿ. ನಾಗಮೋಹನ್ ಮಂಡಳಿ ಅಧೀನದ ಸಾರ್ವಜನಿಕ ಆಸ್ತಿಗಳನ್ನು ಭೇಟಿ ನೀಡಿ ಪರಿಶೀಲಿಸಿ ಕೈರಳಿ ಸಂಘ, ತೆಲುಗು ಸಂಘಂ ಭೇಟಿ ನೀಡಿದ ನಂತರ ಕನರ್ಾಟಕ ರಾಜ್ಯ ತಮಿಳರ ಸಂಘಂ ಕಛೇರಿ ಪರಿಶೀಲಿಸಿದರು. ಕಟ್ಟಡ ಪರಿಶೀಲನೆ ಸಂದರ್ಭ ಕಾರ್ಯದಶರ್ಿಗೆ ಹೂಮಾಲೆ ಹಾಕಿ ಸ್ವಾಗತಿಸಿದ ಕನರ್ಾಟಕ ರಾಜ್ಯ ತಮಿಳರ ಸಂಘಂನ ಜಿಲ್ಲಾ ಉಪಾಧ್ಯಕ್ಷ ಅಣ್ಣಾಮಲೈ, ಹೊಸಪೇಟೆ ತಾಲೂಕಿನಲ್ಲಿ ಸರಿಸುಮಾರು 24 ಸಾವಿರ ಜನಸಂಖ್ಯೆ ನಮ್ಮ ತಮಿಳು ಸಮಾಜ ಹೊಂದಿದ್ದರೂ ಸಹ ತಮಿಳರಿಗಾಗಿ ಇದೊಂದೇ ಕಟ್ಟಡವಿದ್ದು, ತಮಿಳರ ಉನ್ನತಿಗಾಗಿ ಶ್ರಮಿಸಲು ತುಂಗಾಭದ್ರಾ ಮಂಡಳಿ ಸಹಕರಿಸಬೇಕು ಎಂದು ವಿನಂತಿಸಿದರು.
ವಿಸ್ತಾರವಾದ ಜಾಗದಲ್ಲಿ ಚಿಕ್ಕದೊಂದು ಕಟ್ಟಡ ಮಾತ್ರ ಕಛೇರಿ ಬಳಕೆಗೆ ಉಪಯೋಗಿಸಲಾಗುತ್ತಿದ್ದು, ತಮಿಳರ ಮಕ್ಕಳು ಶಿಕ್ಷಣ, ಉದ್ಯೋಗದಲ್ಲಿ ಔನ್ನತ್ಯ ಕಾಣಬೇಕೆಂದರೆ ಅವರಿಗೆ ಕಂಪ್ಯೂಟರ್ ಶಿಕ್ಷಣ, ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಕಟ್ಟಡ, ಶೆಡ್ ಮೂಲಸೌಕರ್ಯಗಳನ್ನು ನಿಮರ್ಿಸಲು ಅವಶ್ಯವಾದ ಅನುದಾನಗಳನ್ನು ಟಿ.ಬಿ. ಬೋಡರ್್ ಒದಗಿಸಬೇಕು ಎಂದು ಕನರ್ಾಟಕ ರಾಜ್ಯ ತಮಿಳರ ಸಂಘಂನ ರಾಜ್ಯ ಉಪಾಧ್ಯಕ್ಷ ಎ. ಅಳಗಿರಿ ಸ್ವಾಮಿ ಕಾರ್ಯದಶರ್ಿಯನ್ನು ಕೋರಿದರು. ಸ್ಪಂದಿಸಿದ ಕಾರ್ಯದಶರ್ಿ ನಾಗಮೋಹನ್ ಅನುದಾನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು. ತಮಿಳು ಸಮಾಜದ ಪ್ರವರ್ಧಮಾನಕ್ಕೆ ಅಗತ್ಯವಾದ ತುತರ್ು ಅಭಿವೃದ್ಧಿ ಕಾರ್ಯಗಳನ್ನು ಸಂಘವೇ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕನರ್ಾಟಕ ರಾಜ್ಯ ತಮಿಳರ ಸಂಘಂನ ಜಿಲ್ಲಾ ಕಾಯರ್ಾಧ್ಯಕ್ಷ ಪ.ಯ. ಗಣೇಶ, ಖಜಾಂಚಿ ಪಿ. ಷಣ್ಮುಗಂ, ಪಿ. ಧರ್ಮಲಿಂಗಂ ಉಪಸ್ಥಿತರಿದ್ದರು. ಕಾರ್ಯದಶರ್ಿಗಳು ಭೇಟಿ ನೀಡುವ ಕಾರಣಕ್ಕೆ ಟಿ.ಬಿ. ಬೋಡರ್್ ಅಧಿಕಾರಿ ವರ್ಗ ನಾಲ್ಕೈದು ಜೀಪ್ಗಳಲ್ಲಿ ಆಗಮಿಸಿದ್ದರು. ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.